ಕೇಂದ್ರ ಮತ್ತು ರಾಜ್ಯ ಸರಕಾರಗಳು ಅಲ್ಪಸಂಖ್ಯಾತರ ಅಭಿವೃದ್ದಿಗೆ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದ್ದು, ಕ್ರೈಸ್ತರು ಸರಕಾರದ ಸವಲತ್ತು ಬಳಕೆಗೆ ಆಗತ್ಯವಿರುವ ಮಾಹಿತಿ ನೀಡುವ ಸಲುವಾಗಿ ಕ್ರೈಸ್ತರೊಂದಿಗೆ ನಾವು ಎಂಬ ಕರ್ಯಕ್ರಮವನ್ನು ಹಾಲಪ್ಪ ಪೌಂಡೇಶನ್ ಅಡಿಯಲ್ಲಿ ಆಯೋಜಿಸಲಾಗಿದೆ ಎಂದು ಕೌಶಲ್ಯಾಭಿವೃದ್ದಿ ನಿಗಮದ ಮಾಜಿ ಅಧ್ಯಕ್ಷ ಮುರುಳೀಧರ ಹಾಲಪ್ಪ ತಿಳಿಸಿದ್ದಾರೆ.
ನಗರದ ಸಿಎಸ್ಐ ಲೇಔಟ್ನ ಸಿಎಸ್ಐ ಬಿಷಪ್ ಗೀಲ್ ಹಾಲ್ ನಲ್ಲಿ ಹಾಲಪ್ಪ ಪ್ರತಿಷ್ಠಾನವತಿಯಿಂದ ಆಯೋಜಿಸಿದ್ದ ಕ್ರೈಸ್ತರೊಂದಿಗೆ ನಾವು ಅಲ್ಪಸಂಖ್ಯಾತರ ಯೋಜನೆಗಳ ಅರಿವು ಕರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಅಲ್ಪಸಂಖ್ಯಾತರ ಸಮುದಾಯದಲ್ಲಿ ಕ್ರೈಸ್ತರು ಸರಕಾರಿ ಸವಲತ್ತುಗಳಿಗೆ ರ್ಜಿ ಸಲ್ಲಿಸುವುದು ಕಡಿಮೆ.ಯುವಜನರ ಅಭಿವೃದ್ದಿಗೆ ದೊರೆಯುವ ಸಾಲ,ಸೌಲಬ್ಯಗಳ ಬಗ್ಗೆ ಮಾಹಿತಿ ನೀಡುವ ಉದ್ದೇಶದಿಂದ ಅಲ್ಸಸಂಖ್ಯಾತರ ಅಭಿವೃದ್ದಿ ನಿಗಮ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಹಾಗೂ ರ್ನಾಟಕ ಉದ್ಯಮಿಶೀಲತಾ ಅಭಿವೃದ್ದಿ ಕೇಂದ್ರ(ಸಿಡಾಕ್) ಅಧಿಕಾರಿಗಳಿಂದ ಮಾಹಿತಿ ನೀಡುವ ಕರ್ಯಕ್ರಮ ಇದಾಗಿದೆ ಎಂದರು.
ಹಾಲಪ್ಪ ಪೌಂಡೇಶನ್ ಅಡಿಯಲ್ಲಿ ಕ್ರೈಸ್ತರೊಂದಿಗೆ ನಾವು ಎಂಬ ಕಾರ್ಯಕ್ರಮ
Leave a comment
Leave a comment