ವಿಶ್ವಾದ್ಯಂತ ನೀರಿನ ಕೊರತೆಯ ಗಂಭೀರ ಸಮಸ್ಯೆ ಎದುರಾಗಿದ್ದು, ಜೀವ ಸಂಕುಲದ ಉಗಮ,ಅಸ್ತಿತ್ವ ಮತ್ತು ಬೆಳವಣಿಗೆಗೆ ಕಾರಣವಾಗಿರುವ ನೀರನ್ನು ಸಮರ್ಪಕವಾಗಿ ನಿರ್ವಹಿಸುವುದರ ಮೂಲಕ ಸಂರಕ್ಷಿಸಬೇಕು ಎಂದು ರಾಜ್ಯಕಾವೇರಿ ನೀರಾವರಿ ನಿಗಮದ ವ್ಯವಸ್ಥಾಪಕ ನಿರ್ದೇಶಕರಾದ ಶಂಕರೇಗೌಡ ಹೇಳಿದರು.
ನಗರದ ಶ್ರೀ ಸಿದ್ಧಾರ್ಥ ತಾಂತ್ರಿಕ ಮಹಾವಿದ್ಯಾಲಯದಲ್ಲಿ “ಸಿವಿಲ್ ಇಂಜಿನಿಯರಿAಗ್ ವಿಭಾಗ, ಬೆಂಗಳೂರು ಕೇಂದ್ರದ ಇಂಡಿಯಾ ಕನ್ಸಲ್ಟಿಂಗ್ ಸಿವಿಲ್ ಇಂಜಿನಿಯರಿAಗ್ ಮತ್ತು ಇಂಡಿಯಾ ಕಾಂಕ್ರೀಟ್ ಇನ್ಸ್ಟಿಟ್ಯೂಟ್ ಸಹಯೋಗದೊಂದಿಗೆ ಆಯೋಜಿಸಿರುವ ‘ಉದಯೋನ್ಮುಖ ಪ್ರವೃತ್ತಿಗಳು ಮತ್ತು ಸುಸ್ಥಿರ ಬೆಳವಣಿಗೆಗಳು” ವಿಷಯ ಕುರಿತ ಎರಡು ದಿನಗಳ ಅಂತಾರಾಷ್ಟಿçÃಯ ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಇಂದಿನ ದಿನದಲ್ಲಿ ಪದವಿಯೊಂದೆ ಮುಖ್ಯವಲ್ಲ. ವೃತ್ತಿಪರ ಕೌಶಲ್ಯ, ವಿಷಯದ ಬಗ್ಗೆ ಆಳವಾದ ಜ್ಞಾನ ಸಂಪತ್ತಿನ ಜೊತೆಗೆ ಜನಪರ ಕಾಳಜಿ ಅತ್ಯಗತ್ಯ. ಮುಂದಿನ ದಿನದಲ್ಲಿ ನೀರಿಗೆಉಂಟಾಗಲಿರುವ ಬಿಕ್ಕಟ್ಟು ಮತ್ತು ಸಂಘರ್ಷಗಳಿಗೆ ಪರಿಹಾರ ಕಂಡುಕೊಳ್ಳವ ಅಗತ್ಯವಿದೆ ಎಂದು ಶಂಕರೇಗೌಡ ನುಡಿದರು.
ಜನಜೀವನದಲ್ಲಿನ ಎಲ್ಲ ಚಟುವಟಿಕೆಗಳಲ್ಲಿ ಸಿವಿಲ್ ಇಂಜಿನಿಯರಿAಗ್ ತಂತ್ರಜ್ಞಾನದ ಅನಿವಾರ್ಯತೆ ಮತ್ತು ಬಳಕೆ ಬಗ್ಗೆ ವಿದ್ಯಾರ್ಥಿಗಳ ಸಂಶೋಧನೆಗಳನ್ನು ಕೈಗೊಳ್ಳಬೇಕು.ಇದರಿಂದ ಬರುವ ಫಲಿತಾಂಶಗಳು ಜನರಿಗೆ ಉಪಯೋಗವಾಗಬೇಕು ಎಂದು ಶಂಕರೇಗೌಡ ನುಡಿದರು.
ಸಾಹೇ ವಿಶ್ವವಿದ್ಯಾಲಯದ ಉಪಕುಲಪತಿ ಡಾ.ಕೆ.ಬಿ.ಲಿಂಗೇಗೌಡ ಮಾತನಾಡಿ, ಜೀವನದಲ್ಲಿ ಕನಸೊಂದಿದ್ದರೆ ಏನು ಬೇಕಾದರು ಸಾಧಿಸಬಹುದು. ವಿದ್ಯಾರ್ಥಿಗಳು ದೊಡ್ಡ ದೊಡ್ಡ ಕನಸು ಕಟ್ಟಿಕೊಳ್ಳಿ. ಕನಸಿನೆಡೆಗೆ ನಿಮ್ಮ ಪಯಣ ಸಾಗಲಿ. ವೃತ್ತಿಯನ್ನು ಇಷ್ಟಪಟ್ಟು ಶ್ರಮಿಸಿದಾಗ ಮಾತ್ರ ಉನ್ನತ ಮಟ್ಟಕ್ಕೆ ಹೋಗಲು ಸಾಧ್ಯ ಎಂದು ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.
ಸಮ್ಮೇಳನದಲ್ಲಿ ಅಧ್ವೆöÊತ ಸಂಸ್ಥಾಪಕರಾದ ಬಿ.ಎಸ್.ಸಿ.ರಾವ್ ಮಾತನಾಡಿ, ಕಲಿಕೆ ಎಂಬುವುದು ಸಾಗರದಷ್ಟು. ಇಂದಿನ ದಿನದಲ್ಲಿ ನಾವು ಹೊಸ ವಿಷಯಗಳನ್ನು ಪ್ರತಿನಿತ್ಯ ಕಲಿಯಬೇಕು.ಇಂಜಿನಿಯರ್ಗಳ ನಿಜವಾದ ಕಲಿಕೆ ಆರಂಭವಾಗುವುದು ವೃತ್ತಿಜೀವನದಲ್ಲಿ ಹಾಗಾಗಿ ಸಿಕ್ಕಿರುವ ಯಾವ ಅವಕಾಶಗಳನ್ನು ಬಿಡದೆ ಸದುಪಯೋಗ ಪಡಿಸಿಕೊಳ್ಳಿ ಎಂದರು.
ವಿಶ್ವಾದ್ಯಂತ ನೀರಿನ ಕೊರತೆಯ ಗಂಭೀರ ಸಮಸ್ಯೆ ಎದುರಾಗಿದೆ
Leave a comment
Leave a comment