ತುಮಕೂರು:ಭಾರತೀಯ ಕ್ರಿಕೆಟ್ ಸಂಸ್ಥೆ ಬಿಸಿಸಿಐನ ವತಿಯಿಂದ ಆಯೋಜಿಸಿರುವ ಐಪಿಎಲ್-2024ರ ಸೆಮಿ ಫೈನಲ್ ಮತ್ತು ಫೈನಲ್ ಪಂದ್ಯಗಳನ್ನು ವೀಕ್ಷಕಿಸಲು ಟಾಟಾ ಐಪಿಎಲ್ ಫ್ಯಾನ್ ಪಾರ್ಕ್ವತಿಯಿಂದ ಸರಕಾರಿ ಜೂನಿಯರ್ ಕಾಲೇಜು ಮೈದಾನದಲ್ಲಿ 32*18 ಅಡಿ ಅಳತೆ ದೊಡ್ಡ ಪರದೆಯ ವ್ಯವಸ್ಥೆ ಮಾಡಲಾಗಿದೆ ಎಂದು ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇಷನ್ ತುಮಕೂರು ಜಿಲ್ಲಾ ಉಸ್ತುವಾರಿ ಸುನೀಲ್ ಪಾಟೀಲ್ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು,ಟಾಟಾ ಐಪಿಎಲ್ 2024ರ ಕ್ರೆಜ್ ಹೆಚ್ಚಿಸುವ ಸಲುವಾಗಿ ಈ ವರ್ಷ ದೇಶದ ಐವತ್ತು ಕಡೆಗಳಲ್ಲಿ ಈ ರೀತಿಯ ದೊಡ್ಡ ಪರದೆಗಳ ಮೂಲಕ ಐಪಿಎಲ್ ಫ್ಯಾನ್ಗಳಿಗೆ ಮನರಂಜನೆ ನೀಡಲು ವ್ಯವಸ್ಥೆ ಮಾಡಿದೆ. ಮೇ.24ರಂದು ನಡೆಯುವ ಸೆಮಿಫೈನಲ್ ಮತ್ತು ಮೇ.26 ರಂದು ನಡೆಯುವ ಫೈನಲ್ ಮ್ಯಾಚ್ನ್ನು ದೊಡ್ಡ ಪರದೆಯ ಮೇಲೆ 4-5 ಸಾವಿರ ಜನರಿಗೆ ವೀಕ್ಷಿಸಲು ವ್ಯವಸ್ಥೆ ಮಾಡಿದೆ ಎಂದರು.
ಐಪಿಎಲ್ ಫ್ಯಾರ್ಕ್ ಆಯೋಜನೆ ಮಾಡಿರುವ ಮೇಗಾ ಸ್ಕ್ರೀನಿಂಗ್ ಮನರಂಜನಾ ಆಟಕ್ಕೆ ಉಚಿತ ಪ್ರವೇಶವಿದ್ದು, ಆಟ ವೀಕ್ಷಿಸಲು ಬರುವ ಫ್ಯಾನ್ಗಳಿಗೆ ಕೂಪನ್ ನೀಡಲಾಗುವುದು. ಕೂಫನ್ನಲ್ಲಿ ಡ್ರಾನಲ್ಲಿ ವಿಜೇತ ಒಬ್ಬರಿಗೆ ಅಂತರಾಷ್ಟ್ರೀಯ ಆಟಗಾರರು ಸಹಿ ಮಾಡಿರುವ ಟಿ ಶರ್ಟ್ ದೊರೆಯಲಿದೆ. ದೊಡ್ಡ ಪರದೆಯ ಮೇಲೆ ಐಪಿಎಲ್ ಸೆಮಿ ಫೈನಲ್ ಮತ್ತು ಫೈನಲ್ ಮ್ಯಾಚ್ಗಳನ್ನು ವೀಕ್ಷಿಸುವುದರಿಂದ ಸ್ಟೇಡಿಯಂನಲ್ಲಿ ನೋಡಿದ ಅನುಭವವನ್ನೇ ಕೊಡಲಿದೆ.ಅದಕ್ಕೆ ಬೇಕಾದ ಎಲ್ಲಾ ರೀತಿಯ ಡಿ.ಜೆ., ಸೌಂಡ್ಸಿಸ್ಟಮ್ ಎಲ್ಲವನ್ನು ಟಾಟಾ ಐಪಿಎಲ್-2024 ಫ್ಯಾನ್ ಪಾರ್ಕು ವ್ಯವಸ್ಥೆ ಮಾಡಿದೆ.ಹೆಚ್ಚಿನ ಜನರು ಜೂನಿಯರ್ ಕಾಲೇಜು ಮೈದಾನಕ್ಕೆ ಭೇಟಿ ನೀಡಿ, ದೊಡ್ಡ ಪರದೆಯ ಮೇಲೆ ಐಪಿಎಲ್ ಟೂರ್ನಿ ವೀಕ್ಷಿಸುವ ಮೂಲಕ ಯಶಸ್ವಿಗೊಳಿಸುವಂತೆ ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ಆನಂತ ದತ್ ಬಿಸಿಸಿಐ ನ ಕ್ರಿಕೆಟ್ ವ್ಯವಸ್ಥಾಪಕ ಮತ್ತಿತರರು ಪಾಲ್ಗೊಂಡಿದ್ದರು.