ತುಮಕೂರು- ನಗರದ ಸಿ.ಎಸ್.ಐ. ಲೇಔಟ್ ಸಮೀಪವಿರುವ ಡಾ.ಅಗರ್ ವಾಲ್ಸ್ ಕಣ್ಣಿನ ಆಸ್ಪತ್ರೆ ವತಿಯಿಂದ ನೇತ್ರದಾನದ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ವಾಕಥಾನ್ ನಡೆಸಲಾಯಿತು.
ಆಸ್ಪತ್ರೆಯ ಮುಖ್ಯಸ್ಥರಾದ ಡಾ. ಗಿರೀಶ್ ರೆಡ್ಡಿ ಜೆ.ಸಿ. ಮಾತನಾಡಿ, ಕಣ್ಣಿನ ಪೊರೆಗಳು, ವಕ್ರೀಕರಣ ದೋಷಗಳು, ಗ್ಲೋಕೋಮ ಸೇರಿದಂತೆ ಕುರುಡುತನ, ದೃಷ್ಟಿ ಹೀನತೆಯು ಸಾಮಾನ್ಯ ಕಾರಣವಾಗಿದೆ. ಭಾರತದಲ್ಲಿ ನೇತ್ರದಾನ ಅಗತ್ಯತೆಯನ್ನು ಸಾರ್ವಜನಿಕರಿಗೆ ತಿಳಿಸಬೇಕಾಗಿದೆ. ಕಾರ್ನಿಯಲ್ ಕುರುಡುತನ ಹೊಂದಿರುವ ವ್ಯಕ್ತಿಗಳಿಗೆ ಕಾರ್ನಿಯಲ್ ಟ್ರಾನ್ಸ್ ಪ್ಲಾಂಟೇಶನ್, ಶಸ್ತ್ರಚಿಕಿತ್ಸೆಯ ಮೂಲಕ ಕ್ರಿಯಾತ್ಮಕ ದೃಷ್ಟಿಯನ್ನು ಮರಳಿ ಪಡೆಯುವ ಸಾಧ್ಯತೆ ಇದೆ ಎಂದು ಹೇಳಿದರು.
ಈ ವಾಕಥಾನ್ನಲ್ಲಿ ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳು, ಆರೋಗ್ಯ ಕಾರ್ಯಕರ್ತರು, ಅರೆ ವೈದ್ಯಾಧಿಕಾರಿಗಳು ವೈದ್ಯಕೀಯ ಸಿಬ್ಬಂದಿ ಭಾಗವಹಿಸಿದ್ದರು.
ನೇತ್ರದಾನದ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ವಾಕಥಾನ್
Leave a comment
Leave a comment