ವಾಡಿ: ರೈಲು ಪ್ರಯಾಣಿಕರನ್ನು ದೋಚುತ್ತಿದ್ದ ಕಳ್ಳನನ್ನು ವಾಡಿ ರೈಲು ನಿಲ್ದಾಣ ಠಾಣೆ ಪೊಲೀಸರು ಬಂಧಿಸಿ, ಚಿನ್ನಾಭರಣ ವಶಪಡಿಸಿಕೊಂಡಿದ್ದಾರೆ. ಡಿವೈಎಸ್ಪಿ ಲೋಕೇಶಪ್ಪ, ಸಿಪಿಐ ಬಸವರಾಜ ತೇಲಿ ಇದ್ದರು.
ರೈಲು ನಿಲ್ದಾಣದ ಪ್ಲಾಟ್ ಫಾರ್ಮ್ ಮತ್ತು ರೈಲು ಬೋಗಿಗಳಲ್ಲಿ ಪ್ರಯಾಣಿಕರ ಬ್ಯಾಗ್ ಕಸಿದುಕೊಂಡು, ಮೈಮೇಲಿದ್ದ ಚಿನ್ನಾಭರಣ ದೋಚುತ್ತಿದ್ದ ಕಳ್ಳನನ್ನು ವಾಡಿ ರೈಲ್ವೆ ಪೊಲೀಸ್ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಕಲಬುರಗಿ ನಗರದ ಮಿಜಗೋರಿ ಕಟ್ಟಾ ಬಡಾವಣೆ ನಿವಾಸಿ, 19 ವರ್ಷದ ಇಮ್ರಾನ್ ಸುಫಿಯಾನ್ ಬಂಧಿತ ಆರೋಪಿ. ವಿವಿಧ ರೈಲು ನಿಲ್ದಾಣಗಳಲ್ಲಿ ಏಕಾಂಗಿ ಪ್ರಯಾಣಿಕರನ್ನೇ ಹೊಂಚು ಹಾಕುತ್ತಿದ್ದ ಈತ ಪ್ರಯಾಣಿಕರ ಗಮನ ಬೇರೆಡೆ ಸೆಳೆದು ಬ್ಯಾಗ್ ಮತ್ತು ಚಿನ್ನಾಭರಣಗಳನ್ನು ಕಸಿದುಕೊಂಡು ಪರಾರಿಯಾಗುತ್ತಿದ್ದ
ಈ ಕುರಿತು ರೈಲು ಪ್ರಯಾಣಿಕರು
ನೀಡಿದ ದೂರಿನ ಮೇರೆಗೆ ಕಳ್ಳನ ಬಂಧನಕ್ಕೆ ಬಲೆ ಬೀಸಿದ ಡಿವೈಎಸ್ ಪಿ ಲೋಕೇಶಪ್ಪ ಸಿಪಿಐ ಬಸವರಾಜ ತೇಲಿ, ಪಿಎಸ್ಐ ಮಹ್ಮದ್ ಪಾಷಾ, ಎಎಸ್ಐ ಅನಿತಾ ಸ್ವಾಮಿ, ಸಿಬ್ಬಂದಿ ರಾಜನಾಯಕ, ರಫೀಕ್, ಬಾಬಾಸಾಬ್, ಬಸವರಾಜ ಅವರನ್ನೊಳಗೊಂಡ ತನಿಖಾ ತಂಡ ಕಳ್ಳನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
ಬಂತ ಆರೋಪಿಯಿಂದ 2ಲಕ್ಷ ರೂ. ಮೌಲ್ಯದ 25ಗ್ರಾಂ ಚಿನ್ನಾಭರಣ, 6000ರೂ. ಮೌಲ್ಯದ ಬೆಳ್ಳಿ ಆಭರಣ, ಒಂದು ಮೊಬೈಲ್ ಸೇರಿದಂತೆ ಒಟ್ಟು 3.1 ಲಕ್ಷರೂ.ಮೌಲ್ಯದ ಚಿನ್ನಾಭರಣವನ್ನು ವಶಕ್ಕೆ ಪಡೆದಿರುವುದಾಗಿ ಸ್ಥಳೀಯ ರೈಲು ನಿಲ್ದಾಣ ಠಾಣೆ ಪಿಎಸ್