ಮಹಿಳೆಯರ ಮೇಲೆ ನಿರಂತರವಾಗಿ ನಡೆಯುತ್ತಿರುವ ದೌರ್ಜನ್ಯ, ದಬ್ಬಳಿಕೆಗಳು ಕೊನೆಗಾಣಬೇಕಾದರೆ ಮಹಿಳೆಯರು ಸಂಘಟಿತರಾಗಿ ಹೋರಾಟ ನಡೆಸಬೇಕು ಎಂದು ಭಾರತೀಯ ಮಹಿಳಾ ಒಕ್ಕೂಟದ ಎನ್.ಎಫ್.ಐ.ಡಬ್ಲೂö್ಯ ರಾಜ್ಯಾಧ್ಯಕ್ಷೆ ಎ. ಜ್ಯೋತಿ ಕರೆ ನೀಡಿದರು.
ಅವರು ನಗರದ ಉಪ್ಪಾರಹಳ್ಳಿಯಲ್ಲಿರುವ ಕಾಂ|| ಟಿ.ಆರ್. ರೇವಣ್ಣ ಭವನದಲ್ಲಿ ಹಮ್ಮಿಕೊಂಡಿದ್ದ ಭಾರತೀಯ ಮಹಿಳಾ ಒಕ್ಕೂಟದ ಜಿಲ್ಲಾ ಸಂಘಟನಾ ಸಮಾವೇಶವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ಭಾರತೀಯ ಮಹಿಳಾ ಒಕ್ಕೂಟ ಸಂಘಟನೆಯು ಸ್ವಾತಂತ್ರö್ಯ ಬಂದ ನಂತರ ೧೯೫೪ರಲ್ಲಿ ಸ್ಥಾಪನೆಯಾಗಿ ಭಾರತದ ಮಹಿಳೆಯರ ಸಂಕಷ್ಟಗಳನ್ನು ನಿವಾರಿಸುವಲ್ಲಿ ಆಡಳಿತ ಸರ್ಕಾರಗಳ ವಿರುದ್ಶ ನಿರಂತರವಾದ ಹೋರಾಟಗಳನ್ನು ನಡೆಸಿಕೊಂಡು ಬರುತ್ತಿದೆ. ನಮ್ಮ ಸಂಘಟನೆಯೂ ಸದಾಕಾಲ ಶಾಂತಿಯನ್ನು ಬಯಸುತ್ತದೆ ಮತ್ತು ಅಂತರಾಷ್ಟಿçÃಯ ಮಟ್ಟದಲ್ಲಿ ಯುದ್ದಗಳನ್ನು ನಡೆಸದೆ ಮಾತುಕತೆಯ ಮೂಲಕ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಬೇಕು ಎಂದು ಬಯಸುತ್ತದೆ ಎಂದರು.
ಭಾರತೀಯ ಮಹಿಳಾ ಒಕ್ಕೂಟದ ರಾಜ್ಯ ಉಪಾಧ್ಯಕ್ಷೆ ವೈ. ಮಹದೇವಮ್ಮ ಮಾತನಾಡಿ ಮಹಿಳೆಯರ ಮೇಲೆ ನಡೆಯುತ್ತಿರುವ ಅತ್ಯಾಚಾರ, ದೌರ್ಜನ್ಯ, ದಬ್ಬಾಳಿಕೆಗಳನ್ನು ಹಿಮ್ಮೆಟ್ಟಿಸಬೇಕಾದರೆ ಮಹಿಳೆಯರಿಗೆ ಸೈದ್ದಾಂತಿಕತೆ ಅತ್ಯಂತ ಅವಶ್ಯಕತೆಯಾಗಿದ್ದು ಎಲ್ಲರೂ ಸಂಘಟಿತರಾಗಬೇಕು ಎಂದು ಕಕೆ ನೀಡಿದರು.
ರಾಜ್ಯ ಖಜಾಂಚಿ ದಿವ್ಯ ಶಿವರಾಜ್ಬೀರದಾರ್ ಮಾತನಾಡಿ ಭಾರತೀಯ ಮಹಿಳಾ ಒಕ್ಕೂಟದ ಸಮ್ಮೇಳನಗಳು ಎಂದರೆ ನಿಮ್ಮ ಊರುಗಳಲ್ಲಿ ನಡೆಯುವ ಹಬ್ಬಗಳ ರೀತಿಯಲ್ಲಿ ನಡೆಸಬೇಕು. ಏಕೆಂದರೆ ಮಹಿಳೆಯರ ಸಮಸ್ಯೆಗಳನ್ನು ಗ್ರಾಮೀಣ ಮಟ್ಟದ ಸಮಸ್ಯೆಗಳನ್ನು ಚರ್ಚಿಸಿ ಸಮ್ಮೇಳನದಲ್ಲಿ ತೀರ್ಮಾನಿಸಿ ಹೋರಾಟಗಳನ್ನು ರೂಪಿಸುವಂತಹ ಸಂಘಟನೆ ಎಂದರು.
ಸಿಪಿಐ ಜಿಲ್ಲಾ ಕಾರ್ಯದರ್ಶಿ ಗಿರೀಶ್, ಪುಷ್ಪಲತ, ಮಹದೇವಿ, ಎಐಟಿಯುಸಿ ಜಿಲ್ಲಾ ಉಪಾಧ್ಯಕ್ಷ ಗೋವಿಂದರಾಜು, ರವಿಪ್ರಸಾದ್, ರುದ್ರಪ್ಪ, ಮಾತನಾಡಿದರು. ಕಾರ್ಯಕ್ರಮದಲ್ಲಿ ಅಶ್ವತ್ಥನಾರಾಯಣ ಸ್ವಾಗತಿಸಿ ನಿರೂಪಿಸಿದರು, ತಿಪಟೂರು, ಶಿರಾ, ಕೊರಟಗೆರೆ, ತುಮಕೂರು ಭಾಗಗಳಿಂದ ಪ್ರತಿನಿಧಿಗಳು ಭಾಗವಹಿಸಿದ್ದರು.
ಮಹಿಳೆಯರ ಮೇಲಿನ ದೌರ್ಜನ್ಯ : ಸಂಘಟಿತರಾಗಲು ಕರೆ
Leave a comment
Leave a comment