ತುಮಕೂರಿನ ಉಪಾರಹಳ್ಳಿ ಬಡಾವಣೆಯ ೨೪ನೇ ವಾರ್ಡಿನಲ್ಲಿ ಗ್ರಾಮ ದೇವತೆ ಶ್ರೀ ಕಾಳಘಟ್ಟಮ್ಮ ದೇವಸ್ಥಾನ ಕಟ್ಟಡದ ಗುದ್ದಲಿ ಪೂಜೆ ಕಾರ್ಯಕ್ರಮವನ್ನು ಪರಮಪೂಜ್ಯ ಶ್ರೀ ಶಿವಾನಂದ ಶಿವಾಚಾರ್ಯ ಸ್ವಾಮೀಜಿಗಳ ನೇತೃತ್ವದಲ್ಲಿ ನಡೆಸಲಾಯಿತು. ಈ ಸಂದರ್ಭದಲ್ಲಿ ದೇವಾಲಯದ ಜೀರ್ಣೋದ್ಧಾರ ಹಾಗೂ ಸೇವಾ ಸಮಿತಿಯ ಅಧ್ಯಕ್ಷರಾದ ಕೃಷ್ಣಮೂರ್ತಿ, ಮಹಾನಗರ ಪಾಲಿಕೆ ಸದಸ್ಯರಾದ ಶಿವರಾಂ, ಧರಣೇಂದ್ರ ಕುಮಾರ್ (ರಾಜು), ಮುಖಂಡರುಗಳಾದ ಉಪ್ಪಾರಹಳ್ಳಿ ಕುಮಾರ್ ಸೇರಿದಂತೆ ಉಪ್ಪಾರಹಳ್ಳಿ ಗ್ರಾಮಸ್ಥರು ಮತ್ತು ಮುಖಂಡರು ಉಪಸ್ಥಿತರಿದ್ದರು.