ವಿದ್ಯೋದಯ ಕಾನೂನು ಕಾಲೇಜಿನಿಂದ ಉತ್ತಮ ವಕೀಲರನ್ನು ಸಮಾಜ ಕಾಣುವಂತಾಗಿದೆ-ನ್ಯಾ.ಶ್ರೀನಿವಾಸ ಹರೀಶ್ ಕುಮಾರ್
ಕಾನೂನು ಭೀಷ್ಮ ಹೆಚ್.ಎಸ್.ಶೇಷಾದ್ರಿ ಪುತ್ಥಳಿ ಅನಾವರಣ
ತುಮಕೂರು:ವಿದ್ಯೋದಯ ಕಾನೂನು ಕಾಲೇಜು ಸ್ಥಾಪಿಸಿದ್ದಕ್ಕೆ ಇಂದು ಲಕ್ಷಾಂತರ ಜನರು ವಕೀಲರಾಗಿ ನ್ಯಾಯಾಧೀಶರಾಗಿ ಸಮಾಜದಲ್ಲಿ ಕೆಲಸ ಮಾಡುತ್ತಿದ್ದಾರೆ ಈ ಮೂಲಕ ಸಮಾಜಕ್ಕೆ ಆಸ್ತಿಯಾಗಿದ್ದಾರೆ,ಅಂದು ವಿದ್ಯೋದಯ ಕಾನೂನು ಕಾಲೇಜು ಸ್ಥಾಪನೆ ಮಾಡಿದ ದಿವಂಗತ ಸುಬ್ರಹ್ಮಣ್ಯಸ್ವಾಮಿರವರು ವಕೀಲರಾಗಿ ತಾವು ದುಡಿದ ಹಣದಲ್ಲಿ ತುಮಕೂರು ನಗರದಲ್ಲಿ ಒಂದು ಕಾನೂನು ಕಾಲೇಜು ಸ್ಥಾಪನೆ ಮಾಡಬೇಕೆಂಬ ಹಂಬಲ ಮತ್ತು ಛಲದೊಂದಿಗೆ ಕಾನೂನು ಕಾಲೇಜು ಪ್ರಾರಂಭಿಸಿ ಹಲವು ಜನರಿಗೆ ಅನ್ನದಾತರಾಗಿದ್ದಾರೆ,ನಂತರ ದಿ.ಹೆಚ್.ಎಸ್.ಶೇಷಾದ್ರಿರವರ ಮಾರ್ಗದರ್ಶನದಲ್ಲಿ ಕಾಲೇಜು ಇಡೀ ರಾಜ್ಯದಲ್ಲಿಯೇ ಹೆಸರು ಮಾಡಿ,ಉತ್ತಮ ವಕೀಲರನ್ನು ತಯಾರು ಮಾಡುವ ಸಂಸ್ಥೆಯಾಗಿದೆ ಎಂದು ಹೈಕೋರ್ಟ್ ನ್ಯಾಯಾಧೀಶರಾದ ನ್ಯಾ.ಶ್ರೀನಿವಾಸ ಹರೀಶ್ ಕುಮಾರ್ ರವರು ತಿಳಿಸಿದರು.
ಅವರು ಇಂದು ನಗರದ ವಿದ್ಯೋದಯ ಕಾನೂನು ಕಾಲೇಜಿನಲ್ಲಿ ಪ್ರೊ.ಹೆಚ್.ಎಸ್.ಶೇಷಾದ್ರಿರವರ ಪುತ್ಥಳಿ ಅನಾವರಣ ಮಾಡಿ ಮಾತನಾಡಿದರು.
ಹೆಚ್.ಎಸ್.ಶೇಷಾದ್ರಿರವರಿಗೆ ಕಾನೂನಿನ ಬಗ್ಗೆ ಅಗಾಧ ಪಾಂಡಿತ್ಯವಿತ್ತು,ಕೇಸುಗಳನ್ನು ನಡೆಸುತ್ತಿದ್ದ ಪರಿ,ಪಾಟೀ ಸವಾಲು ಮಾಡುವ ರೀತಿ,ಅವರ ಅಧ್ಯಯನ,ಎಂತಹವರನ್ನೂ ಬೆರಗು ಮೂಡಿಸುವಂತಿತ್ತು,ಮೆಡಿಕಲ್ ಜ್ಯುರಿಸ್ ಪ್ರುಡನ್ಸ್ ಬಗ್ಗೆ ಹೆಚ್ಚು ಜ್ಞಾನವಂತರಾಗಿದ್ದರು ಅವರು ಕೇಸು ನಡೆಸುತ್ತಿದ್ದರೆ ನ್ಯಾಯಾಲಯದ ಒಳಗೆ ಮತ್ತು ಹೊರಗೆ ಕಿರಿಯ ವಕೀಲರು ತುಂಬಿ ತುಳುಕುತ್ತಿದ್ದರು,ಇಂದು ವಿದ್ಯೋದಯ ಕಾಲೇಜು ಪಿಯು,ಕಾನೂನು,ಬಿಬಿಎಂ ನಲ್ಲಿ ಪ್ರತಿವರ್ಷ ೧೦೦೦ ಜನ ಓದುತ್ತಿರುವುದು ಶ್ಲಾಘನೀಯ,ಕಾಲೇಜು ಇಷ್ಟು ಎತ್ತರಕ್ಕೆ ಕೊಂಡೊಯ್ಯಲು ಹೆಚ್.ಎಸ್.ಎಸ್.ರವರ ಪರಿಶ್ರಮ ದೊಡ್ಡದು,ಶೇಷಾದ್ರಿರವರ ಪುತ್ಥಳಿ ವಿದ್ಯಾರ್ಥಿಗಳಿಗೆ ಪ್ರೇರಣೆಯಾಗಲಿ,ಪ್ರತಿನಿತ್ಯ ಅವರನ್ನು ನೋಡುವುದರಿಂದ ತಾವು ಅವರಂತೆ ಕಾನೂನು ಪಂಡಿತರಾಗಿ ಉತ್ತಮ ವಕೀಲರಾಗಬೇಕೆಂಬ ಛಲ ಹುಟ್ಟಲಿ,ವಿದ್ಯಾರ್ಥಿಗಳಿಗೆ ದಾರಿದೀಪವಾಗಲಿ ಎಂದು ಹಾರೈಸಿದರು.
ವಿದ್ಯೋದಯ ಕಾನೂನು ಕಾಲೇಜಿನಿಂದ ಉತ್ತಮ ವಕೀಲರನ್ನು ಸಮಾಜ ಕಾಣುವಂತಾಗಿದೆ

Leave a comment
Leave a comment