ಮರ ತೆರವು ಗೊಳಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟ ದೇ ಗಾಣಗಾಪುರ ಪಿ ಎಸ್ ಐ.
ಆಫ್ಜಲ್ಪುರ್ : ಇಂದು ಸಾಯಂಕಾಲ ಸುಮಾರು ಏಳು ಗಂಟೆಗೆ ಗಾಣಗಾಪುರ್ ಟು ಚೌಡಾಪುರ ಮುಖ್ಯ ರಸ್ತೆಯ ಮೇಲೆ ಭೀಕರ ಬಿರುಗಾಳಿ ಮತ್ತು ಮಳೆಯಿಂದಾಗಿ ಮರ ಬಿದ್ದು ಸಂಪೂರ್ಣ ರಸ್ತೆ ವಾಹನ ಸಂಚಾರ ಬಂದಾಗಿತ್ತು. ಶ್ರೀ ಗಾಣ ಗಾಪುರ್ ದತ್ತ ಕ್ಷೇತ್ರಕ್ಕೆ ಬರುವ ವಾಹನಗಳು ನಿಂತು ಎರಡು ಕಡೆ ಸುಮಾರು 2 ಕಿ ಮೀ ವಾಹನ ಸಂಚಾರ ಬಂದಾಗಿತು. ವಿಷಯ ತಿಳಿದು ತುರ್ತಾಗಿ ಆಗಮಿಸಿದ ಮಾನ್ಯ ಠಾಣಾಧಿಕಾರಿಗಳಾದ ಶ್ರೀ ಪರಶುರಾಮ್ .. ಮತ್ತು ಹುಲಿಗೆಪ್ಪ, ಸಿಬ್ಬಂದಿಗಳೊಂದಿಗೆ ಸೇರಿ ಜೆಸಿಪಿ ಸಹಾಯದಿಂದ ಮರವು ತೆರುವುಗಳಿಸಿ ಶೀಘ್ರದಲ್ಲಿ ರಸ್ತೆ ಸಂಚಾರ ಸುಗಮಗೊಳಿಸಿ ಕೊಟ್ಟರು… ಈ ಸಂದರ್ಭದಲ್ಲಿ ಗ್ರಾಮಸ್ಥರು ಕೂಡ ಪೊಲೀಸರಿಗೆ ಸಾಥ್ ನೀಡಿದರು.