ಎಸ್ಎಸ್ಎಲ್ಸಿ ವಿದ್ಯಾರ್ಥಿಗಳಿಗೆ ವಿ-ಮಾಸ್ಟರ್ ಮೈಂಡ್ ಸ್ಕಾಲರ್ ಶಿಪ್ ಪರೀಕ್ಷೆ
ವಿದ್ಯಾನಿಧಿ ಕಾಲೇಜು ನಡೆಸುವ ವಿ-ಮಾಸ್ಟರ್ ಮೈಂಡ್ ಸ್ಕಾಲರ್ಶಿಪ್ ಪರೀಕ್ಷೆಯು ಮುಂಬರುವ ನವಂಬರ್ ಐದನೇ ತಾರೀಕು, ಭಾನುವಾರ ನಡೆಯಲಿದೆ.
ಸ್ಟೇಟ್ ಬೋರ್ಡ್, ಸಿಬಿಎಸ್ಇ, ಐಸಿಎಸ್ಇ ವಿದ್ಯಾರ್ಥಿಗಳಿಗೆ ಪ್ರತ್ಯೇಕ ಪ್ರಶ್ನೆಪತ್ರಿಕೆಗಳೊಂದಿಗೆ ಈ ಪರೀಕ್ಷೆ ನಡೆಯಲಿದ್ದು ಹತ್ತನೆಯ ತರಗತಿಯಲ್ಲಿ ಪ್ರಸ್ತುತ ವ್ಯಾಸಂಗ ನಡೆಸುತ್ತಿರುವ ವಿದ್ಯಾರ್ಥಿಗಳು ತಮ್ಮ ಹೆಸರನ್ನು ನೋಂದಣಿ ಮಾಡಿಕೊಳ್ಳಬಹುದು. ಯಾವುದೇ ಶುಲ್ಕವಿಲ್ಲದ ಮುಕ್ತ ಪರೀಕ್ಷೆ ಇದಾಗಿದ್ದು ವಿದ್ಯಾರ್ಥಿಗಳು ಕಾಲೇಜು ವೆಬ್ಸೈಟ್ನಲ್ಲಿ ನೋಂದಾಯಿಸಬಹುದು. ಅಥವಾ ಕಾಲೇಜಿಗೆ ನೇರ ಭೇಟಿ ಕೊಡಬಹುದು.
ಪ್ರತಿಭೆಗಳನ್ನು ಅನ್ವೇಷಿಸುವ ಮತ್ತು ಪೋಷಿಸುವ ಉದ್ದೇಶದಿಂದ ವಿದ್ಯಾನಿಧಿ ಕಾಲೇಜು ಪ್ರತಿವರ್ಷವೂ ವಿ- ಮಾಸ್ಟರ್ ಮೈಂಡ್ ಪರೀಕ್ಷೆಯನ್ನು ರಾಜ್ಯಾದ್ಯಂತ ನಡೆಸುತ್ತಾ ಬಂದಿದೆ. ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಯನ್ನು ಎದುರಿಸುವುದಕ್ಕೆ ಬೇಕಾದ ಆತ್ಮವಿಶ್ವಾಸವನ್ನು ತುಂಬುವಲ್ಲಿ ಮಾಸ್ಟರ್ ಮೈಂಡ್ ನೆರವಾಗಲಿದೆ. ಹತ್ತನೆಯ ತರಗತಿಯ ವಿದ್ಯಾರ್ಥಿಗಳು ಈ ಪರೀಕ್ಷೆಯನ್ನು ಬರೆಯುವ ಮೂಲಕ ತಮ್ಮ ಪಬ್ಲಿಕ್ ಪರೀಕ್ಷೆಯನ್ನು ಎದುರಿಸಲು ಬೇಕಾದ ಸಿದ್ಧತೆಯನ್ನೂ ಮಾಡಿಕೊಂಡAತಾಗುತ್ತದೆ ಎಂದು ವಿದ್ಯಾವಾಹಿನಿ ಸಮೂಹ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಎನ್.ಬಿ.ಪ್ರದೀಪ್ ಕುಮಾರ್ ತಿಳಿಸಿದರು.
ಅವರು ವಿ-ಮಾಸ್ಟರ್ ಮೈಂಡ್ ಪರೀಕ್ಷೆಯ ಬ್ರೋಷರ್ನ್ನು ಬಿಡುಗಡೆಗೊಳಿಸಿ ಮಾತನಾಡಿದರು.
ವಿ- ಮಾಸ್ಟರ್ ಮೈಂಡ್ ಪರೀಕ್ಷೆಯಲ್ಲಿ ಮೊದಲಿಗರಾಗುವ ಮೂರು ಮಂದಿ ಪ್ರತಿಭಾವಂತರಿಗೆ ತಲಾ ೫೦,೦೦೦ ಮೊತ್ತದ ಗಿಫ್ಟ್ ಓಚರ್, ಎರಡನೆಯ ಸ್ಥಾನ ಪಡೆಯುವ ಐದು ಮಂದಿಗೆ ತಲಾ ೩೦,೦೦೦ ಸಾವಿರದ ಗಿಫ್ಟ್ ಓಚರ್ ಮತ್ತು ತೃತೀಯ ಸ್ಥಾನ ಗಳಿಸುವ ಐದು ಮಂದಿಗೆ ತಲಾ ೨೦,೦೦೦ ದ ಗಿಫ್ಟ್ ಓಚರ್ ಬಹುಮಾನವಾಗಿ ದೊರೆಯಲಿದೆ. ಪರೀಕ್ಷೆಗಳನ್ನು ಬರೆಯುವ ಮಕ್ಕಳಲ್ಲಿ ಪ್ರತೀಶಾಲೆಯ ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದವರಿಗೆ ತಲಾ ೧೦,೦೦೦ ದ ಗಿಫ್ಟ್ ಓಚರ್ ಬಹುಮಾನವಾಗಿ ದೊರೆಯಲಿದೆ. ಒಟ್ಟು ೫ಲಕ್ಷದ ಸ್ಕಾಲರ್ಶಿಪ್ನ್ನು ಪ್ರತಿಭಾನ್ವಿತ ವಿದ್ಯಾರ್ಥಿಗಳು ಪಡೆಯಲಿದ್ದಾರೆ ಎಂದು ಪ್ರದೀಪ್ ಕುಮಾರ್ ತಿಳಿಸಿದ್ದಾರೆ.
೨೦೨೨ರ ಮಾಸ್ಟರ್ಮೈಂಡ್ ಪರೀಕ್ಷೆಯಲ್ಲಿ ಮೊದಲಿಗಳಾಗಿ ಹೊರಹೊಮ್ಮಿ, ಪ್ರಸ್ತುತ ವಿದ್ಯಾನಿಧಿಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿನಿ ಸಿರಿ ಕೊಂಡ ‘ಈ ಸ್ಕಾಲರ್ಶಿಪ್ ಪರೀಕ್ಷೆಯಿಂದ ನನಗೆ ಆರ್ಥಿಕ ಪ್ರಯೋಜನದ ಜತೆಗೆ ನನ್ನ ಆತ್ಮವಿಶ್ವಾಸವೂ ವೃದ್ಧಿಯಾಯಿತು. ಹತ್ತನೆಯ ತರಗತಿಯ ಪಬ್ಲಿಕ್ ಪರೀಕ್ಷೆಯಲ್ಲಿ ಉತ್ತಮ ನಿರ್ವಹಣೆ ತೋರಲು ಅನುಕೂಲವಾಯಿತು’ ಎಂದರು.
SSLC ವಿದ್ಯಾರ್ಥಿಗಳಿಗೆ ವಿ-ಮಾಸ್ಟರ್ ಮೈಂಡ್ ಸ್ಕಾಲರ್ ಶಿಪ್ ಪರೀಕ್ಷೆ
Leave a comment
Leave a comment