ವಿದ್ಯಾನಿಧಿ ಕಾಲೇಜಿನ ಜ್ಞಾನವಿ ಎಂ. ದ್ವಿತೀಯ ಪಿಯುಸಿ ವಾಣಿಜ್ಯ ವಿಭಾಗದಲ್ಲಿ 597 ಅಂಕಗಳನ್ನು ಗಳಿಸುವುದರೊಂದಿಗೆ 2023- 24 ನೇ ಸಾಲಿನ ಪರೀಕ್ಷೆಯಲ್ಲಿ ರಾಜ್ಯಕ್ಕೆ ಪ್ರಥಮ ರ್ಯಾಂಕ್ ಪಡೆದಿದ್ದಾಳೆ. ಕಳೆದ ಹತ್ತಾರು ವರ್ಷಗಳಿಂದ ನಿರಂತರವಾಗಿ ರಾಜ್ಯಮಟ್ಟದಲ್ಲಿ ರ್ಯಾಂಕುಗಳನ್ನು ಗಳಿಸುತ್ತಾ ಬಂದ ಕಾಲೇಜಿನ ದಣಿವರಿಯದ ಪರಿಶ್ರಮಕ್ಕೆ ಈ ಬಾರಿ ಪ್ರಥಮ ರ್ಯಾಂಕ್ನ ಗರಿ ದೊರೆತಿರುವುದು ಅರ್ಥಪೂರ್ಣ ಹೆಗ್ಗಳಿಕೆಯಾಗಿದೆ.
ವಾಣಿಜ್ಯ ವಿಭಾಗದ ದೀಪಶ್ರೀ (594) ನಾಲ್ಕನೇ ರ್ಯಾಂಕ್, ತುಂಗಾ (593) ಐದನೇ ರ್ಯಾಂಕ್, ಮನಮೋಹನ್ (592) ಆರನೇ ರ್ಯಾಂಕ್, ಗಗನಶ್ರೀ (591), ಅನನ್ಯಾ ಜೆ.ಟಿ (591) ಏಳನೇ ರ್ಯಾಂಕ್, ಮೋನಿಷಾ (590), ಸಾಕ್ಷಿ (590) ಎಂಟನೇ ರ್ಯಾಂಕ್, ಕುಮುದಾ ಮತ್ತು ಶ್ರುತಿ (589) ಒಂಭತ್ತನೇ ರ್ಯಾಂಕ್, ಮಾರುತಿ ಭುವನ್ (588) ಹತ್ತನೇ ರ್ಯಾಂಕ್ ಗಳಿಸಿ ಕಾಲೇಜಿನ ಕೀರ್ತಿ ಪತಾಕೆಯನ್ನು ಹಾರಿಸಿದ್ದಾರೆ.
ವಿಜ್ಞಾನ ವಿಭಾಗದಲ್ಲಿ ನಿತ್ಯಾ ಕೆ.ಆರ್. ಮತ್ತು ಶಾಶ್ವತ್ (586) ಎಂಟನೇ ರ್ಯಾಂಕ್, ತನುಷ್ ಆರಾಧ್ಯ (585) ಒಂಭತ್ತನೇ ರ್ಯಾಂಕ್, ನಿಸರ್ಗ ಎ.ಎಂ. ಮತ್ತು ಲತಾ ಆರ್ (584) ಹತ್ತನೇ ರ್ಯಾಂಕ್ ಪಡೆದಿರುವುದು ಹೆಮ್ಮೆಯ ಸಂಗತಿ.
ವಿಜ್ಞಾನ ಮತ್ತು ವಾಣಿಜ್ಯ ವಿಭಾಗಗಳಲ್ಲಿ ಒಟ್ಟು 477 ಮಂದಿ ಅತ್ಯುನ್ನತ ಶ್ರೇಣಿ, 418 ಮಂದಿ ಪ್ರಥಮ ಶ್ರೇಣಿ ಮತ್ತು 49 ಮಂದಿ ದ್ವಿತೀಯ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.
ವಿದ್ಯಾನಿಧಿಯ ಎಲ್ಲ ಸಾಧಕ ವಿದ್ಯಾರ್ಥಿಗಳನ್ನು ವಿದ್ಯಾವಾಹಿನಿ ಸಮೂಹ ಶಿಕ್ಷಣ ಸಂಸ್ಥೆಗಳ ಸಂಸ್ಥಾಪಕ ಅಧ್ಯಕ್ಷರಾದ ಕೆ.ಬಿ.ಜಯಣ್ಣನವರು ಮತ್ತು ಕಾರ್ಯದರ್ಶಿಗಳಾದ ಎನ್.ಬಿ. ಪ್ರದೀಪ್ ಕುಮಾರ್ ಅಭಿನಂದಿಸಿದರು. ಪ್ರಾಂಶುಪಾಲರು ಉಪಸ್ಥಿತರಿದ್ದರು.
ವಿದ್ಯಾನಿಧಿ ಕಾಲೇಜಿಗೆ ಅಭೂತಪೂರ್ವ ಫಲಿತಾಂಶವಾಣಿಜ್ಯ ವಿಭಾಗದ ಜ್ಞಾನವಿ ರಾಜ್ಯಕ್ಕೆ ಪ್ರಥಮ
Leave a comment
Leave a comment