ಅನಧಿಕೃತ ರಸಗೊಬ್ಬರ ವಶ
ತುಮಕೂರು- ಅನಧಿಕೃತವಾಗಿ ರಸಗೊಬ್ಬರ ಮಾರಾಟ ಮಾಡುತ್ತಿದ್ದ ಮಳಿಗೆ ಮೇಲೆ ಕೃಷಿ ಇಲಾಖೆ ಜಾರಿ ದಳದ ಅಧಿಕಾರಿಗಳು ದಾಳಿ ನಡೆಸಿ ಪರವಾನಗಿ ಮತ್ತು ಅನುಮತಿ ಇಲ್ಲದೆ ಮಾರಾಟ ಮಾಡುತ್ತಿದ್ದ ರಸಗೊಬ್ಬರವನ್ನು ವಶಪಡಿಸಿಕೊಂಡಿದ್ದಾರೆ.
ನಗರದ ಹೊರವಲಯದ ಹಿರೇಹಳ್ಳಿ ಇಂಡಸ್ಟ್ರಿಯಲ್ ಏರಿಯಾದಲ್ಲಿರುವ ಕೆ.ಎಸ್. ಆಗ್ರೋಕೆಮಿಕಲ್ಸ್ ಜೈವಿಕ ಗೊಬ್ಬರ ಉತ್ಪಾದನಾ ಘಟಕದ ಮೇಲೆ ಬೆಂಗಳೂರಿನ ಕೃಷಿ ಇಲಾಖೆಯ (ಜಾಗೃತ ಕೋಶ) ಅಪರ ನಿರ್ದೇಶಕ ಕೆ.ಜಿ. ಅನೂಪ್, ಜಂಟಿ ನಿರ್ದೇಶಕ ವಿದ್ಯಾನಂದ ನೇತೃತ್ವದಲ್ಲಿ ಕೃಷಿ ಅಧಿಕಾರಿಗಳು ದಾಳಿ ಮಾಡಿದಾಗ ಅನುಮತಿ ಮತ್ತು ಪರವಾನಗಿ ಇಲ್ಲದೇ ರಿಯಾಯ್ತಿ ದರದ ರಸಗೊಬ್ಬರವನ್ನು ಅನಧಿಕೃತವಾಗಿ ವಿವಿಧ ಸರಬರಾಜುದಾರರಿಂದ ಖರೀದಿಸಿ ದಾಸ್ತಾನು ಮಾಡಿರುವುದು ಪತ್ತೆಯಾಗಿದೆ.
ಈ ರಸಗೊಬ್ಬರದ ಮಾದರಿಗಳನ್ನು ತೆಗೆದು ವಿಶ್ಲೇಷಣೆಗೆ ಕಳುಹಿಸಲಾಗಿದೆ. ಈ ರಸಗೊಬ್ಬರವನ್ನು ಜಪ್ತಿ ಮಾಡಿ ಕಾನೂನು ರೀತ್ಯಾ ಕ್ರಮ ಕೈಗೊಳ್ಳಲಾಗಿದೆ ಎಂದು ಕೃಷಿ ಜಾರಿ ದಳದ ಸಹಾಯಕ ನಿರ್ದೇಶಕ ಪುಟ್ಟರಂಗಪ್ಪ ತಿಳಿಸಿದ್ದಾರೆ.
ಈ ದಾಳಿಯಲ್ಲಿ ಊರ್ಡಿಗೆರೆ ರೈತ ಸಂಪರ್ಕ ಕೇಂದ್ರದ ಸಹಾಯಕ ಕೃಷಿ ಅಧಿಕಾರಿ ನಾಗರಾಜ ಮತ್ತಿತರರು ಭಾಗವಹಿಸಿದ್ದರು.
ಅನಧಿಕೃತ ರಸಗೊಬ್ಬರ ವಶ
Leave a comment
Leave a comment