ಪದೇ ಪದೇ ಮನೆಗೆ ನುಗ್ಗಿ ಕೊಲೆ ಮಾಡುವ ಘಟನೆಗಳ ಹೆಚ್ಚಳ; ಗೃಹಸಚಿವರನ್ನು ಬದಲಾಯಿಸಿ ಕೊಲೆಗಡುಕರನ್ನು ಎನ್ ಕೌಂಟರ್ ಮಾಡಿ
ಯಾದಗಿರಿ: ರಾಜ್ಯದಲ್ಲಿ ಹಾಡುಹಗಲೇ ಕಂಡವರ ಮನೆಗೆ ನುಗ್ಗಿ ಕೊಲೆ ಮಾಡುವ ಪರಿಸ್ಥಿತಿ ನಿರ್ಮಾಣವಾಗಿದ್ದು ನೋಡಿದರೆ ಅಪರಾಧಿಗಳಿಗೆ ಕಾನೂನು ಭಯ ಎಂಬುದೇ ಇಲ್ಲವಾಗಿದ್ದು ಮಾನವಂತರು ಮನೆಯಿಂದ ಹೊರಬರಲು ಯೋಚಿಸುವಂತಾಗಿದೆ ಎಂದು ಕರ್ನಾಟಕ ಪ್ರದೇಶ ಕೋಲಿ ಸಮಾಜದ ರಾಜ್ಯ ಸಂ. ಕಾರ್ಯದರ್ಶಿ, ಸಾಮಾಜಿಕ ಹೋರಾಟಗಾರ ಉಮೇಶ ಕೆ. ಮುದ್ನಾಳ ಆರೋಪಿಸಿದ್ದಾರೆ.
ಈ ಕುರಿತು ಹೇಳಿಕೆ ನೀಡಿರುವ ಅವರು, ಹುಬ್ಬಳ್ಳಿಯಲ್ಲಿ ಇತ್ತಿಚೆಗೆ ಕಾಲೇಜು ಕ್ಯಾಂಪಸ್ ನಲ್ಲಿ ನಡೆದ ಘೋರ ಘಟನೆಯ ಮಾಸುವ ಮೊದಲೇ ಮತ್ತೆ ಮನೆಗೆ ನುಗ್ಗಿ ಕೊಲೆ ಮಾಡಿದ್ದು ನಾಗರಿಕ ಪ್ರಪಂಚವೇ ತಲೆ ತಗ್ಗಿಸುವಂತಾಗಿದೆ.
ಹುಬ್ಬಳ್ಳಿಯಲ್ಲಿ ನ ಕು. ಅಂಜಲಿ ಅಂಬಿಗೇರ ಇವರ ಮನೆಗೆ ನುಗ್ಗಿ ಎಲ್ಲರೆದುರಿಗೆ ಕೊಲೆ ಮಾಡಿದ ಪಾಪಿಷ್ಠ ಕೃತ್ಯ ನಡೆದರೂ ರಾಜ್ಯದಲ್ಲಿ ಗೃಹ ಇಲಾಖೆ ಕೋಮಾದಲ್ಲಿದೆಯೇ ಎಂಬ ಅನುಮಾನ ಜನತೆಗೆ ಕಾಡುತ್ತಿದೆ.
ಇನ್ನೊಬ್ಬರ ಮನೆಗೆ ಅವರ ಅನುಮತಿ ಇಲ್ಲದೇ ಪ್ರವೇಶ ಮಾಡುವುದೇ ದೊಡ್ಡ ಅಪರಾಧ ಅಂತಹುದ್ದರಲ್ಲಿ ಚಾಕು ಇಟ್ಟುಕೊಂಡೇ ಮನೆಯೊಳಗೆ ರಾಜಾರೋಷವಾಗಿ ನುಗ್ಗಿ ಯುವತಿಯನ್ನು ಕೊಲೆ ಮಾಡಿರುವುದು ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಎಂಬುದು ಇದೆಯೇ ಇಲ್ಲವೇ ತುಘಲಕ್ ಮಾದರಿ ಆಡಳಿತ ಇದೆಯೇ ಎಂಬುದು ಅರ್ಥವಾಗುತ್ತಿಲ್ಲ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹಿಂದೆ ರಜಾಕರು ಕಂಡಕoಡವರ ಮನೆಗೆ ನುಗ್ಗಿ ಹೀಗೆ ಕೊಲೆ ಮಾಡುತ್ತಿದ್ದರು ಎಂಬ ಸಂಗತಿ ಇತಿಹಾಸದಲ್ಲಿ ಕೇಳಿದ್ದೆವು ಆದರೆ ಇಂದು ರಾಜ್ಯದಲ್ಲಿ ಹಾಡಹಗಲೇ ಹೀಗೆ ನಡೆಯುತ್ತಿರುವುದು ನೋಡಿದರೆ ರಜಾಕರ ಹಾವಳಿ ಮತ್ತೆ ಶುರುವಾಗಿದೆಯೇ ಎಂಬ ಅನುಮಾನ ರಾಜ್ಯದ ಜನತೆಗೆ ಆಗುತ್ತಿದೆ ಎಂದು ಅವರು ಆರೋಪಿಸಿದ್ದಾರೆ.
ಇಂತಹ ಘಟನೆಗಳಿಂದಾಗಿ ಪೋಷಕರು ಮಕ್ಕಳನ್ನು ಶಾಲೆ, ಕಾಲೇಜಿಗೆ ಕಳಿಸಲು ಯೋಚಿಸುವಂತಹ ಪರಿಸ್ಥಿತಿ ನಿರ್ಮಾಣವಾಗಿದ್ದು, ಇದನ್ನು ಸರಿಪಡಿಸದೇ ಇದ್ದರೆ ರಾಜಸ್ಥಾನದಲ್ಲಿ ಘೋಷಾ ಪದ್ಧತಿ ಜಾರಿಗೆ ಬಂದoತೆ ಆಗಲಿದೆಯೇ ಎಂಬ ಅನುಮಾನ ಮೂಡುತ್ತಿದೆ ಎಂದು ದೂರಿದ್ದಾರೆ.
ಘಟನೆಗೆ ಸಂಬoಧಿಸಿದoತೆ ಆರೋಪಿಗಳು ಎಲ್ಲರೆದುರಿಗೆ ಕೊಲೆ ಮಾಡಿರುವುದರಿಂದ ಅವರನ್ನು ಕೂಡಲೇ ಎನ್ ಕೌಂಟರ್ ಮಾಡಬೇಕು ವಿನಾಕಾರಣ ಪರಿಶೀಲನೆ, ವಿಚಾರಣೆ ಎಂದು ಕಾಲಹರಣ ಮಾಡದೇ ತಪ್ಪಿತಸ್ಥರನ್ನು ಗಲ್ಲಿಗೇರಿಸಬೇಕು, ಕುಟುಂಬಸ್ಥರಿಗೆ ಭದ್ರತೆ ಒದಗಿಸಬೇಕು ಎಂದು ಆಗ್ರಹಿಸಿದ ಅವರು ಸೂಕ್ತಪರಿಹಾರ ನೀಡಬೇಕೆಂದು ಆಗ್ರಹಿಸಿದರು.
ಆರೋಪ: ರಾಜ್ಯದಲ್ಲಿ ಇಂತಹ ಹಲವು ಘಟನೆಗಳು ನಡೆಯುತ್ತಿದ್ದರೂ ಗೃಹ ಮಂತ್ರಿಗಳು ಏನು ನಡೆದೇ ಇಲ್ಲ ಎಂಬoತೆ ನಿಷ್ಕಿçಯರಾಗಿರುವುದು ಅತ್ಯಂತ ನಾಚಿಕೆಗೇಡು ಸಂಗತಿಯಾಗಿದ್ದು ಕೂಡಲೇ ಗೃಹ ಸಚಿವರನ್ನು ಬದಲಿಸಬೇಕೆಂದು ಅವರು ಒತ್ತಾಯಿಸಿದ್ದಾರೆ.
ಇದಲ್ಲದೇ ರಾಜ್ಯದಲ್ಲಿ ವಿರೋಧ ಪಕ್ಷ ಜೀವಂತ ಇದೆಯೇ ಎಂಬ ಅನುಮಾನ ಜನರಿಗೆ ಮೂಡಿದೆ. ಕಳೆದ ವರ್ಷದಲ್ಲಿ ಇಷ್ಟೊಂದು ಕಾನೂನು ಸುವ್ಯವಸ್ಥೆ ಘಟನೆಗಳು ನಡೆದರೂ ಒಂದು ವಿರೋಧ ದಾಖಲಿಸದೇ ಅಸಮರ್ಥ ಗೃಹ ಸಚಿವರನ್ನು ಬದಲಿಸಲು ಹೋರಾಟವನ್ನೂ ಮಾಡದೇ ಕುಂಭಕರ್ಣ ನಿದ್ರೆಯಲ್ಲಿರುವುದು ನಾಚಿಕೆಗೇಡು ಸಂಗತಿ ಎಂದ ಅವರು ಕೆಲಸಕ್ಕೆ ಬಾರದ ವಿಷಯಗಳಿಗೆ ಪ್ರತಿಭಟನೆ ಮಾಡಿ ಜನರಿಗೆ ವಂಚಿಸುತ್ತಿದ್ದಾರೆ ಎಂದೂ ಅವರು ಆರೋಪಿಸಿದರು.
ವಿಪಕ್ಷಗಳು ಸರಿಯಾಗಿ ಕೆಲಸ ಮಾಡಬೇಕು ಮತ್ತು ರಾಜ್ಯದಲ್ಲಿ ಇಂತಹ ಘಟನೆಗಳು ಮರುಕಳಿಸಬಾರದಂತೆ ಕಟ್ಟುನಿಟ್ಟಿನ ಕಾನೂನು ಕ್ರಮ ಕೈಗೊಳ್ಳಬೇಕು ದಕ್ಷ ಹಾಗೂ ಯೋಗ್ಯರನ್ನು ಗೃಹ ಸಚಿವರನ್ನಾಗಿ ಮಾಡಬೇಕು ಎಂದು ಸರ್ಕಾರಕ್ಕೆ ಅವರು ಒತ್ತಾಯಿಸಿದ್ದಾರೆ. (ವರದಿ ರಾಜಶೇಖರ್ ಎಸ್ ಮಾತೋಳಿ
ರಾಜ್ಯದ ಮರ್ಯಾದೆ ಉಳಿಸಿ ಉಮೇಶ ಮುದ್ನಾಳ ಆಗ್ರಹ
Leave a comment
Leave a comment