ತುಮಕೂರು- ಎರಡು ಕೆಎಸ್ಸಾರ್ಟಿಸಿ ಬಸ್ಗಳ ಮಧ್ಯೆ ಸಿಲುಕಿ ಇಬ್ಬರು ಮಹಿಳೆಯರು ಧಾರುಣವಾಗಿ ಸಾವನ್ನಪ್ಪಿರುವ ಘಟನೆ ನಗರದ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣದಲ್ಲಿಂದು ಬೆಳಿಗ್ಗೆ ನಡೆದಿದೆ.
ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲ್ಲೂಕಿನ ಕೆ. ಶೆಟ್ಟಿಹಳ್ಳಿ ಗ್ರಾಮದ ಪುಟ್ಟತಾಯಮ್ಮ (೬೦) ಹಾಗೂ ಪಂಕಜಾ (೫೦) ಎಂಬುವರೇ ಮೃತಪಟ್ಟಿರುವ ದುರ್ದೆÊವಿಗಳು.
ಈ ಮಹಿಳೆಯರು ತಮ್ಮ ಮನೆಯ ಅಕ್ಕಪಕ್ಕದವರೊಂದಿಗೆ ಕೊರಟಗೆರೆ ತಾಲ್ಲೂಕಿನ ಗೊರವನಹಳ್ಳಿ ಶ್ರೀ ಮಹಾಲಕ್ಷಿ÷್ಮ ದೇವಾಲಯಕ್ಕೆ ತೆರಳಲು ತುಮಕೂರಿಗೆ ಬಂದಿದ್ದರು. ಶ್ರೀರಂಗಪಟ್ಟಣದಿAದ ಬಂದು ನಗರದ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣದಲ್ಲಿ ಇಳಿದಿದ್ದ ಇವರು ಕೊರಟಗೆರೆ ಕಡೆಯ ಬಸ್ ಹತ್ತಲು ನಗರ ಸಾರಿಗೆಯ ನಿಲ್ದಾಣದಿಂದ ತೆರಳುತ್ತಿದ್ದರು. ಇದೇ ವೇಳೆ ಗೌರಿಬಿದನೂರು ಕಡೆಗೆ ತೆರಳು ಬಸ್ ರಿವರ್ಸ್ ಬಂದ ಪರಿಣಾಮ ನಗರ ಸಾರಿಗೆ ಬಸ್ ಮತ್ತು ಗೌರಿಬಿದನೂರು ಕಡೆಗೆ ತೆರಳುವ ಬಸ್ ನಡುವೆ ಸಿಲುಕಿ ಈ ದುರ್ದೆÊವಿ ಮಹಿಳೆಯರು ಸಾವನ್ನಪ್ಪಿದ್ದಾರೆ.
ಉಚಿತ ಬಸ್ ಪ್ರಯಾಣದ ಹಿನ್ನೆಲೆಯಲ್ಲಿ ಶ್ರೀರಂಗಪಟ್ಟಣ ತಾಲ್ಲೂಕಿನ ಕೆಲವು ಮಹಿಳೆಯರು ಧಾರ್ಮಿಕ ಕ್ಷೇತ್ರಗಳ ದರ್ಶನಕ್ಕೆಂದು ಇಂದು ಬೆಳಿಗ್ಗೆ ಬಂದಿದ್ದರು. ಕೊರಟಗೆರೆಗೆ ಬಸ್ ಹತ್ತುವ ಧಾವಂತದಲ್ಲಿದ್ದಾಗ ಯಮರಾಯನಂತೆ ಬಂದೆರಗಿದ ಗೌರಿಬಿದನೂರು ಕಡೆಯ ಬಸ್ ಈ ಇಬ್ಬರು ಮಹಿಳೆಯರ ಜೀವ ಬಲಿ ತೆಗೆದುಕೊಂಡಿದೆ.
ಘಟನೆ ನಡೆದ ಸ್ಥಳಕ್ಕೆ ಸಂಚಾರಿ ಠಾಣೆ ಪೊಲೀಸರು ಧಾವಿಸಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.
ಘಟನಾ ಸ್ಥಳಕ್ಕೆ ಅಡಿಷನಲ್ ಎಸ್ಪಿ ವಿ. ಮರಿಯಪ್ಪ ಭೇಟಿ ನೀಡಿ ಪರಿಶೀಲಿಸಿ ಅಪಘಾತಕ್ಕೆ ಕಾರಣವಾದ ಕೆಎಸ್ಸಾರ್ಟಿಸಿ ಬಸ್ ಚಾಲಕ ಮತ್ತು ನಿರ್ವಾಹಕನನ್ನು ವಶಕ್ಕೆ ಪಡೆದು, ಕೆಎಸ್ಸಾರ್ಟಿಸಿ ನಿಲ್ದಾಣದ ಅಧಿಕಾರಿಗಳ ವಿರುದ್ಧವೂ ಸಹ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.
ಮುಗಿಲು ಮುಟ್ಟಿದ ಆಕ್ರಂದನ
ಮೃತ ಮಹಿಳೆಯರ ಜತೆ ಗೊರವನಹಳ್ಳಿಗೆ ತೆರಳಲು ಬಂದಿದ್ದ ಇತರೆ ಮಹಿಳೆಯರ ಆಕ್ರಂದ ಮುಗಿಲು ಜಿಲ್ಲಾಸ್ಪತ್ರೆಯ ಶವಾಗಾರದ ಮುಟ್ಟಿತ್ತು.
ನಮ್ಮ ಜತೆ ಬಂದಿದ್ದ ಇಬ್ಬರು ಮಹಿಳೆಯರು ಅಪಘಾತದಿಂದ ಸಾವನ್ನಪ್ಪಿರುವುದರಿಂದ ದಿಕ್ಕು ತೋಚದಂತಾಗಿರುವ ಕೆ. ಶೆಟ್ಟಿಕೆರೆ ಮಹಿಳೆಯರು, ಮೃತ ಮಹಿಳೆಯರ ಮನೆಯವರಿಗೆ ನಾವು ಏನು ಹೇಳೋಣ ಎಂದು ಗೋಳಾಡುತ್ತಿದ್ದ ದೃಶ್ಯ ಕಂಡು ಬಂತು.