ಬೇಸಿಗೆ ಶಿಬಿರದಲ್ಲಿ ಚಿಣ್ಣರೊಂದಿಗೆ ನಲಿದ ಪೋಷಕರು
ತುಮಕೂರಿನ ಆರ್ಟ್ ಯುನಿವರ್ಸ್, ಸ್ಕಿಲ್ ಆಡ್ಸ್, ಪ್ರೆಸ್ ಕ್ಲಬ್ ತುಮಕೂರು ಇವರ ಸಂಯುಕ್ತಾಶ್ರಯದಲ್ಲಿ ನಗರದ ಆಲದಮರ ಪಾರ್ಕ್ನಲ್ಲಿ ಆಯೋಜಿಸಿರುವ ಚಿಣ್ಣರ ಬೇಸಿಗೆ ಶಿಬಿರದ 2 ಮತ್ತು 3ನೇ ದಿನದ ಕಾರ್ಯಕ್ರಮಗಳಲ್ಲಿ ಪೋಷಕರು ಹಾಗೂ ವಿದ್ಯಾರ್ಥಿಗಳು ಚಟುವಟಿಕೆಯಲ್ಲಿ ಭಾಗವಹಿಸಿದ್ದರು.
ರಂಗಭೂಮಿ, ನೃತ್ಯ, ಕರಕುಶಲ ಕಲೆ , ಅನೇಕ ಕೌಶಲ್ಯ ವೃದ್ಧಿಸುವ ಚಟುವಟಿಕೆಗಳನ್ನು ಒಳಗೊಂಡ ಶಿಬಿರದಲ್ಲಿ ಶಿಬಿರದ ನಿರ್ದೇಶಕರು ಹಾಗೂ ತರಬೇತುದಾರರಾದ ಚಿತ್ರ ನಟ ಹಾಗೂ ನಿರ್ದೇಶಕ ಅವಿನಾಶ್ ಶಠಮರ್ಶನ್ ರವರು ಮಾರ್ಗದರ್ಶನ ನೀಡಿದರು.ಬಿರದಲ್ಲಿ ಭಾಗವಹಿಸಿದ್ದ ಚಿಣ್ಣರು ಹಾಡಿ ಕುಣಿದು ನಲಿದು ಸಂಭ್ರಮಿಸಿದರು. ಇನ್ನೂ ಕೆಲವು ಮಕ್ಕಳು ಲಲಿತ ಕಲೆ ಚಿತ್ರಕಲೆ ಗಳಲ್ಲಿ ಮಗ್ನರಾಗುವ ಮೂಲಕ ತಮ್ಮ ಆಸಕ್ತಿಯನ್ನು ತೋರ್ಪಡಿಸಿದರು. ಪೇಪರ್ ಕ್ರಾಫ್ಟ್ ಕ್ಲೇ ಆರ್ಟ್ ಇನ್ನಿತರ ಚಟುವಟಿಕೆಗಳಲ್ಲಿ ಶಿಬಿರಾರ್ಥಿಗಳು ತಲ್ಲೀನರಾಗಿದ್ದರು.
ವಿವಿಧ ಚಟುವಟಿಕೆಗಳಲ್ಲಿ ಮಕ್ಕಳೊಂದಿಗೆ ಪೋಷಕರು ಸಹ ಭಾಗವಹಿಸಿ ತಮ್ಮ ಬಾಲ್ಯವನ್ನು ನೆನೆದರು. ಸದರಿ ಬೇಸಿಗೆ ಶಿಬಿರ ಈ ತಿಂಗಳ 28 ರ ವರೆಗೆ ಇನ್ನೂ ಹೆಚ್ಚಿನ ತರಬೇತಿ ಹಾಗೂ ವಿಶೇಷತೆಗಳೊಂದಿಗೆ ನಡೆಯಲಿದ್ದು ಪೋಷಕರು ತಮ್ಮ ಮಕ್ಕಳನ್ನು ಶಿಬಿರಕ್ಕೆ ಸೇರಿಸಬಹುದು. ಆಸಕ್ತರು ಮೊಬೈಲ್ ಸಂಖ್ಯೆ 8217506849 , 9900888894 ಗೆ ಸಂಪರ್ಕಿಸಬಹುದು ಎಂದು ಆಯೋಜಕರು ತಿಳಿಸಿದ್ದಾರೆ.