ಕೌಶಲ್ಯ ಅಭಿಯಾನ- ಯುವ ಸಬಲೀಕರಣ’ ಕಾರ್ಯಗಾರದಲ್ಲಿ ಮುರಳೀಧರ ಹಾಲಪ್ಪ ಅಭಿಮತ
ತುಮಕೂರು: ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಯುವ ಜನತೆಯ ಸಬಲೀಕರಣಕ್ಕೆ ವಿದ್ಯಾರ್ಹತೆಯ ಜೊತೆಗೆ ಮಾರುಕಟ್ಟೆ ಬಯಸುವ ವಿಭಿನ್ನ ಕೌಶಲ್ಯಗಳನ್ನು ಕರಗತ ಮಾಡಿಕೊಳ್ಳುವ ಅವಶ್ಯಕತೆಯಿದೆ ಎಂದು ಕೌಶಲ್ಯ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಮುರಳೀಧರ ಹಾಲಪ್ಪ ಹೇಳಿದರು.
ವಿಶ್ವವಿದ್ಯಾನಿಲಯ ಕಲಾ ಕಾಲೇಜಿನ ವಾಣಿಜ್ಯಶಾಸ್ತç ಮತ್ತು ನಿರ್ವಹಣಾ ವಿಭಾಗವು ಮಂಗಳವಾರ ಆಯೋಜಿಸಿದ್ದ ‘ಕೌಶಲ್ಯ ಅಭಿಯಾನ- ಯುವ ಸಬಲೀಕರಣ’ ಕುರಿತ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.
ಇಂದು ಉನ್ನತ ಹುದ್ದೆಯಲ್ಲಿರುವ ಅನೇಕರು ಗ್ರಾಮೀಣ ಭಾಗದಲ್ಲಿ ವಿದ್ಯಾಭ್ಯಾಸ ಮಾಡಿ ಬಂದವರೇ ಆಗಿದ್ದು, ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಗುರಿಯನ್ನಿಟ್ಟುಕೊಂಡು ವಿದ್ಯಾಭ್ಯಾಸ ಮಾಡಿದರೆ ಕನಸು ನನಸಾಗುವುದರಲ್ಲಿ ಯಾವುದೇ ಸಂಶಯವಿಲ್ಲ. ಅವಕಾಶಗಳ ಸದ್ಬಳಕೆಯಿಂದ ಯಶಸ್ಸು ನಿಮ್ಮದಾಗುತ್ತದೆ ಎಂದು ತಿಳಿಸಿದರು.
ತುಮಕೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ಎಂ. ವೆಂಕಟೇಶ್ವರಲು ಮಾತನಾಡಿ, ಸಂಶೋಧನೆಗೆ ಒತ್ತು ಕೊಟ್ಟು ನಮ್ಮ ವಿವಿಯ ಹಾಗೂ ಇಂಗ್ಲೆಡ್ನ ಬರ್ಮಿಂಗ್ಹಾö್ಯಮ್ ವಿಶ್ವವಿದ್ಯಾನಿಲಯದ ಸಂಶೋಧನಾರ್ಥಿಗಳು, ವಿದ್ಯಾರ್ಥಿಗಳು ವಿನಿಮಯ ಆಧಾರಿತ ಪದ್ಧತಿಯನ್ನು ಅನುಸರಿಸಲು ಮುಂದಾಗಿದೆ. ಈ ಅಧ್ಯಯನ ಮಾರ್ಗಕ್ಕೆ ೧೦೦೦೦ ಯುಕೆ ಪೌಂಡ್ಗಳ ವೇತನ ದೊರೆಯಲಿದೆ ಎಂದು ತಿಳಿಸಿದರು.
ವಿಶ್ವವಿದ್ಯಾನಿಲಯದಲ್ಲಿ ಶೇ.೭೦ರಷ್ಟು ವಿದ್ಯಾರ್ಥಿಗಳು ಗ್ರಾಮೀಣ ಭಾಗದಿಂದ ಬರುತ್ತಾರೆ. ಪ್ರತಿಭೆಗೆ ಕೊರತೆ ಇಲ್ಲದಿದ್ದರೂ, ಕೌಶಲ್ಯ ತರಬೇತಿಯ ಅಗತ್ಯವಿದೆ. ಸೂಕ್ತ ವೇದಿಕೆಯ ಅಗತ್ಯವಿದೆ. ಕೈಗಾರಿಕೋದ್ಯಮಗಳ ಪರಿಚಯ, ಉದ್ಯಮಶೀಲಾಧಾರಿತ ಕಾರ್ಯಕ್ರಮಗಳನ್ನು ಆಯೋಜಿಸುವ, ವಿದ್ಯಾರ್ಥಿಗಳಲ್ಲಿ ಉದ್ಯೋಗದ ಅವಶ್ಯಕತೆಯ ಅರಿವು ಮೂಡಿಸುವ ನಿಟ್ಟಿನಲ್ಲಿ ವಿವಿಯು ಮುನ್ನುಗ್ಗುತ್ತಿದೆ ಎಂದರು.
ಎಸ್ಬಿಐ ಬ್ಯಾಂಕ್ನ ಜಿಲ್ಲಾ ಮುಖ್ಯ ವ್ಯವಸ್ಥಾಪಕ ಪ್ರಕಾಶ್ ಮಾತನಾಡಿ, ಸರ್ಕಾರದಿಂದ ಬಹಳಷ್ಟು ಬ್ಯಾಂಕಿAಗ್ ಪರೀಕ್ಷೆಗಳು ಆಯೋಜಿಸಲಾಗುತ್ತಿದೆ. ಪರೀಕ್ಷೆಗೆ ತರಬೇತಿ ಬಹಳ ಮುಖ್ಯ. ಉತ್ತೀರ್ಣರಾಗಲಿಲ್ಲವೆಂದು ಎದೆಗುಂದುವುದು ಬೇಡ. ಪ್ರಯತ್ನ ಮಾಡಿ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳಿ. ಶಿಕ್ಷಣಕ್ಕೆ ೪% ಬಡ್ಡಿದರದಲ್ಲಿ ೩೦ಲಕ್ಷದವರೆಗೂ ಬ್ಯಾಂಕ್ಗಳಲ್ಲಿ ಸಾಲ ದೊರೆಯುತ್ತದೆ ಎಂದು ತಿಳಿಸಿದರು.
ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತುದಾರ ರಾಜೀವ್ ಪ್ರಕಾಶ್ ಮಾತನಾಡಿ, ನಿರುದ್ಯೋಗ ಸಮಸ್ಯೆ ಉಂಟಾಗುತ್ತಿರುವುದಕ್ಕೆ ಪ್ರಮುಖ ಕಾರಣ ಮಾಹಿತಿಯ ಕೊರತೆ. ಪ್ರಶ್ನೆ ಕೇಳುವ ಮೂಲಕ ಹೊಸ ಜಗತ್ತನ್ನು ಅರ್ಥೈಸಿಕೊಳ್ಳಬೇಕು. ಸಂವಹನ, ತಂತ್ರಜ್ಞಾನದ ಅರಿವಿದ್ದರೆ ಯಾವುದೇ ಪರೀಕ್ಷೆಗಳನ್ನು ಎದುರಿಸಬಹುದು ಎಂದು ಹೇಳಿದರು
ಕಾರ್ಯಕ್ರಮದಲ್ಲಿ ವಿವಿ ಕುಲಸಚಿವೆ ನಾಹಿದಾ ಜûಮ್ ಜûಮ್, ಕಲಾ ಕಾಲೇಜಿನ ಪ್ರಾಂಶುಪಾಲ ಪ್ರೊ. ಬಿ. ಕರಿಯಣ್ಣ, ವಾಣಿಜ್ಯಶಾಸ್ತç ಮತ್ತು ನಿರ್ವಹಣಾ ವಿಭಾಗದ ಮುಖ್ಯಸ್ಥೆ ಡಾ. ಸಿ. ಶೋಭಾ, ಎಂಎಸ್ಎAಇ ನಿವೃತ್ತ ನಿರ್ದೇಶಕ ಬದ್ರಿನಾಥ್, ತುಮಕೂರು ಜಿಲ್ಲಾ ಪಂಚಾಯತ್ ಶಿಕ್ಷಣ ಅಧಿಕಾರಿ ಸುಧಾಕರ್, ರೂಟ್ಸಿಟಿ ವ್ಯವಸ್ಥಾಪಕ ಪ್ರದೀಪ್ ಭಾಗವಹಿಸಿದ್ದರು
Tumkur VV, ಕೌಶಲ್ಯ ಅಭಿಯಾನ- ಯುವ ಸಬಲೀಕರಣ ಕಾರ್ಯಗಾರ
Leave a comment
Leave a comment