ತುಮಕೂರು ವಿಶ್ವವಿದ್ಯಾನಿಲಯದ ಡಾ. ಬಿ. ಆರ್. ಅಂಬೇಡ್ಕರ್ ಅಧ್ಯಯನ ಕೇಂದ್ರ ಶುಕ್ರವಾರ ಆಯೋಜಿಸಿದ್ದ ಡಾ. ಬಿ. ಆರ್. ಅಂಬೇಡ್ಕರ್ ಅವರ ೧೩೨ನೇ ಜನ್ಮದಿನಾಚರಣೆ ಕಾರ್ಯಕ್ರಮವನ್ನು ರಾಷ್ಟçಪ್ರಶಸ್ತಿ ಪುರಸ್ಕೃತ ಹರಿಕಥಾ ವಿದ್ವಾಂಸ ಡಾ. ಲಕ್ಷö್ಮಣದಾಸ್ ಉದ್ಘಾಟಿಸಿದರು. ಕುಲಪತಿ ಪ್ರೊ. ಎಂ. ವೆಂಕಟೇಶ್ವರಲು, ಕುಲಸಚಿವೆ ನಾಹಿದಾ ಜûಮ್ ಜûಮ್, ಡಾ. ಚಿಕ್ಕಣ್ಣ, ಡಾ. ನಾಗಭೂಷಣ್ ಬಗ್ಗನಡು ಇದ್ದಾರೆ.
ಅಂಬೇಡ್ಕರರಿAದ ಶಿಕ್ಷಣದ ಶಕ್ತಿಯ ಅನಾವರಣ: ಡಾ. ಲಕ್ಷö್ಮಣದಾಸ್
ತುಮಕೂರು: ಯಾವುದೇ ವ್ಯಕ್ತಿ ಶಿಕ್ಷಣದ ಮಹತ್ವ ಅರಿತು ಅಧ್ಯಯನಶೀಲನಾದಾಗ ಪ್ರಗತಿ ಹೊಂದಿ ಸಾಧನೆ ಮಾಡುತ್ತಾನೆ. ಇದಕ್ಕೆ ನೈಜ ಉದಾಹರಣೆ ಎಂದರೆ ಬಾಬಾ ಸಾಹೇಬ್ ಅಂಬೇಡ್ಕರ್ ಎಂದು ರಾಷ್ಟçಪ್ರಶಸ್ತಿ ಪುರಸ್ಕೃತ ಹರಿಕಥಾ ವಿದ್ವಾಂಸ ಡಾ. ಲಕ್ಷö್ಮಣದಾಸ್ ಹೇಳಿದರು.
ತುಮಕೂರು ವಿಶ್ವವಿದ್ಯಾನಿಲಯದ ಡಾ. ಬಿ. ಆರ್. ಅಂಬೇಡ್ಕರ್ ಅಧ್ಯಯನ ಕೇಂದ್ರ ಶುಕ್ರವಾರ ಆಯೋಜಿಸಿದ್ದ ಡಾ. ಬಿ. ಆರ್. ಅಂಬೇಡ್ಕರ್ ಅವರ ೧೩೨ನೇ ಜನ್ಮದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಅಂಬೇಡ್ಕರ್ ಅವರ ಕುರಿತಾದ ಲೇಖನಗಳು, ಪುಸ್ತಕಗಳನ್ನು ಓದಿದಾಗ, ಅವರ ಚಿಂತನೆಗಳನ್ನು ಆದರ್ಶಗಳನ್ನು ಪ್ರತಿಯೊಬ್ಬರೂ ಬದುಕಿನಲ್ಲಿ ಅಳವಡಿಸಿಕೊಂಡಾಗ ಮಾತ್ರ ಆ ಮಹಾನ್ ಚೇತನನಿಗೆ ಗೌರವ ಸಲ್ಲಿಸಿದಂತೆ. ಇಂದಿನ ಯುವಸಮೂಹ ಅಂಬೇಡ್ಕರ್ ವ್ಯಕ್ತಿತ್ವವನ್ನು ಮೈಗೂಡಿಸಿಕೊಳ್ಳಬೇಕು ಎಂದರು.
ಅಧ್ಯಕ್ಷೀಯ ನುಡಿಗಳನ್ನಿತ್ತ ಕುಲಪತಿ ಪ್ರೊ. ಎಂ. ವೆಂಕಟೇಶ್ವರಲು, ಕಷ್ಟದ ಹಿನ್ನೆಲೆಯಿಂದ ಬಂದವರು ಉನ್ನತ ಸ್ಥಾನಕ್ಕೇರುತ್ತಾರೆ. ಭಾರತದ ಪ್ರತೀ ವ್ಯಕ್ತಿಯೂ ಅಂಬೇಡ್ಕರ್ ಅವರಂತೆ ಜ್ಞಾನ ಸಂಪನ್ನರೂ, ಮಾನವ ಪ್ರೇಮಿಗಳೂ ಆಗಬೇಕು ಎಂದರು.
ಕುಲಸಚಿವೆ ನಾಹಿದಾ ಜûಮ್ ಜûಮ್ ಮಾತನಾಡಿ, ಅಂಬೇಡ್ಕರ್ ಅವರು ಮಹಾನ್ ದೇಶಪ್ರೇಮಿಯಾಗಿದ್ದರು. ಯಾವುದೇ ಒಂದು ಜಾತಿಗೆ ಅವರನ್ನು ಸೀಮಿತಗೊಳಿಸಬಾರದು. ಬದುಕಿನಲ್ಲಿ ಏನಾದರು ಸಾಧಿಸಬೇಕೆಂದು ಶ್ರಮಿಸುತ್ತಿರುವವರೆಲ್ಲರೂ ಅಂಬೇಡ್ಕರ್ ಅವರನ್ನು ನಾಯಕರನ್ನಾಗಿ ಸ್ವೀಕರಿಸಬೇಕು ಎಂದರು.
ತುಮಕೂರು ವಿವಿ ಡಾ. ಬಿ. ಆರ್. ಅಂಬೇಡ್ಕರ್ ಅಧ್ಯಯನ ಕೇಂದ್ರದ ಸಂಯೋಜಕ ಡಾ. ಚಿಕ್ಕಣ್ಣ ಪ್ರಾಸ್ತಾವಿಕ ನುಡಿಗಳನ್ನಾಡಿ ಸ್ವಾಗತಿಸಿದರು. ಸ್ನಾತಕೋತ್ತರ ರಾಜ್ಯಶಾಸ್ತç ಅಧ್ಯಯನ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ. ಮಹಾಲಿಂಗ ಕೆ. ವಂದಿಸಿದರು. ಸ್ನಾತಕೋತ್ತರ ಕನ್ನಡ ವಿಭಾಗದ ಪ್ರಾಧ್ಯಾಪಕ ಡಾ. ನಾಗಭೂಷಣ್ ಬಗ್ಗನಡು ನಿರೂಪಿಸಿದರು.