ತುಮಕೂರು ವಿಶ್ವವಿದ್ಯಾನಿಲಯ ಅಧ್ಯಾಪಕರ ಸಂಘವು ಸೋಮವಾರ ಹಮ್ಮಿಕೊಂಡಿದ್ದ ಹಂಪಿ ಕನ್ನಡ ವಿಶ್ವವಿದ್ಯಾನಿಲಯದ ಕುಲಪತಿಯಾಗಿ ನೇಮಕಗೊಂಡ ಪ್ರೊ. ಡಿ. ವಿ. ಪರಮಶಿವಮೂರ್ತಿ ಅವರ ಅಭಿನಂದನಾ ಕಾರ್ಯಕ್ರಮದಲ್ಲಿ ಪ್ರೊ. ಡಿ. ವಿ. ಪರಮಶಿವಮೂರ್ತಿ ಅವರನ್ನು ಗೌರವಿಸಲಾಯಿತು. ತುಮಕೂರು ವಿವಿ ಕುಲಪತಿ ಪ್ರೊ. ಎಂ. ವೆಂಕಟೇಶ್ವರಲು, ನಾಹಿದಾ ಜûಮ್ ಜûಮ್, ಪ್ರೊ. ಪ್ರಸನ್ನ ಕುಮಾರ್ ಕೆ., ಡಾ. ಎಚ್. ಕೆ. ಶಿವಲಿಂಗಸ್ವಾಮಿ, ಡಾ. ವಿಲಾಸ್ ಎಂ. ಕಾದ್ರೋಳಕರ ಇದ್ದಾರೆ.
ಕುಲಪತಿ ಹುದ್ದೆ ಒಂದು ಜವಾಬ್ದಾರಿ: ಪ್ರೊ. ಡಿ. ವಿ. ಪರಮಶಿವಮೂರ್ತಿ
ಹಂಪಿ ಕನ್ನಡ ವಿವಿಗೆ ನೂತನ ಕುಲಪತಿಯಾಗಿ ನೇಮಕಗೊಂಡ ಪ್ರೊ. ಡಿ. ವಿ. ಪರಮಶಿವಮೂರ್ತಿ ಅವರ ಅಭಿನಂದನಾ ಕಾರ್ಯಕ್ರಮ
ತುಮಕೂರು: ಹಂಪಿ ಕನ್ನಡ ವಿವಿಗೆ ಕುಲಪತಿಯಾಗಿ ಆಯ್ಕೆಯಾಗಿರುವುದು ನನ್ನ ಜವಾಬ್ದಾರಿ ಹೆಚ್ಚಿಸಿದೆ. ಕುಲಪತಿ ಹುದ್ದೆ ಅಧಿಕಾರಕ್ಕಿಂತÀಲೂ ಜವಾಬ್ದಾರಿಯ ಸಂಕೇತವಾಗಿದೆ ಎಂದು ಹಂಪಿ ಕನ್ನಡ ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ಡಿ. ವಿ. ಪರಮಶಿವಮೂರ್ತಿ ಹೇಳಿದರು.
ತುಮಕೂರು ವಿಶ್ವವಿದ್ಯಾನಿಲಯ ಅಧ್ಯಾಪಕರ ಸಂಘವು ಸೋಮವಾರ ಹಮ್ಮಿಕೊಂಡಿದ್ದ ಅಭಿನಂದನಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ತುಮಕೂರು ವಿವಿಯಲ್ಲಿ ಪ್ರಾಧ್ಯಾಪಕನಾಗಿ ಗಳಿಸಿದ ಅನುಭವದೊಂದಿಗೆ, ನಿಮ್ಮೆಲ್ಲರ ಬೆಂಬಲದೊAದಿಗೆ ಹಂಪಿ ಕನ್ನಡ ವಿವಿಯಲ್ಲಿ ಉತ್ತಮ ರೀತಿಯ ಅಭಿವೃದ್ಧಿ ಕಾರ್ಯಗಳನ್ನು ನಿರ್ವಹಿಸುತ್ತೇನೆ. ವಿದ್ಯಾರ್ಥಿಗಳ ಏಳಿಗೆಗಾಗಿ ಶ್ರಮಿಸುತ್ತೇನೆ. ಕುಲಪತಿ ಹುದ್ದೆಯನ್ನು ಶೈಕ್ಷಣಿಕ ಔನ್ನತ್ಯಕ್ಕಾಗಿ ಬಳಸಿಕೊಳ್ಳುತ್ತೇನೆ ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ತುಮಕೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ಎಂ. ವೆಂಕಟೇಶ್ವರಲು, ತುಮಕೂರು ವಿವಿಯ ೧೯ ವರ್ಷಗಳ ಸಾಧನೆಯಲ್ಲಿ ಪ್ರೊ. ಡಿ. ವಿ. ಪರಮಶಿವಮೂರ್ತಿ ಅವರು ಹಂಪಿ ವಿವಿಗೆ ಕುಲಪತಿಗಳಾಗಿರುವುದು ಕೂಡ ಒಂದು. ನಿಶ್ಚಲವಾದ ಮನಸ್ಸು ನಮ್ಮದಾದಾಗ ಮಾತ್ರ ಗುರಿಯನ್ನು ತಲುಪಲು ಸಾಧ್ಯ. ವ್ಯಕ್ತಿಗೆ ಅಧಿಕಾರ ಮತ್ತು ಜವಾಬ್ದಾರಿ ಬಂದಾಗ ಬದಲಾಗದೆ ಇರುವವರು ಎಂದಿಗೂ ಬದಲಾಗುವುದಿಲ್ಲ. ಪ್ರೊ. ಡಿ. ವಿ. ಪರಮಶಿವಮೂರ್ತಿ ಅವರು ಹಂಪಿ ಕನ್ನಡ ವಿವಿಯ ಕುಲಪತಿಗಳಾಗಿ ನೇಮಕಗೊಂಡಿರುವುದು ಹೆಮ್ಮೆಯ ವಿಷಯ ಎಂದರು.
ತುಮಕೂರು ವಿಶ್ವವಿದ್ಯಾನಿಲಯದ ಕುಲಸಚಿವೆ ನಾಹಿದಾ ಜûಮ್ ಜûಮ್ ಮಾತನಾಡಿ, ಪ್ರೊ. ಡಿ. ವಿ. ಪರಮಶಿವಮೂರ್ತಿ ಅವರ ಕಾರ್ಯನಿಷ್ಠೆ ವಿಶೇಷವಾದದ್ದು. ಶಾಸನ ವಿದ್ವಾಂಸರಾಗಿ ಅವರ ಕಾರ್ಯಸಾಧನೆ ಮೆಚ್ಚುವಂಥದ್ದು. ಅವರ ವ್ಯಕ್ತಿತ್ವ ಎಲ್ಲರಿಗೂ ಮಾದರಿ. ಪ್ರತಿಯೊಬ್ಬರಲ್ಲೂ ಸ್ಫೂರ್ತಿ ತುಂಬುವ ವ್ಯಕ್ತಿತ್ವ ಅವರದ್ದು. ಅವರ ಹೆಜ್ಜೆಯಲ್ಲೆ ನಾವೆಲ್ಲ ನಡೆದರೆ ಮುಂದಿನ ದಿನಗಳಲ್ಲಿ ಇನ್ನಷ್ಟೂ ಉತ್ತಮ ಹುದ್ದೆ ಲಭಿಸುವುದು ಖಂಡಿತ ಎಂದು ತಿಳಿಸಿದರು.
ತುಮಕೂರು ವಿಶ್ವವಿದ್ಯಾನಿಲಯದ ಪರೀಕ್ಷಾಂಗ ಕುಲಸಚಿವ ಪ್ರೊ. ಪ್ರಸನ್ನ ಕುಮಾರ್ ಕೆ. ಮಾತನಾಡಿ, ಬರುವÀ ದಿನಗಳಲ್ಲಿ ಹಂಪಿ ವಿವಿ ಮತ್ತಷ್ಟು ಅಭಿವೃದ್ಧಿ ಹೊಂದಲಿದೆ. ಪ್ರೊ. ಡಿ. ವಿ. ಪರಮಶಿವಮೂರ್ತಿ ಅವರು ತಮ್ಮ ಜವಾಬ್ದಾರಿಯನ್ನು ಉತ್ತಮ ರೀತಿಯಲ್ಲಿ ನಿರ್ವಹಿಸುತ್ತಾರೆ ಎಂದು ಹೇಳಿದರು.
ತುಮಕೂರು ವಿಶ್ವವಿದ್ಯಾನಿಲಯದ ಅಧ್ಯಾಪಕರ ಸಂಘದ ಅಧ್ಯಕ್ಷ ಡಾ. ಎಚ್. ಕೆ. ಶಿವಲಿಂಗಸ್ವಾಮಿ ಸ್ವಾಗತಿಸಿದರು. ಅಧ್ಯಾಪಕರ ಸಂಘದ ಕಾರ್ಯದರ್ಶಿ ಡಾ. ವಿಲಾಸ್ ಎಂ. ಕಾದ್ರೋಳಕರ ವಂದಿಸಿದರು.
ತುಮಕೂರು ವಿವಿ – ಹಂಪಿ ವಿವಿ ನೂತನ ಕುಲಪತಿ ಪ್ರೊ. ಡಿ. ವಿ. ಪರಮಶಿವಮೂರ್ತಿ ಅವರ ಅಭಿನಂದನಾ ಕಾರ್ಯಕ್ರಮ
Leave a comment
Leave a comment