ತುಮಕೂರು ಜಿಲ್ಲಾ ತಿರಂಗಯಾತ್ರಾ ಸಮಿತಿ ವತಿಯಿಂದ ಆಗಸ್ಟ್ ೧೫ರ ಸಂಜೆ ನಾಲ್ಕು ಗಂಟೆಗೆ ನಗರದ ಎಸ್.ಐ.ಟಿ. ಕಾಲೇಜು ಮುಂಭಾಗದಿAದ ಗಂಗೋತ್ರಿ ರಸ್ತೆ, ಎಸ್.ಐ.ಟಿ, ಮತ್ತು ಎಸ್.ಎಸ್.ಪುರಂ ಮುಖ್ಯರಸ್ತೆ ಮೂಲಕ ಸರಕಾರಿ ಜೂನಿಯರ್ ಕಾಲೇಜು ಮೈಧಾನದವರೆಗೆ ತಿರಂಗಯಾತ್ರೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಸಮಿತಿಯ ಸಂಚಾಲಕ ಹಾಗೂ ಜಿಲ್ಲಾ ಬಿಜೆಪಿ ಅಧ್ಯಕ್ಷ ರವಿಶಂಕರ್ ಹೆಬ್ಬಾಕ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು,ಆಗಸ್ಟ್ ೧೫ರ ಸಂಜೆ ನಾಲ್ಕು ಗಂಟೆಗೆ ಎಸ್.ಐ.ಟಿ.ಕಾಲೇಜು ಮುಂಭಾಗ ದಿಂದ ಆರಂಭವಾಗುವ ತಿರಂಗಯಾತ್ರೆಗೆ ಸಿದ್ದಗಂಗಾ ಮಠಾಧ್ಯಕ್ಷ ಶ್ರೀಶ್ರಿಸಿದ್ದಲಿಂಗಸ್ವಾಮೀಜಿ, ಹಿರೇಮಠದ ಡಾ.ಶ್ರೀಶಿವಾ ನಂದ ಶಿವಾಚಾರ್ಯಸ್ವಾಮೀಜಿ,ರಾಮಕೃಷ್ಣ-ವಿವೇಕಾನಂದ ಮಠದ ಡಾ.ವೀರೇಶಾನಂದಸರಸ್ವತಿ ಸ್ವಾಮೀಜಿ, ಬೆಳ್ಳಾವಿಯ ಕಾರದೇಶ್ವರ ಮಠದ ಶ್ರೀಕಾರದ ವೀರಬಸವ ಸ್ವಾಮೀಜಿ,ಬಿಂದುಶೇಖರ್ ಓಡೆಯರ್,ಮಹಾಲಕ್ಷಿö್ಮ ಸಂಸ್ಥಾನದ ಶ್ರೀಜ್ಞಾನಾ ನಂದಪುರಿಸ್ವಾಮೀಜಿ,ಅಕ್ಕಿರಾAಪುರದ ಕುಂಚಟಿಗ ಒಕ್ಕಲಿಗ ಸಂಸ್ಥಾನದ ಡಾ.ಶ್ರೀಹನುಮಂತನಾಥ ಸ್ವಾಮೀಜಿ, ಬೋವಿ ಮಠ ಶ್ರೀಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ,ಸಿದ್ದರಬೆಟ್ಟದಶ್ರೀಗಳು ಚಾಲನೆ ನೀಡುವರು.ದೇಶಭಕ್ತಿ, ರಾಷ್ಟçಪ್ರೇಮ ಬಿಂಬಿಸುವ ವಿವಿಧ ಕಲಾ ತಂಡಗಳೊAದಿಗೆ ಸಾವಿರಾರು ಜನರು ಭಾರತದ ತ್ರಿವರ್ಣ ದ್ವಜವನ್ನು ಹಿಡಿದು,ಸ್ವಾತಂತ್ರ ಹೋರಾಟಗಾರರ ವಿವಿಧ ವೇಷಭೂಷಣಗಳೊಂದಿಗೆ ಮಕ್ಕಳು ತಿರಂಗಯಾತ್ರೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ರವಿಶಂಕರ್ ವಿವರ ನೀಡಿದರು.
ಸಂಜೆ ನಾಲ್ಕು ಗಂಟೆಗೆ ಆರಂಭವಾಗುವ ತಿರಂಗಯಾತ್ರೆ ಸುಮಾರು ೨ ಗಂಟೆಗಳ ಕಾಲ ನಡೆಯಲಿದ್ದು,ಹಲವಾರು ಸಂಘ ಸಂಸ್ಥೆಗಳು ಸಹಕಾರ ನೀಡಿವೆ.ಇದರಲ್ಲಿ ಎನ್.ಸಿ.ಸಿ., ಎನ್.ಎಸ್.ಎಸ್., ಮಾಜಿ ಸೈನಿಕರು,ಮಹಿಳೆಯರು ಸೇರಿದಂತೆ ಹಲವರು ಭಾಗವಹಿಸಲಿದ್ದಾರೆ.ಸರಕಾರಿ ಜೂನಿಯರ್ ಕಾಲೇಜು ತಲುಪಿದ ನಂತರ ಅಕರ್ಷಕ ಸಿಡಿಮದ್ದಿನೊಂದಿಗೆ ತಿರಂಗಯಾತ್ರೆ ಕೊನೆಗೊಳ್ಳಲಿದೆ.ನಗರದ ಜನತೆಗೆ ಹೆಚ್ಚಿನ ರೀತಿಯಲ್ಲಿ ಈ ತಿರಂಗಯಾತ್ರೆಯಲ್ಲಿ ಪಾಲ್ಗೊಳ್ಳುವಂತೆ ತಿರಂಗಯಾತ್ರಾ ಸಮಿತಿ ಸಂಚಾಲಕ ರವಿಶಂಕರ್ ಹೆಬ್ಬಾಕ ಮನವಿ ಮಾಡಿದರು.
ಶಾಸಕ ಜಿ.ಬಿ.ಜೋತಿಗಣೇಶ್ ಮಾತನಾಡಿ,ಅಜಾದಿ ಕಾ ಅಮೃತ ಮಹೋತ್ಸವದ ಅಂಗವಾಗಿ ಕಳೆದ ಸಾಲಿನಿಂದ ನಗರದಲ್ಲಿ ತಿರಂಗಯಾತ್ರೆಯನ್ನು ಹಮ್ಮಿಕೊಂಡು ಬರಲಾಗುತ್ತಿದೆ.ಈ ಬಾರಿಯೂ ಸಹ ಅದ್ದೂರಿಯಾಗಿ ತಿರಂಗಯಾತ್ರಾ ಕಾರ್ಯಕ್ರಮ ಜರುಗಲಿದೆ.ಹರಘರ ಮೇ ತಿರಂಗ ಎಂಬ ಸಂದೇಶದAತೆ ಪ್ರತಿಯೊಬ್ಬರು ತಮ್ಮ ಮನೆಯ ಮೇಲೆ ತ್ರಿವರ್ಣದ್ವಜ ಹಾರಿಸುವುದರ ಜೊತೆಗೆ,ತರಂಗಯಾತ್ರೆಯಲ್ಲಿ ಪಾಲ್ಗೊಂಡು ತಮ್ಮ ದೇಶಪ್ರೇಮ, ರಾಷ್ಟçಪ್ರೇಮವನ್ನು ಮರೆಯುವಂತೆ ಕೋರಿದರು.
ಸುದ್ದಿಗೋಷ್ಠಿಯಲ್ಲಿ ತಿರಂಗ ಯಾತ್ರಾ ಸಮಿತಿಯ ಸಂಚಾಲಕರಾದ ಶಿವಾಜಿ ಪತ್ತಿನ ಸಹಕಾರ ಬ್ಯಾಂಕಿನ ಆಡಿಟರ್ ಸುರೇಶ್,ವಿಶ್ವನಾಥ್, ಬೋವಿ ಸಮಾಜದ ಪರುಷೋತ್ತಮ್,ಟೂಡಾ ಮಾಜಿ ಅಧ್ಯಕ್ಷ ಬಾವಿಕಟ್ಟೆ ನಾಗಣ್ಣ,ಬಾಲಾಜಿ, ಶಂಕರ್ ಮತ್ತಿತರರು ಉಪಸ್ಥಿತರಿದ್ದರು.
TUMKUR ತಿರಂಗಯಾತ್ರೆಯನ್ನು ಹಮ್ಮಿಕೊಳ್ಳಲಾಗಿದೆ
Leave a comment
Leave a comment