ರಾಜ್ಯದಲ್ಲಿ ನಾಲ್ಕು ವರ್ಷ ಪದವಿ ಸ್ಥಗಿತವಾದ ಹಿನ್ನೆಲೆಯಲ್ಲಿ ಎಐಡಿಎಸ್ಓ ನೇತೃತ್ವದಲ್ಲಿ ನಡೆದ ಐತಿಹಾಸಿಕ ಹೋರಟಕ್ಕೆ, ಜನಹೋರಾಟಕ್ಕೆ ಗೆಲುವು ಸಿಕ್ಕಿದೆ ಈ ವಿಜಯೋತ್ಸವವನ್ನು ಇಂದು ತುಮಕೂರಿನ ಎಐಡಿಎಸ್ಓ ಕಚೇರಿಯಲ್ಲಿ ಆಚರಿಸಲಾಯಿತು.
ವಿಜಯೋತ್ಸವ ಸಭೆಯನ್ನುದ್ದೇಶಿಸಿ ಎಐಯುಟಿಯುಸಿ ಕಾರ್ಮಿಕ ಸಂಘಟನೆಯ ಮಂಜುಳ ಗೋನಾವರ ಮಾತನಾಡಿ; ಇಡೀ ದೇಶದಾದ್ಯಂತ ಎನ್ಇಪಿ 2020 ನೀತಿಯನ್ನು ಹಿಮ್ಮೆಟಿಸಿ ನಡೆದ ಹೋರಾಟ ಆದರು ಕೇಂದ್ರ ಸರ್ಕಾರ ಜನರ ಹೋರಾಟಕ್ಕೆ ಸ್ಪಂದಿಸದೆ ಬಂಡತನದಿoದ ಈ ವಿದ್ಯಾರ್ಥಿವಿರೋಧಿ, ಶಿಕ್ಷಣ ವಿರೋಧಿ, ಜನವಿರೋಧಿ ನೀತಿಯನ್ನು ಜಾರಿಗೆ ತಂದಿತು. ಮುಂದುವರೆದು ನಮ್ಮ ರಾಜ್ಯ ಎನ್ಇಪಿ 2020 ನೀತಿಯನ್ನು ಯಾವುಯದೇ ತಯಾರಿಯಿಲ್ಲೆ ಜಾರಿ ಮಾಡಿದಾಗ ವಿದ್ಯಾರ್ಥಿಗಳ ಶಿಕ್ಷಕರ, ಪೋಷಕರ, ಶಿಕ್ಷಣ ಪ್ರೇಮಿ ಜನರಿಗೆ ಆತಂಕವುoಟುಮಾಡಿತು. ಇಂತಹ ಸಂದರ್ಭದಲ್ಲಿ ಎಐಡಿಎಸ್ಓ ವಿದ್ಯಾರ್ಥಿ ಸಂಘಟನೆ ವಿದ್ಯಾರ್ಥಿಗಳಿಗೆ ಸ್ಪಂದಿಸಿ ರಾಜ್ಯ ಮಟ್ಟದಿಂದ ಹಳ್ಳಿ ಮಟ್ಟದವರೆಗೆ ವಿದ್ಯಾರ್ಥಿಗಳನ್ನು ಸಂಘಟಿಸಿ ಹೋರಾಟವನ್ನು ಬೆಳೆಸಿತು. ಇಂದು ವಿದ್ಯಾರ್ಥಿಗಳ ನಿರಂತರ ಹೋರಾಟಕ್ಕೆ ರಾಜಿರಹಿತ ಹೋರಾಟಕ್ಕೆ ಗೆಲುವು ಸಿಕ್ಕೆದೆ. ರಾಜ್ಯದಾದ್ಯಂತ ವಿದ್ಯಾರ್ಥಿಗಳು ತಮ್ಮ ಗೆಲುವಿನ ವಿಜಯೋತ್ಸವ ಆಚರಿಸುತ್ತಿದ್ದಾರೆ ಎಂದರು.
ಎಐಡಿಎಸ್ಓ ಜಿಲ್ಲಾ ಅಧ್ಯಕ್ಷರಾದ ಅಶ್ವಿನಿ ಟಿ.ಈ ಮಾತನಾಡಿ; ವಿದ್ಯಾರ್ಥಿಗಳು ತಮ್ಮ ಶೈಕ್ಷಣಿಕ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಲು ಹೋರಾಟದ ಸಾಗರದಲ್ಲಿ ತಾವು ಒಂದಾಗಿ ಅನ್ಯಾಯದ ವಿರುದ್ಧ ಹೋರಾಟ ಕಟ್ಟಿದ್ದಾರೆ ಎನ್ಇಪಿ 2020 ನೀತಿಯನ್ನು ವಿರೋಧಿಸಿ ಸಾರ್ವಜನಿಜ ಶಿಕ್ಷಣದ ಉಳಿವಿಗಾಗಿ ಒಂದು ಕೋಟಿ ಸಹಿ ಸಂಗ್ರದಲ್ಲಿ ತುಮಕೂರಿನ ವಿದ್ಯಾರ್ಥಿಗಳೂ ಕೂಡ ಐದುಲಕ್ಷ ಸಹಿ ಸಂಗ್ರಹಿಸಿರುವುದು ಮುಂದುವರೆದು ವಿದ್ಯಾರ್ಥಿಗಳು ತಮ್ಮ ಸಾರ್ವಜನಿಕ ಶಿಕ್ಷಣ ಉಳಿಸಿ ಹೋರಾಟದಲ್ಲಿ ತಮ್ಮ ಪೋಷಕರ ಬೆಂಬಲ ಪಡೆದು ಜನಹೋರಾಟನ್ನಾಗಿ ಮಾಡಿದರು ಈ ಜನಹೋರಾಟಕ್ಕೆ ಯಶಸ್ವಿಯಾಗಿ ವಿಜಯ ಸಿಕ್ಕಿದೆ. ವಿದ್ಯಾರ್ಥಿಗಳು ಇನ್ನು ಹೆಚ್ಚಿನ ಹೋರಾಟಗಳನ್ನು ಕಟ್ಟಲು ಮತ್ತು ಶೈಕ್ಷಣಿಕ ಸಮಸ್ಯೆಗಳನ್ನು ಬಗೆಹರುಸಿಕೊಳ್ಳಲು ಒಗ್ಗೂಡಿ ಸಂಘಟಿತರಾಗಬೇಕೆoದು ಕರೆ ನೀಡಿದರು.
ಈ ಕಾರ್ಯಕ್ರಮದಲ್ಲಿ ಜಿಲ್ಲಾ ಕಾರ್ಯದರ್ಶಿಯಾದ ಲಕ್ಕಪ್ಪ ಸಿ.ಬಿ, ಕಚೇರಿ ಕಾರ್ಯದರ್ಶಿ ಅಕ್ಷರ, ಕಾರ್ಯಕಾರಿ ಸಮಿತಿಯ ಭರತ್, ಸುಮಂತ್, ಮಹೇಶ್, ಪಲ್ಲವಿ, ಮಾಂತೇಶ್, ನಾಗರಾಜು, ನಂದೀಶ್ ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.