ಎನ್.ಆರ್ ಕಾಲೋನಿಯ ಶಕ್ತಿ ದೇವತೆಗಳಾದ ಶ್ರೀದುರ್ಗಮ್ಮ, ಶ್ರೀಪೂಜಮ್ಮ. ಶ್ರೀದಾಳಮ್ಮ ಮತ್ತು ಶ್ರೀನಾಗಪ್ಪ ದೇವರುಗಳಿಗೆ 9 ದಿನದ ನವರಾತ್ರಿ ಪೂಜೆ ನೆರವೇರಿಸಿ ಮೂಲ ದೇವಸ್ಥಾನದ ಆವರಣದಲ್ಲಿ ಶಮಿ ಪೂಜೆ ಮಾಡಿ ನಂತರ ಜಿಲ್ಲಾಡಳಿತದ ಮೆರವಣಿಗೆಯಲ್ಲಿ ಪಾಲ್ಗೊಳ್ಳಲಾಯಿತು. ಶಮಿ ಪೂಜೆ ಮಾಡಿ ಬನ್ನಿ ಮರಕ್ಕೆ ಮೂಲ ನಿವಾಸಿಗಳ ಸಂಪ್ರದಾಯದoತೆ ಪೂಜೆ ನೆರವೇರಿಸಿ ಮಾತನಾಡಿದ ಎನ್.ಆರ್ ಕಾಲೋನಿ ಅಭಿವೃದ್ಧಿ ಸಂಘದ ಕಾರ್ಯದರ್ಶಿ ಎ.ನರಸಿಂಹಮೂರ್ತಿ ನಾಡಹಬ್ಬ ದಸರಾ, ಮಹಾನವಮಿ ಸಂಭ್ರಮದ ಶುಭಾಶಯಗಳು ಕೋರುವುದು ಮೊದಲ ಬಾರಿಗೆ ಜಿಲ್ಲಾಡಳಿತ ತುಮಕೂರು ದಸರಾ ಆಚರಣೆ ಮಾಡಿ ಸರ್ವ ಜನಾಂಗದ ಕುಲದೇವರುಗಳು ಮೆರವಣಿಗೆಯಲ್ಲಿ ಪಾಲ್ಗೊಳ್ಳಲು ಅವಕಾಶ ನೀಡಿದ್ದು ವಿಶೇಷವಾಗಿದೆ