ತುಮಕೂರು: ಇದೇ ಪ್ರಪಥಮ ಬಾರಿಗೆ ತುಮಕೂರಿನ ಸಾಹೇ (ಶ್ರೀ ಸಿದ್ಧಾರ್ಥ ಅಕಾಡೆಮಿ ಆಫ್ ಹೈಯರ್ ಎಜುಕೇಷನ್) ವಿಶ್ವವಿದ್ಯಾಲಯ ಅಖಿಲ ಭಾರತ ಅಂತರ ವಿಶ್ವವಿದ್ಯಾಲಯ ನೆಟ್ಬಾಲ್ ಚಾಂಪಿಯನ್ಶಿಪ್ನ್ನು ತುಮಕೂರಿನಲ್ಲಿ ಆಯೋಜಿಸುತ್ತಿದೆ. ಇದೇ ತಿಂಗಳ 12 ರಿಂದ 15 ರ ತನಕ ನಡೆಯಲಿರುವ ಈ ಟೂರ್ನಿಯಲ್ಲಿ ದೇಶದ 72 ವಿಶ್ವವಿದ್ಯಾಲಯದ ತಂಡಗಳು ಭಾಗವಹಿಸುತ್ತಿವೆ ಎಂದು ಸಾಹೇ ವಿಶ್ವವಿದ್ಯಾಲಯದ ಉಪಕುಲಪತಿ ಡಾ.ಕೆ.ಬಿ.ಲಿಂಗೇಗೌಡ ತಿಳಿಸಿದರು.
ನಗರದ ಸಮೀಪದ ಅಗಳಕೋಟೆಯಲ್ಲಿರುವ ಸಾಹೇ ವಿಶ್ವವಿದ್ಯಾಲಯದ ಆಡಳಿತ ಸಭಾಂಗಣದಲ್ಲಿoದು (ಶನಿವಾರ) ಪತ್ರಿಕಾಗೋಷ್ಠಿಯಲ್ಲಿ ಟೂರ್ನಿಯ ವಿವರ ನೀಡಿದ ಅವರು, ಒಂದು ತಂಡದಲ್ಲಿ 12 ಮಂದಿಯಿದ್ದು 852 ನೆಟ್ಬಾಲ್ ಕ್ರೀಡಾಪಟುಗಳು, ತಂಡದ ಕೋಚ್ ಮತ್ತು ಮ್ಯಾನೇಜರ್, 60 ರೆಫ್ರಿಗಳು, 250 ಮಂದಿ ಸಂಘಟಕನಾ ಸಮಿತಿ ಸದಸ್ಯರು ದೇಶದ ವಿವಿಧ ರಾಜ್ಯಗಳಿದ್ದು ಆಗಮಿಸುತ್ತಿದ್ದಾರೆ.ಅಖಿಲ ಭಾರತ ನೆಟ್ಬಾಲ್ ಫೆಡರೇಷನ್, ಕರ್ನಾಟಕ ಮತ್ತು ತುಮಕೂರು ವಿಭಾಗದ ಸಹಯೋಗದಲ್ಲಿ ರಾಷ್ಟ್ರೀಯ ಮಟ್ಟದ ಈ ನೆಟ್ಬಾಲ್ ಟೂರ್ನಿಯನ್ನು ಶ್ರೀ ಸಿದ್ಧಾರ್ಥ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ ಆಯೋಜಿಸುತ್ತಿದೆ ಎಂದರು.
Tumkur ರಾಷ್ಟ್ರೀಯ ಮಟ್ಟದ ಈ ನೆಟ್ಬಾಲ್ ಟೂರ್ನಿ

Leave a comment
Leave a comment