ತುಮಕೂರು:ಪತ್ರಿ ಮನುಷ್ಯನ ಒಳ್ಳೆಯ ಮತ್ತು ಕೆಟ್ಟ ಕ್ಷಣಗಳಿಗೆ ಸಾಕ್ಷಿಯಾಗುವ ಛಾಯಾಗ್ರಾಹಕರು ಮತ್ತು ವಿಡಿಯೋ ಗ್ರಾಹಕರಿಗೂ ಜೀವನದಲ್ಲಿ ಒಳ್ಳೆಯ ದಿನಗಳು ಬರಲಿವೆ ಎಂಬ ಆಶಾಭಾವನೆಯನ್ನು ಜಿಲ್ಲಾಧಿಕಾರಿ ಶ್ರೀಮತಿ ಶುಭಾಕಲ್ಯಾಣ್ ವ್ಯಕ್ತಪಡಿಸಿದ್ದಾರೆ.
ನಗರದ ಸದಾಶಿವ ನಗರ ಕುಣಿಗಲ್ ರಸ್ತೆಯ ಹೆಚ್.ಎನ್.ಆರ್. ಅರ್ಕೇಡ್ನಲ್ಲಿ ತುಮಕೂರು ಜಿಲ್ಲಾ ಪೋಟೋ ಮತ್ತು ವಿಡಿಯೋಗ್ರಾರ್ಸ್ ಸಂಘ(ರಿ)ವತಿಯಿoದ ಆಯೋಜಿಸಿದ್ದ ಹಿಂದಿನ ಆಡಳಿತ ಮಂಡಳಿ ಪದಾಧಿಕಾರಿಗಳಿಗೆ ಅಭಿನಂದನೆ ಹಾಗೂ ಹಿರಿಯ ಛಾಯಾಗ್ರಾಹಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡುತಿದ್ದ ಅವರು,ಕರೋನದಂತಹ ಸಂಧರ್ಭದಲ್ಲಿ ತಾವು ಅನುಭವಿಸಿದ ಸಂಕಷ್ಟಗಳ ಪರಿಚಯವಿದೆ.ಹಾಗಾಗಿ ಜಿಲ್ಲಾಡಳಿತ ನಿಮ್ಮಗಳ ಮನವಿಗೆ ಸ್ಪಂದಿಸಿ ಕೆಲಸ ಮಾಡಲಿದೆ ಎಂಬ ಭರವಸೆಯನ್ನು ನೀಡಿದರು.
ಕಾರ್ಯಕ್ರಮ ಉದ್ಘಾಟಿಸಿದ ಕೆಪಿಸಿಸಿ ವಕ್ತಾರ ನಿಖೇತರಾಜ್ ಮೌರ್ಯ ಮಾತನಾಡಿ,ನೂರಾರು ವರ್ಷಗಳ ನೆನಪನ್ನು ಶಾಶ್ವತವಾಗಿಸುವ ಛಾಯಾಗ್ರಾಹಕರು,ತಂತ್ರಜ್ಞಾನ ಕ್ರಾಂತಿಯ ಫಲವಾಗಿ ಬಂದ ಮೊಬೈಲ್ನಿಂದಾಗಿ ದೊಡ್ಡ ಪೈಪೋಟಿ ಯನ್ನು ಎದುರಿಸುತ್ತಿದ್ದಾರೆ.ಮದುವೆ ಇನ್ನಿತರ ಶುಭ ಕಾರ್ಯಗಳಲ್ಲಿ ಪುರೋಹಿತರಿಗಿಂತ ಹೆಚ್ಚು ಪ್ರಾಮುಖ್ಯತೆ ಪಡೆಯುತ್ತಿದ್ದ ಪೋಟೋ,ವಿಡಿಯೋಗ್ರಾರ್ಸ್ಗಳ ಸ್ಥಿತಿ ಇಂದು ಸಂಕಷ್ಟದಲ್ಲಿದೆ.ಪತ್ರಿಕಾ ಕ್ಷೇತ್ರದಲ್ಲಿ ಗುರುತಿಸಿಕೊಂಡಿರುವ ಫೋಟೋ ಮತ್ತು ವಿಡಿಯೋಗ್ರಾರ್ಸ್ಗಳಿಗೆ ಸರಕಾರದಿಂದ ಒಂದಿಷ್ಟು ನೆರವಿನ ಜೊತೆಗೆ, ಗೌರವಗಳು ಲಭ್ಯವಾಗಿದೆ.ಆದರೆ ಹತ್ತಾರು ಸಾವಿರ ರೂ ಬಂಡವಾಳ ಹಾಕಿಕೊಂಡು ಇದನ್ನೇ ಬದುಕಾಗಿಸಿಕೊಂಡಿರುವ ಛಾಯಾಗ್ರಾಹಕರನ್ನು ಸರಕಾರ ಗುರುತಿಸು ವಂತಾಗಬೇಕು.ಅಸoಘಟಿತವಲಯದಲ್ಲಿರುವ ಈ ವರ್ಗವನ್ನು ಗುರುತಿಸಿ, ರಾಜ್ಯಮಟ್ಟದಲ್ಲಿ ರಾಜೋತ್ಸವ ಪ್ರಶಶ್ತಿ ನೀಡಿದರೆ ಹೆಚ್ಚಿನ ಅನುಕೂಲವಾಗಲಿದೆ ಎಂದರು.
ತುಮಕೂರು ಜಿಲ್ಲಾ ಪೋಟೋ ಮತ್ತು ವಿಡಿಯೋಗ್ರಾರ್ಸ್ ಸಂಘ

Leave a comment
Leave a comment