
ಏ.೧೭ರಿಂದ ಬೇಸಿಗೆ ಶಿಬಿರ
ತುಮಕೂರು(ಕ.ವಾ.)ಏ.೧೧: ಜಿಲ್ಲಾ ಬಾಲಭವನ ಸಮಿತಿ ವತಿಯಿಂದ ೨೦೨೩-೨೪ನೇ ಸಾಲಿನ ಏಪ್ರಿಲ್ ೧೭ ರಿಂದ ೨೭ರವರೆಗೆ ೫ ರಿಂದ ೧೬ ವರ್ಷ ವಯೋಮಾನದ ಮಕ್ಕಳಿಗಾಗಿ ಪ್ರತಿ ದಿನ ಬೆಳಿಗ್ಗೆ ೧೦ ರಿಂದ ಸಂಜೆ ೫ ಗಂಟೆಯವರೆಗೆ “ಬೇಸಿಗೆ ಶಿಬಿರ”ವನ್ನು ಆಯೋಜಿಸಲಾಗಿದೆ.
ಆಸಕ್ತ ಪಾಲಕರು ಏಪ್ರಿಲ್ ೧೫ರಂದು ಮಧ್ಯಾಹ್ನ ೧ ಗಂಟೆಯೊಳಗಾಗಿ ನಗರದ ಮಹಾತ್ಮಗಾಂಧಿ ರಸ್ತೆಯಲ್ಲಿರುವ ಜಿಲ್ಲಾ ಬಾಲಭವನ ಕಚೇರಿಯಲ್ಲಿ ತಮ್ಮ ಮಕ್ಕಳ ಹೆಸರನ್ನು ನೋಂದಾಯಿಸಿಕೊಳ್ಳಬಹುದು. ಶಿಬಿರದಲ್ಲಿ ೬೦ ಮಕ್ಕಳು ಮಾತ್ರ ಭಾಗವಹಿಸಲು ಅವಕಾಶವಿರುವುದರಿಂದ ಮೊದಲು ನೋಂದಾಯಿಸಿಕೊAಡವರಿಗೆ ಮಾತ್ರ ಆದ್ಯತೆ ನೀಡಲಾಗುವುದು.
ಸರ್ಕಾರಿ ಶಾಲಾ ಮಕ್ಕಳು, ಗ್ರಾಮೀಣ/ಹೋಬಳಿ ಮಟ್ಟದ ಮತ್ತು ಸೌಲಭ್ಯ ವಂಚಿತ ಮಕ್ಕಳು, ಸರ್ಕಾರಿ ಸುಧಾರಣಾ ಸಂಸ್ಥೆಗಳ ಬಾಲಕ/ಬಾಲಕಿಯರ ಬಾಲ ಮಂದಿರದ ಮಕ್ಕಳು ಹಾಗೂ ವಿಕಲಚೇತನ ಮಕ್ಕಳಿಗೆ ಬೇಸಿಗೆ ಶಿಬಿರದಲ್ಲಿ ವಿಶೇಷ ಆದ್ಯತೆ ನೀಡುವುದು.
ಶಿಬಿರದಲ್ಲಿ ಪಾಲ್ಗೊಳ್ಳುವ ಮಕ್ಕಳಿಗೆ ಮಧ್ಯಾಹ್ನದ ಲಘು ಉಪಹಾರದ ವ್ಯವಸ್ಥೆ ಕಲ್ಪಿಸಲಾಗಿದೆ. ಹೆಚ್ಚಿನ ವಿವರಗಳಿಗೆ ಮೊ.ಸಂ. ೯೯೦೧೮೯೦೦೭೯, ೯೦೦೮೯೮೨೨೬೦ಯನ್ನು ಸಂಪರ್ಕಿಸಬಹುದಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಎಂ.ಎಸ್.ಶ್ರೀಧರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.