೧೫ ನೇ ವರ್ಷದ ಸೇವಾ ಸಂಭ್ರಮ ೨೦೦೮ ರ ಆಗಸ್ಟ್ ಮಾಹೆಯಲ್ಲಿ ತುಮಕೂರು ಜಿಲ್ಲಾ ಸಶಸ್ತ್ರ ಮೀಸಲು ಪೊಲೀಸ್ ಪಡೆಗೆ ೧೧೮ ಜನ ವಿವಿಧ ಜಿಲ್ಲೆಗಳಿಂದ ಪೊಲೀಸ್ ಕರ್ತವ್ಯಕ್ಕೆ ವರದಿ ಮಾಡಿಕೊಂಡಿದು, ಅದರಲ್ಲಿ ಹಲವು ಜನ ಬೇರೆ ಬೇರೆ ಇಲಾಖೆಗಳ ವಿವಿದ ಹುದ್ದೆಗಳಿಗೆ ಆಯ್ಕೆಯಾಗಿ ಹೋಗಿರುತ್ತಾರೆ, ತುಮಕೂರು ಡಿ.ಎ.ಆರ್.ನಲ್ಲಿ ೭೦ ಜನ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇದರಲ್ಲಿ ಇಬ್ಬರು ಅವರ ಸೇವಾ ನಿಷ್ಟೆಗೆ ಮುಖ್ಯಮಂತ್ರಿಗಳ ಪದಕ ಪಡೆದಿರುತ್ತಾರೆ. ಕೆಲಸ ದೊರೆತು ಸಾರ್ಥಕ ೧೫ ವರ್ಷಗಳನ್ನು ಪೂರೈಸಿರುವ ಸವಿನೆನಪಿಗಾಗಿ ಇಂದು ೨೦೦೮ ನೇ ಬ್ಯಾಚಿನ ವತಿಯಿಂದ ವಿಕಾಸ ಮಂದಿರ, ಶಾರದ ದೇವಿನಗರ ತುಮಕೂರು ಇಲ್ಲಿ ಆಶ್ರಮದ ಮಕ್ಕಳಿಗೆ ಸಿಹಿ ವಿತರಣೆ ಮತ್ತು ಅಗತ್ಯ ವಸ್ತುಗಳ ಪೂರೈಕೆ ಹಾಗೂ ರಕ್ತದಾನ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ. ಕಾರ್ಯಕ್ರಮದ ಅಧ್ಯಕ್ಷತೆ ಹಾಗೂ ಉದ್ಘಾಟನೆ, ಶ್ರೀ ಅಶೋಕ್ ಕೆ.ವಿ. ಐ.ಪಿ.ಎಸ್. ರವರು ಪೊಲೀಸ್ ಅಧೀಕ್ಷಕರು, ತುಮಕೂರು ಜಿಲ್ಲೆ, ಮುಖ್ಯ ಅತಿಥಿಗಳು ಶ್ರೀ ಮರಿಯಪ್ಪ ವಿ. ರವರು ಹೆಚ್ಚುವರಿ ಪೊಲೀಸ್ ಅಧೀಕ್ಷಕರು, ತುಮಕೂರು ಜಿಲ್ಲೆ, ಶ್ರೀ ಬಸವಯ್ಯ ರವರು ಸಂಸ್ಥಾಪಕರು, ಗಾಂದೀಜಿ ಸ್ಮೃತಿ ಹಾಗೂ ದರ್ಶನ ಕೇಂದ್ರ, ತುಮಕೂರು, ಶ್ರೀ ಪರಮೇಶ್ ಕೆ.ಎನ್. ರವರು ಡಿ.ಎಸ್.ಪಿ. ಡಿ.ಎ.ಆರ್. ಶ್ರೀ ರಾಮಕೃಷ್ಣ ಹೆಚ್.ಕೆ. ಆರ್.ಪಿ.ಐ. ಡಿ.ಎ.ಆರ್. , ಶ್ರೀ ರಂಗನಾಥ ಕೋಟಿ, ಆರ್.ಪಿ.ಐ. ಡಿ.ಎ.ಆರ್. ತುಮಕೂರು ರವರು ಹಾಜರಿದ್ದರು