ತುಮಕೂರು ಜಿಲ್ಲಾ, ಅಖಿಲ ಭಾರತ ಡಾ. ಅಂಬೇಡ್ಕರ್ ಪ್ರಚಾರ ಸಮಿತಿ, ಒಬಿಸಿ ಘಟಕದ ವತಿಯಿಂದ
ಛತ್ರಪತಿ ಶಿವಾಜಿ ಮಹಾರಾಜ್ ರವರ 397ನೇ ಜಯಂತ್ಯೋತ್ಸವವನ್ನು ಜಿಲ್ಲಾ ಕಛೇರಿಯಲ್ಲಿ ಆಚರಿಸಲಾಯಿತು.
ಇದೇ ವೇಳೆ ಮಾತನಾಡಿದ ಮರಾಠ ಸಮಾಜದ ಮುಖಂಡರು ಹಾಗೂ ಓಬಿಸಿ ಘಟಕದ ಜಿಲ್ಲಾಧ್ಯಕ್ಷರಾದ ಎಸ್. ರಾಮಚಂದ್ರ ರಾವ್ ಮಾತನಾಡಿ ಇಂದು ದೇಶ ಕಂಡ ಅಪ್ರತಿಮ ಆಡಳಿತಗಾರ, ಯುಗಪುರುಷ, ರಾಷ್ಟ್ರಪುರುಷ, ಪ್ರತ್ಯಕ್ಷ ಶಿವನ ಅವತಾರ, ಹಿಂದವಿ ಸ್ವರಾಜ್ಯದ ಸ್ಥಾಪಕ ಶಿವಾಜಿ ಮಹಾರಾಜರ 397 ನೇ ಜಯಂತಿ.
ತಮಗೆಲ್ಲರಿಗೂ ಹಾಗೂ ನಾಡಿನ ಸಮಸ್ತ ಜನತೆಗೆ ಛತ್ರಪತಿ ಶಿವಾಜಿ ಮಹಾರಾಜರ ಜಯಂತೋತ್ಸವದ ಹಾರ್ದಿಕ ಶುಭಾಶಯಗಳು ತಿಳಿಸಿದರು.
ಈ ಸಂದರ್ಭದಲ್ಲಿ ತುಮಕೂರು ಜಿಲ್ಲಾ ಅಖಿಲ ಭಾರತ ಡಾ. ಅಂಬೇಡ್ಕರ್ ಪ್ರಚಾರ ಸಮಿತಿಯ ಜಿಲ್ಲಾಧ್ಯಕ್ಷರಾದ ಎನ್.ಕೆ ನಿಧಿ ಕುಮಾರ್, ಹಿಂದುಳಿದ ವರ್ಗದ ಜಿಲ್ಲಾಧ್ಯಕ್ಷರಾದ ಎಸ್ ರಾಮಚಂದ್ರ ರಾವ್, ಹಿರಿಯ ಮುಖಂಡರು ಹಾಗೂ ಸಮಾಜಸೇವಕರಾದ ಕೊಪ್ಪಲ್ ನಾಗರಾಜು ಜಿಲ್ಲಾ ಉಪಾಧ್ಯಕ್ಷರಾದ ಇಂದ್ರ ಕುಮಾರ್ D. K. ಜಿಲ್ಲಾ ಸಂಘಟನಾ ಕಾರ್ಯದರ್ಶಿಯಾದ ನಾಗರಾಜು ದಿಬ್ಬೂರು, ಕಾರ್ಮಿಕ ಘಟಕದ ಜಿಲ್ಲಾಧ್ಯಕ್ಷರಾದ ಎಸ್. ನಾರಾಯಣ್ ಪದಾಧಿಕಾರಿಗಳಾದ ಶಿವರಾಜ್ ಕುಚ್ಚಂಗಿ, ನವೀನ್, ಹನುಮನರಸಯ್ಯ, ಜಗದೀಶ್, ಗಿರೀಶ್ ಹಾಗೂ ವಿವೇಕಾನಂದ ರಸ್ತೆಯ ವರ್ತಕರು ಹಾಗೂ ಮಾಲೀಕರ ಸಂಘದ ಪದಾಧಿಕಾರಿಗಳಾದ ಶ್ರೀನಿವಾಸ್ ರಾವ್, ರಾಮಣ್ಣ, ದಿನೇಶ್, ಕೆ ಎಂ ಕುಮಾರ್, ಸಂಜಯ್, ಜಿತೇಂದ್ರ ಪ್ರಶಾಂತ್, ರಮೇಶ್,ಇನ್ನು ಮುಂತಾದವರು ಉಪಸ್ಥಿತರಿದ್ದರು
ತುಮಕೂರು ಜಿಲ್ಲಾ, ಅಖಿಲ ಭಾರತ ಡಾ. ಅಂಬೇಡ್ಕರ್ ಪ್ರಚಾರ ಸಮಿತಿ,
Leave a comment
Leave a comment