ತುಮಕೂರು ನಗರ ಪ್ರಧಾನಮಂತ್ರಿಗಳ ಸ್ಮಾರ್ಟಿ ಸಿಟಿಗೆ ಆಯ್ಕೆಯಾಗಿರುವ ನಗರಗಳಲ್ಲಿ ಒಂದು, ಸುಮಾರು 1000 ಕೋಟಿ ರೂಗಳಿಗೆ ಹೆಚ್ಚಿನ ಅಭಿವೃದ್ದಿ ಕಾಮಗಾರಿಗಳು ಇಲ್ಲಿ ನಡೆದಿವೆ.ಆದರೆ ದೂರದೃಷ್ಟಿ ಇಲ್ಲದ ಕಾಮಗಾರಿಗಳು, ಇಚ್ಚಾಶಕ್ತಿ ಇಲ್ಲದ ರಾಜಕಾರಣಿಗಳಿಂದ ಇಡೀ ನಗರ ಕೊಳಚೆ ಗುಂಡಿಯoತಾಗಿದ್ದು,ತೆರದ ಯುಜಿಡಿ ಮ್ಯಾನ್ಹೋಲ್ಗಳು, ರಸ್ತೆಗೆ ಕೊಳಚೆ ನೀರು ಹರಿದು,ರೋಗ ರುಜೀನಗಳ ತಾಣವಾಗಿದ್ದು,ಇದಕ್ಕೆ ತಾಜಾ ಉದಾಹರಣೆ ಎಂದರೆ ತುಮಕೂರು ನಗರದ ಕೋಡಿ ಬಸವೇಶ್ವರ ದೇವಾಲಯದಿಂದ ದಿಬ್ಬೂರಿಗೆ ಹೋಗುವ ಗಾರ್ಡು ರಸ್ತೆಯ ಅವ್ಯವಸ್ಥೆಕುಣಿಗಲ್,ಗುಬ್ಬಿ ರಸ್ತೆಯಿಂದ ಶಿರಾ,ಮಧುಗಿರಿ ರಸ್ತೆಗೆ ಸಂಪರ್ಕ ಕಲ್ಪಿಸುವ ಗಾರ್ಡ್ನ್ ರಸ್ತೆ ಪಾಲಿಕೆಯ ನಿರ್ವಹಣೆ ಯಲ್ಲಿರುವ ರಸ್ತೆಯಾಗಿದೆ.ನಗರದ ಶೇ30-40 ಭಾಗದ ಯುಜಿಡಿ ನೀರು,ಗಾರ್ಡ್ನ್ ರಸ್ತೆಯ ಮಾರ್ಗದಲ್ಲಿರುವ ಯುಜಿಡಿ ಲೈನ್ ಮೂಲಕ ಭೀಮಸಂದ್ರ ಕೆರೆಗೆ ತಲುಪುತ್ತವೆ.ಇದೇ ರಸ್ತೆಯ ಮೂಲಕ ಮರಳು,ಎಂ.ಸ್ಯಾoಡ್ ತುಂಬಿದ ಬಾರಿ ವಾಹನಗಳು ಚಲಿಸುವ ಪರಿಣಾಮ ಮ್ಯಾನ್ಹೋಲ್ಗಳು ಹಾನಿಗೊಂಡಿವೆ.ಅಲ್ಲದೆ,ಈ ಬಾರಿ ಬಿದ್ದ ಬಾರಿ ಮಳೆಗೆ ಯುಜಿಡಿ ನೀರು ಹರಿಯುವ ವೇಗಕ್ಕೆ ಮ್ಯಾನ್ಹೊಲ್ಗಳು ಸಂಪೂರ್ಣವಾಗಿ ಹಾಳಾಗಿ ಬಾಯಿ ತೆರೆದಿವೆ.ಪಾಲಿಕೆಯವರು ಬಾಯಿ ತೆರೆದಿರುವ ಮ್ಯಾನ್ಹೊಲ್ನ ಸುತ್ತಲು ಪೊಲೀಸ್ ಬ್ಯಾರಿಕೇಡ್ ಇಟ್ಟು,ದುರುಸ್ತಿಗೆ ಮುಂದಾಗಿಲ್ಲ.ಈ ಬಗ್ಗೆ ಹಲವು ಬಾರಿ ಸಂಬoಧಪಟ್ಟವರಿಗೆ ಮನವಿ ಮಾಡಿದ್ದರು ಯಾವುದೇ ಕ್ರಮವಾಗಿಲ್ಲ ಎಂಬುದು ಸ್ಥಳೀಯರ
ಆರೋಪವಾಗಿದೆ.ಮ್ಯಾನ್ಹೊಲ್ನಿಂದ ಉಕ್ಕಿದ ಕೊಳಚೆ ನೀರು ರಸ್ತೆಯ ಮೇಲೆ ಹರಿಯುತಿದ್ದು,ವಾಹನಗಳು ಚಲಿಸುವ ಸಂದರ್ಭದಲ್ಲಿ ಕೊಳಚೆ ನೀರು ರಸ್ತೆಯಲ್ಲಿ ತಿರುಗಾಡುವ ಜನರ ಮೇಲೆ ಸಿಡಿಯುತ್ತಿದ್ದು,ಜನರು,ಶಾಲಾ ಮಕ್ಕಳು ಭಯ ಭೀತಿಯಿಂದ ಓಡಾಡುವಂತಹ ಸ್ಥಿತಿ ನಿರ್ಮಾಣವಾಗಿದೆ.ಅಲ್ಲದೆ ಇಡೀ ರಸ್ತೆಯ ಮ್ಯಾನ್ಹೋಲ್ ಅಕ್ಕಪಕ್ಕದ ಜನರು ಕೊಳಚೆ ನೀರಿನ ಗಬ್ಬು ವಾಸನೆಯಿಂದ ಮೂಗು ಮುಚ್ಚಿ ತಿರುಗುವ ಪರಿಸ್ಥಿತಿ ಬಂದೊಗಿದೆ.ಪಾಲಿಕೆಯವರು ಇತ್ತ ಗಮನಹರಿಸಬೇಕೆಂಬುದು ನಾಗರಿಕರ ಒತ್ತಾಯವಾಗಿದೆ.ತುಮಕೂರಿನ ಶಿರಾಗೇಟ್ ರಸ್ತೆಯಿಂದ ಗುಬ್ಬಿಗೇಟ್ ರಸ್ತೆಗೆ ಸಂಪರ್ಕ ಕಲ್ಪಿಸುವ ಪ್ರಮುಖ ದಾರಿ ಗಾರ್ಡ್ನ್ ರಸ್ತೆ.ಅಯ್ಯಪ್ಪಸ್ವಾಮಿ ದೇವಾಲಯದ ಬಳಿಯಿಂದ ಹೊಸ ರಿಂಗ ರಸ್ತೆಯ ವರೆಗೆ ಇರುವ ಮ್ಯಾನ್ ಹೊಲ್ಗಳು ಸಂಪೂರ್ಣವಾಗಿ ಹಾಳಾಗಿ,ಕೊಳಚೆ ನೀರು ರಸ್ತೆಯ ಮೇಲೆಲ್ಲಾ ಹರಿಯುತ್ತಿದೆ.ಜನರು ಮೂಗು ಮುಚ್ಚಿಕೊಂಡು ಓಡಾಡುವ ಸ್ಥಿತಿ ಇದೆ.ಹಾಗಾಗಿ ಪಾಲಿಕೆಯವರು ಕೂಡಲೇ ಮ್ಯಾನ್ಹೊಲ್ಗಳ ದುರಸ್ಥಿಗೆ ಅಗತ್ಯ ಕ್ರಮ ಕೈಗೊಳ್ಳಬೇಕು.ಇಲ್ಲದಿದ್ದಲ್ಲಿ ರಸ್ತೆ ಬಂದ್ ಮಾಡಿ ಹೋರಾಟ ನಡೆಸಲಾಗುವುದು ಇಂದ್ರಕುಮಾರ್.ಡಿ.ಕೆ.,ದಲಿತ ಕ್ರಿಯಾ ಸಮಿತಿ ಮತ್ತು ಅಖಿಲ ಭಾರತ ಡಾ.ಅಂಬೇಡ್ಕರ್ ಪ್ರಚಾರ ಸಮಿತಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ