ತುಮಕೂರು- ನಗರದ ಜಿಲ್ಲಾಸ್ಪತ್ರೆಗೆ ಮ್ಯಾನ್ಹೋಲ್ವೆಲ್ ಕಂಪೆನಿ ವತಿಯಿಂದ ೧೫ ಲಕ್ಷ ರೂ. ವೆಚ್ಚದ ಸಿಬಿಸಿ ಯಂತ್ರವನ್ನು ಕೊಡುಗೆಯಾಗಿ ನೀಡಲಾಯಿತು.ನಗರದ ಜಿಲ್ಲಾಸ್ಪತ್ರೆಯಲ್ಲಿ ಬಯೋ ಕೆಮಿಸ್ಟಿç ಯಂತ್ರದ ಕೊರತೆ ಇರುವುದನ್ನು ಮನಗಂಡ ಮ್ಯಾನ್ಹೋಲ್ವೆಲ್ ಕಂಪೆನಿಯವರು ಆಸ್ಪತ್ರೆಯ ವೈದ್ಯರಿಂದ ಮನವಿ ಸ್ವೀಕರಿಸಿ ಸಿಎಸ್ಆರ್ ಕಮಿಟಿಯಲ್ಲಿ ಈ ಕುರಿತು ಚರ್ಚಿಸಿ ತೀರ್ಮಾನ ಕೈಗೊಂಡು ೧೫ ಲಕ್ಷ ರೂ. ವೆಚ್ಚದ ಎ.ಎಂ.-೩೬ ಬಯೋಕೆಮಿಸ್ಟಿç (ಸಿಬಿಸಿ) ಯಂತ್ರವನ್ನು ಹಸ್ತಾಂತರ ಮಾಡಿದ್ದಾರೆ.ಜಿಲ್ಲಾಸ್ಪತ್ರೆಗೆ ಈ ಯಂತ್ರವನ್ನು ಹಸ್ತಾಂತರ ಮಾಡಿದ ಕಂಪೆನಿಯ ಪ್ಲಾಂಟ್ ವ್ಯವಸ್ಥಾಪಕರಾದ ಪ್ರಶಾಂತ್ ಗಾಯತುಂಡೆ ಅವರು ಮಾತನಾಡಿ, ನಮ್ಮ ಕಂಪೆನಿಯ ಸಿ.ಎಸ್.ಆರ್. ಕಮಿಟಿಯಿಂದ ಬಯೋಕೆಮಿಸ್ಟಿç ಯಂತ್ರವನ್ನು ಜಿಲ್ಲಾಸ್ಪತ್ರೆಗೆ ಕೊಡುಗೆಯಾಗಿ ನೀಡಿರುವುದು ನಮ್ಮ ಸಂಸ್ಥೆಯ ಅಧ್ಯಕ್ಷರು, ನೌಕರರು ಎಲ್ಲರಿಗೂ ಸಂತಸ ತಂದಿದೆ. ಇದರಿಂದ ಸಾವಿರಾರು ಬಡ ರೋಗಿಗಳಿಗೆ ಅನುಕೂಲವಾಗಲಿದೆ ಎಂದರು.ಎ.ಎA.-೩೬ ಬಯೋಕೆಮಿಸ್ಟಿç ಯಂತ್ರ ಆಸ್ಪತ್ರೆಗೆ ಬರುವ ಬಡ ರೋಗಿಗಳ ಪರೀಕ್ಷೆಗೆ ಉಪಯೋಗಲಿ ಎಂಬದೇ ನಮ್ಮ ಉದ್ದೇಶ ಎಂದ ಅವರು, ಕಳೆದ ಮಾರ್ಚ್ ತಿಂಗಳಲ್ಲೇ ಈ ಯಂತ್ರವನ್ನು ಆಸ್ಪತ್ರೆಗೆ ನೀಡಿದ್ದೆವು. ಈಗಾಗೇ ಈ ಯಂತ್ರ ಉಪಯೋಗವಾಗುತ್ತಿದ್ದು, ೧.೩೭ ಲಕ್ಷ ಪರೀಕ್ಷೆಗಳನ್ನು ಮಾಡಲಾಗಿದೆ. ಇದರಿಂದ ೩೪ ಸಾವಿರ ರೋಗಿಗಳಿಗೆ ಉಪಯೋಗವಾಗಿದೆ ಎಂದರು.ಬಯೋಕೆಮಿಸ್ಟಿç ಪರೀಕ್ಷೆಗೆ ಒಳಗಾಗುವ ರೋಗಿಗಳಿಗೆ ಯಾವುದೇ ಶುಲ್ಕ ನಿಗದಿಪಡಿಸಿಲ್ಲ. ಈ ಯಂತ್ರ ಚೆನ್ನಾಗಿ ಬಳಕೆಯಾಗಲಿ, ಈ ಮೂಲಕ ಜನರ ಸೇವೆ ಮಾಡಲು ನಮಗೂ ಒಂದು ಅವಕಾಶ ಸಿಕ್ಕಿದಂತಾಗಿದೆ ಎಂದು ಅವರು ಹೇಳಿದರು.ಜಿಲ್ಲಾ ಶಸ್ತçಚಿಕಿತ್ಸಕಿ ಡಾ. ವೀಣಾ ಮಾತನಾಡಿ, ಮ್ಯಾನ್ಹೋಮ್ವೆಲ್ ಕಂಪೆನಿಯ ಸಿಎಸ್ಆರ್ ಕಮಿಟಿ ವತಿಯಿಂದ ೧೫ ಲಕ್ಷ ರೂ. ವೆಚ್ಚದ ಸಿಬಿಸಿ ಯಂತ್ರವನ್ನು ಜಿಲ್ಲಾಸ್ಪತ್ರೆಗೆ ಹಸ್ತಾಂತರ ಮಾಡಿದ್ದಾರೆ. ಈ ಯಂತ್ರದ ಅವಶ್ಯಕತೆ ಜಿಲ್ಲಾಸ್ಪತ್ರೆಗೆ ತುಂಬಾ ಇತ್ತು. ಇದರಿಂದ ಬಡ ರೋಗಿಗಳಿಗೆ ನಿತ್ಯದ ಬಯೋ ಕೆಮಿಸ್ಟಿç ಪರೀಕ್ಷೆ ಮಾಡಲು ತುಂಬಾ ಸಹಾಯವಾಗಿದೆ ಎಂದರು. ಜಿಲ್ಲಾಸ್ಪತ್ರೆಗೆ ಸಿಬಿಸಿ ಯಂತ್ರವನ್ನು ಕೊಡುಗೆಯಾಗಿ ನೀಡಿರುವ ಈ ಕಂಪೆನಿಯ ಅಧ್ಯಕ್ಷರು ಹಾಗೂ ನೌಕರರುಗಳಿಗೆ ಧನ್ಯವಾದ ತಿಳಿಸುವುದಾಗಿ ಅವರು ಹೇಳಿದರು.ಈ ಸಂದರ್ಭದಲ್ಲಿ ಮ್ಯಾನ್ಹೋಮ್ವೆಲ್ ಕಂಪೆನಿಯ ಕಾಂತರಾಜು, ನವೀನ್, ಸಜಿ, ಪ್ರಸನ್ನಕುಮಾರ್, ಜಿಲ್ಲಾಸ್ಪತ್ರೆಯ ವೈದ್ಯರು ಮತ್ತು ಸಿಬ್ಬಂದಿ ಉಪಸ್ಥಿತರಿದ್ದರು.