ತುಮಕೂರು : ನಗರದ ಎಂ.ಜಿ.ರಸ್ತೆಯಲ್ಲಿರುವ ಅಂಬೇಡ್ಕರ್ ಭವನದಲ್ಲಿ ಅಂಬೇಡ್ಕರ್ ಮಹಿಳಾ ಘಟಕದ ಸಭೆಯನ್ನು ಇಂದು ನಡೆಸಲಾಯಿತು. ಈ ಸಂದರ್ಭದಲ್ಲಿ ಕಳೆದ ೩೦ ವರ್ಷಗಳಿಂದ ತುಮಕೂರು ಜಿಲ್ಲೆಯಲ್ಲಿ ಉಳಿಮೆ ಮಾಡಿಕೊಂಡು ಬರುತ್ತಿರುವ ದಲಿತ ರೈತರಿಗೆ ಇದುವರೆವಿಗೂ ಸರ್ಕಾರದ ವತಿಯಿಂದ ಸಾಗುವಳಿ ಚೀಟಿಯನ್ನು ನೀಡದೇ ಅನ್ಯಾಯ ಮಾಡಲಾಗಿದೆಂದು ಪ್ರಸ್ತಾಪಿಸಿದರು. ನಂತರ ಮಾತನಾಡುತ್ತಾ ಕಳೆದ ಎರಡು ವರ್ಷಗಳಿಂದ ಮಹಿಳಾ ಸಂಘಗಳು ಸಾಲ ಸೌಲಭ್ಯಕ್ಕಾಗಿ ಯಾವುದೇ ನಿಗಮ / ಮಂಡಳಿ ಅರ್ಜಿ ಸಲ್ಲಿಸಿ ೨ ವರ್ಷಗಳಾದರೂ ಯಾವುದೇ ರೀತಿಯಾದ ಅರ್ಜಿ ಪುರಸ್ಕಾರವಾಗದೇ ಮುಲ್ಕಿಯಲ್ಲಿಟ್ಟು ಸಾಲ ಸೌಲಭ್ಯವನ್ನು ಮಂಜೂರು ಮಾಡದೇ ಮಹಿಳೆಯರಿಗೆ ಅನ್ಯಾಯವಾಗುತ್ತಿದೆಂದು ತಿಳಿಸಿದರಲ್ಲದೇ, ಹಾಲಿ ಇರುವ ರಾಜ್ಯದ ಮುಖ್ಯಮಂತ್ರಿಗಳು ನಮ್ಮ ನೆರವಿಗೆ ಬರಬೇಕೆಂದು ಚರ್ಚೆ ನಡೆಸಲಾಯಿತು.
ಸಭೆಯಲ್ಲಿ ಸರ್ಕಾರದಿಂದ ದೊರೆಯುವ ಎಲ್ಲಾ ಸೌಲಭ್ಯಗಳು ನೇರವಾಗಿ ಮಹಿಳಾ ಸಂಘಗಳಿಗೆ ದೊರಕುವಂತೆ ಸರ್ಕಾರಕ್ಕೆ ಮನವಿಯನ್ನು ಸಲ್ಲಿಸುವುದರ ಕುರಿತಾಗಿ ಚರ್ಚೆಯನ್ನು ನಡೆಸಲಾಯಿತು ಎಂದರಲ್ಲದೇ ಕೆಲವು ಪೊಲೀಸ್ ಠಾಣೆಗಳಲ್ಲಿ ಮಹಿಳೆಯರು ದೂರು ನೀಡಲು ಹೋದಾಗ ಸಹ ಸರಿಯಾದ ರೀತಿಯಲ್ಲಿ ಸ್ಪಂದನೆಯಾಗುತ್ತಿಲ್ಲ, ಈ ಕುರಿತು ಸಹ ಕ್ರಮ ವಹಿಸುವಂತೆ ಗೃಹ ಸಚಿವರಿಗೆ ಮತ್ತು ಸರ್ಕಾರಕ್ಕೆ ಮನವಿ ಸಲ್ಲಿಸುವುದರ ಕುರಿತು ಸಹ ಚರ್ಚೆ ಮಾಡಲಾಗಿದೆಂದು ಅಂಬೇಡ್ಕರ್ ಮಹಿಳಾ ಘಟಕದ ಜಿಲ್ಲಾ ಅಧ್ಯಕ್ಷರಾದ ಶ್ರೀಮತಿ ಸುಮಾ ತಿಳಿಸಿದರು.