ತುಮಕೂರು: ಜಿಲ್ಲಾ ಜೆಡಿಎಸ್ ಕಚೇರಿಯಲ್ಲಿ ೭೭ನೇ ಸ್ವಾತಂತ್ರö್ಯ ದಿನಾಚರಣೆಯನ್ನು ಬುಧವಾರ ವಿಜೃಂಭಣೆಯಿAದ ಆಚರಿಸಲಾಯಿತು.
ಜೆಡಿಎಸ್ ಜಿಲ್ಲಾಧ್ಯಕ್ಷ ಆರ್.ಸಿ.ಆಂಜಿನಪ್ಪ ಸ್ವಾತಂತ್ರೊö್ಯÃತ್ಸವದ ಧ್ವಜಾರೋಹಣ ನೆರವೇರಿಸಿ ಮಾತನಾಡಿ, ೭೭ನೇ ಸ್ವಾತಂತ್ರö್ಯ ದಿನಾಚರಣೆಯನ್ನು ಇಡೀ ಭಾರತ ದೇಶದಲ್ಲಿ ವಿಜೃಂಭಣೆಯಿAದ ಆಚರಣೆ ಮಾಡುತ್ತಿದ್ದೇವೆ. ಅದೇ ರೀತಿ ತುಮಕೂರಿನಲ್ಲೂ ಸಹ ೭೭ ನೇ ಸ್ವಾತಂತ್ರö್ಯ ದಿನಾಚರಣೆಯನ್ನು ಆಚರಿಸುತ್ತಿದ್ದೇವೆ. ಈ ವೇಳೆ ನಮ್ಮ ದೇಶಕ್ಕೆ ಸ್ವಾತಂತ್ರö್ಯ ತಂದುಕೊಟ್ಟAತಹ ಅನೇಕ ಮಹನೀಯರನ್ನು ನಾವು ಸ್ಮರಿಸಬೇಕು ಎಂದು ತಿಳಿಸಿದರು.
ಮಹಾತ್ಮಗಾಂಧಿ, ಜವಹಾರ್ಲಾಲ್ ನೆಹರು, ವಲ್ಲಭಬಾಯಿ ಪಟೇಲ್, ಸುಭಾಷ್ ಚಂದ್ರಬೋಸ್, ಭಗತ್ ಸಿಂಗ್, ಸಂಗೊಳ್ಳಿರಾಯಣ್ಣ, ಕಿತ್ತೂರು ರಾಣಿ ಚನ್ನಮ್ಮ, ಝಾನ್ಸಿರಾಣಿ ಲಕ್ಷಿö್ಮÃಬಾಯಿ ಸೇರಿದಂತೆ ಇನ್ನು ಅನೇಕರ ತ್ಯಾಗ ಬಲಿದಾನಗಳಿಂದ ನಮ್ಮ ಭಾರತ ದೇಶಕ್ಕೆ ಸ್ವಾತಂತ್ರö್ಯ ಸಿಕ್ಕಿದೆ. ಸುಮಾರು ೨೦೦ ವರ್ಷಗಳ ಕಾಲ ನಮ್ಮನ್ನಾಳಿದ ಬ್ರಿಟೀಷರಿಂದ ನಾವು ವಿಮುಕ್ತರಾದ ದಿನ. ನಮ್ಮದೇ ಆದ ಸಂವಿಧಾನವನ್ನು ಡಾ.ಬಿ.ಆರ್. ಅಂಬೇಡ್ಕರ್ ಅವರ ನೇತೃತ್ವದಲ್ಲಿ ರಚನೆ ಮಾಡಿಕೊಂಡು ವಿಶ್ವದಲ್ಲೇ ಅತಿದೊಡ್ಡ ಪ್ರಜಾಪ್ರಭುತ್ವವನ್ನು ನಡೆಸಿಕೊಂಡು ಹೋಗುತ್ತಿದ್ದೇವೆ ಎಂದರು.
ನಮ್ಮ ದೇಶದಲ್ಲಿ ಅನೇಕ ಜಾತಿ ಧರ್ಮಗಳಿವೆ. ಹಿಂದೂ, ಮುಸ್ಲೀಂ, ಕ್ರಿಶ್ಚಿಯನ್, ಜೈನ ಮುಂತಾದ ಒಳಪಂಗಡಗಳಿವೆ. ಎಲ್ಲರನ್ನೂ ಸರಿದೂಗಿಸಿಕೊಂಡು ಸರ್ವಜನಾಂಗದ ಶಾಂತಿಯ ತೋಟ ಎಂಬAತೆ ಸಹಜೀವನ ನಡೆಸುತ್ತಿದ್ದೇವೆ. ಇಂತಹ ಜಾತ್ಯಾತೀತ ರಾಷ್ಟçವನ್ನು ಪ್ರಪಂಚದಲ್ಲಿ ಎಲ್ಲೂ ಕಾಣಲು ಸಾಧ್ಯವಿಲ್ಲ ಎಂದರು.
ಇAದು ನಮ್ಮ ಜೆಡಿಎಸ್ ಪಕ್ಷ ಯಾವುದಕ್ಕೂ ಕಮ್ಮಿಯಿಲ್ಲ, ಕೆಂಪುಕೋಟೆ ಮೇಲೆ ತ್ರಿವರ್ಣ ಧ್ವಜ ಹಾರಿಸಿದಂತಹ ಜೆಡಿಎಸ್ ವರಿಷ್ಠರಾದ ಹೆಚ್.ಡಿ.ದೇವೇಗೌಡರನ್ನು ದೇಶಕ್ಕೆ ಪ್ರಧಾನಿಯನ್ನಾಗಿ ಕೊಟ್ಟಂತಹ ಏಕೈಕ ಪಕ್ಷ ಜೆಡಿಎಸ್ ಪಕ್ಷ ಎಂದು ಬಣ್ಣಿಸಿದರು.
ಮುಂಬರುವ ಜಿಲ್ಲಾ ಮತ್ತು ತಾಲ್ಲೂಕು ಪಂಚಾಯಿತಿ, ಮಹಾನಗರಪಾಲಿಕೆ ಮತ್ತು ಲೋಕಸಭಾ ಚುನಾವಣೆಯಲ್ಲಿ ಅತಿ ಹೆಚ್ಚು ಸ್ಥಾನಗಳನ್ನು ಗೆಲ್ಲಿಸುವಲ್ಲಿ ಪಕ್ಷದ ಕಾರ್ಯಕರ್ತರು ಸಂಘಟಿತರಾಗಿ ಶ್ರಮಿಸಬೇಕು. ಮುಂಬರುವ ಜಿಲ್ಲಾ ಮತ್ತು ತಾಲ್ಲೂಕು ಪಂಚಾಯಿತಿ ಚುನಾವಣೆಗೆ ಮಾಜಿ ಶಾಸಕ ಕೆ.ಎಂ.ತಿಮ್ಮರಾಯಪ್ಪ ನೇತೃತ್ವದಲ್ಲಿ ೧೫ ಸದಸ್ಯರನ್ನೊಳಗೊಂಡ ಕೋರ್ ಕಮಿಟಿ ಮಾಡಲಾಗಿದೆ. ಯಾರೂ ಕೂಡ ಎದೆಗುಂದದೆ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿಯವರ ಅವಧಿಯಲ್ಲಿ ಕೊಟ್ಟಂತಹ ಜನಪರ ಯೋಜನೆಗಳನ್ನು ಜನತೆಗೆ ತಿಳಿಸುವ ಮೂಲಕ ಜಿಲ್ಲೆಯಲ್ಲಿ ಮತ್ತೆ ಜೆಡಿಎಸ್ ಭದ್ರಕೋಟೆಯನ್ನಾಗಿಸಲು ಶ್ರಮಿಸಬೇಕೆಂದು ಕರೆ ನೀಡಿದರು.
ಮಾಜಿ ಶಾಸಕ ಕೆ.ಎಂ.ತಿಮ್ಮರಾಯಪ್ಪ ಮಾತನಾಡಿ, ಸ್ವಾತಂತ್ರö್ಯ ಬಂದು ೭೭ ವರ್ಷಗಳಲ್ಲಿ ಪ್ರತೀ ವರ್ಷ ಹೊಸ ಹೊಸ ಸಾಧನೆಗಳನ್ನು ಮಾಡುತ್ತಾ ಪ್ರಗತಿಯತ್ತ ಸಾಗುತ್ತಿದ್ದೇವೆ. ದೇಶದ ಸಂಪತ್ತನ್ನು ಲೂಟಿಮಾಡಿದಂತಹ ಬ್ರಿಟೀಷರಿಂದ ಸ್ವಾಂತ್ರö್ಯವನ್ನು ಪಡೆಯಲು ಅನೇಕ ಮಹನೀಯರು ಹೋರಾಟದ ಮೂಲಕ ತಮ್ಮ ಪ್ರಾಣವನ್ನು ತೆತ್ತಿದ್ದಾರೆ. ಅವರನ್ನು ನಾವು ಸ್ಮರಿಸುವ ಮೂಲಕ ಸ್ವಾತಂತ್ರೊö್ಯÃತ್ಸವವನ್ನು ಆಚರಣೆ ಮಾಡುತ್ತಿದ್ದೇವೆ ಎಂದು ತಿಳಿಸಿದರು.
ದೇಶದ ಪ್ರಧಾನಿಯಾಗಿ ಹೆಚ್.ಡಿ.ದೇವೇಗೌಡರು ಅನೇಕ ಜನಪರ ಯೋಜನೆಗಳನ್ನು ಜಾರಿಗೆ ತಂದು ದೇಶದ ಅಭಿವೃದ್ಧಿಗೆ ಶ್ರಮಿಸಿದ್ದಾರೆ. ಅದೇ ರೀತಿ ಮುಖ್ಯಮಂತ್ರಿಯಾಗಿ ಹೆಚ್.ಡಿ.ಕುಮಾರಸ್ವಾಮಿಯವರು ಸಹ ರಾಜ್ಯದ ಅಭಿವೃದ್ಧಿಗೆ ಅನೇಕ ಜನಪರ ಯೋಜನೆಗಳನ್ನು ಕೊಡುಗೆಯಾಗಿ ನೀಡಿದ್ದಾರೆ ಎಂದು ಬಣ್ಣಿಸಿದರು.
ಜೆಡಿಎಸ್ ಮಹಿಳಾಧ್ಯಕ್ಷೆ ತಾಹೆರಾ ಕುಲ್ಸುಂ ಮಾತನಾಡಿ, ದೇಶದಲ್ಲಿ ಮಹಿಳೆಯರಿಗೆ ಇನ್ನೂ ಸ್ವಾತಂತ್ರö್ಯ ಸಿಕ್ಕಿಲ್ಲ, ಒಬ್ಬಂಟಿಯಾಗಿ ಮಹಿಳೆ ಓಡಾಡದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಕೇಂದ್ರ ಸರ್ಕಾರ ಅತ್ಯಾಚಾರಿಗಳಿಗೆ ಗಲ್ಲುಶಿಕ್ಷೆ ಕಾಯ್ದೆ ಜಾರಿಗೆ ತಂದಿರುವುದು ಸ್ವಾಗತಾರ್ಹ. ಆದಷ್ಟು ಬೇಗ ಕಾಯ್ದೆ ಅನುಷ್ಠಾನಕ್ಕೆ ತರಬೇಕೆಂದು ಒತ್ತಾಯಿಸಿದರು.
ಕಾರ್ಯಕ್ರಮದಲ್ಲಿ ಮಹಾನಗರಪಾಲಿಕೆ ಉಪಮೇಯರ್ ಟಿ.ಕೆ.ನರಸಿಂಹಮೂರ್ತಿ, ಪಾಲಿಕೆ ಸದಸ್ಯರಾದ ಧರಣೇಂದ್ರಕುಮಾರ್, ಹೆಚ್.ಡಿ.ಕೆ.ಮಂಜುನಾಥ್, ಜೆಡಿಎಸ್ ರಾಜ್ಯ ಹಿರಿಯ ಉಪಾಧ್ಯಕ್ಷ ದಾಂಡೇಲಿ ಗಂಗಣ್ಣ, ಎಸ್ಟಿ ಘಟಕದ ಅಧ್ಯಕ್ಷ ಸೋಲಾರ್ ಕೃಷ್ಣಮೂರ್ತಿ, ನಗರಾಧ್ಯಕ್ಷ ವಿಜಿಗೌಡ, ಮುಖಂಡರಾದ ತನ್ವೀರ್, ಸೊಗಡು ವೆಂಕಟೇಶ್, ಚಲುವರಾಜ್, ರೈತ ಘಟಕದ ಜಿಲ್ಲಾಧ್ಯಕ್ಷ ರಂಗನಾಥ್, ವಿಶ್ವೇಶ್ವರಯ್ಯ, ಭೈರೇಶ್, ರಂಗಪ್ಪ, ಧನಂಜಯ್ಯ, ಗಣೇಶ್ ಕ್ಯಾತ್ಸಂದ್ರ, ಶ್ರೀನಿವಾಸಗೌಡ, ದರ್ಶನ್, ದೇವರಾಜ್, ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ತಾಹೆರಾ ಕುಲ್ಸುಮ್, ಯಶೋಧ, ಲಕ್ಷö್ಮಮ್ಮ, ಜಯಲಕ್ಷಿö್ಮ, ರಾಧಾಗೌಡ, ಮಂಜುಳ, ರಾಧಾಮಣಿ, ಮಮತಾರಾಣಿ, ಸೇವಾದಳದ ಜಿಲ್ಲಾಧ್ಯಕ್ಷ ಕೆಂಪರಾಜು, ಕಚೇರಿ ವ್ಯವಸ್ಥಾಪಕ ಮಧುಗೌಡ ಸೇರಿದಂತೆ ಹಲವರು ಹಾಜರಿದ್ದರು.
ತುಮಕೂರು: ಜಿಲ್ಲಾ ಜೆಡಿಎಸ್ ಕಚೇರಿಯಲ್ಲಿ ೭೭ನೇ ಸ್ವಾತಂತ್ರ ದಿನಾಚರಣೆ

Leave a comment
Leave a comment


