ತುಮಕೂರು: ಪ್ರೆಸ್ ಕ್ಲಬ್ ತುಮಕೂರು ಹಾಗು ಅಮೋಘ ಟಿವಿ ಬಳಗದ ವತಿಯಿಂದ ಹಿರಿಯ ಪತ್ರಿಕೋದ್ಯಮಿ ದಿವಂಗತ ಕೆ.ಶ್ರೀನಿವಾಸ್ ರೆಡ್ಡಿ ಅವರಿಗೆ ನುಡಿ ನಮನ ಕಾರ್ಯಕ್ರಮ ನಡೆಯಿತು.
ಭಾನುವಾರ ನಗರದ ಆಲದ ಮರಪಾರ್ಕ್ನಲ್ಲಿ ಹಿರೇಮಠಾಧ್ಯಕ್ಷ ಡಾ.ಶ್ರೀ ಶಿವಾನಂದ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ನಗರ ಶಾಸಕ ಜಿ.ಬಿ.ಜ್ಯೋತಿಗಣೇಶ್, ಮಾಜಿ ಸಂಸದ ಎಸ್.ಪಿ.ಮುದ್ದಹನುಮೇಗೌಡ, ಜಿಪಂ ಸಿಇಒ ಜಿ.ಪ್ರಭು, ಜಿಲ್ಲಾ ಪೊಲೀಸ್ ಅಧೀಕ್ಷಕ ಕೆ.ವಿ.ಅಶೋಕ್ ಭಾಗಿಯಾಗಿ ನುಡಿನಮನ ಸಲ್ಲಿಸಿದರು.
ಮಾಜಿ ಸಂಸದ ಎಸ್.ಪಿ.ಮುದ್ದಹನುಮೇಗೌಡ ಮಾತನಾಡಿ, ಇತ್ತೀಚಿನ ದಿನದಲ್ಲಿ ಮಧ್ಯವಯಸ್ಸಿಗೆ ಸಾಕಷ್ಟು ಜನರು ನಮ್ಮನ್ನು ಅಗಲಿ ಹೋಗುತ್ತಿರುವುದು ನೋವಿನ ಸಂಗತಿ. ಪತ್ರಕೋದ್ಯಮ ಕ್ಷೇತ್ರದ ಆಸ್ತಿಯಾಗಿದ್ದ ಶ್ರೀನಿವಾಸ್ರೆಡ್ಡಿ ಅಗಲಿಕೆ ಇಂತಹ ನೋವಿನ ಘಟನೆ ಎಂದರು.
ವೈದ್ಯಲೋಕದಲ್ಲಿ ನಾವು ತುಂಬಾ ಮುಂದಿದ್ದರೂ ಶ್ರೀನಿವಾಸ್ರೆಡ್ಡಿ ಅವರನ್ನು ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಅವರು ಅರ್ಧಕ್ಕೆ ನಿಲ್ಲಿಸಿರುವ ಮಾಧ್ಯಮ ಕ್ಷೇತ್ರದ ರಥವನ್ನು ಎಲ್ಲರೂ ಸೇರಿ ಮುನ್ನಡೆಸಬೇಕಾಗಿದೆ ಎಂದರು.
ಶಾಸಕ ಜಿ.ಬಿ.ಜ್ಯೋತಿಗಣೇಶ್ ಮಾತನಾಡಿ, ತುಮಕೂರಿನ ಪತ್ರಿಕೋದ್ಯಮದಲ್ಲಿ ಛಾಪು ಮೂಡಿಸಿದ್ದ ಶ್ರೀನಿವಾಸ್ರೆಡ್ಡಿ ಶಿಕ್ಷಣ ಸಂಸ್ಥೆ ಹಾಗೂ ಸ್ಥಳೀಯ ಮಾಧ್ಯಮದ ಮೂಲಕ ಸಾಕಷ್ಟು ಕೊಡುಗೆ ನೀಡಿದ್ದಾರೆ ಎಂದು ಸ್ಮರಿಸಿದರು.
ಜಿಪಂ ಸಿಇಒ ಜಿ.ಪ್ರಭು ಮಾತನಾಡಿ, ಶ್ರೀನಿವಾಸ್ ಅವರಿಂದ ಪ್ರೇರೇಪಿತರಾಗಿ ನಾವುಗಳು ಅವರಂತೆಯೇ ಮುನ್ನಡೆಯಬೇಕು, ಅವರು ನಡೆದ ದಾರಿ ನಮಗೆ ಮಾರ್ಗದರ್ಶನವಾಗಿದೆ. ಬೇರೆ ರಾಜ್ಯದಿಂದ ಬಂದು ನಮ್ಮ ಜಿ¯್ಲೆಯಲ್ಲಿ ನೆಲೆಯೂರಿ ಹಲವರಿಗೆ ಉದ್ಯೋಗಧಾತರಾಗಿ ಸೇವೆ ಮಾಡಿz್ದÁರೆ ಎಂದರು.
ಜಿಲ್ಲಾ ಪೊಲೀಸ್ ಅಧೀಕ್ಷಕ ಕೆ.ವಿ.ಅಶೋಕ್ ಮಾತನಾಡಿ, ನಾನು ಜಿ¯್ಲÉಗೆ ಆಗಮಿಸಿದ್ದ ದಿನವೇ ನನಗೆ ಶ್ರೀನಿವಾಸ್ ರೆಡ್ಡಿ ಅವರು ಮೃತಪಟ್ಟ ವಿಚಾರ ತಿಳಿಯಿತು. ಮಾಧ್ಯಮ, ಶಿಕ್ಷಣ, ಕೇಬಲ್ ಕ್ಷೇತ್ರಗಳು ಲಾಭರಹಿತವಾಗಿದ್ದು ಇಂತಹ ಉದ್ಯಮವನ್ನೇ ನಡೆಸಿದ ಅವರ ಅಗಲಿಕೆ ಎಲ್ಲರಿಗೂ ನಷ್ಟ ತಂದಿದೆ ಎಂದರು.
ತುಮಕೂರು ಹಿರೇಮಠದ ಶ್ರೀಶಿವಾನಂದ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಬಯಲಾದ ವ್ಯಕ್ತಿಗೆ ಬಯಲಿನಲ್ಲಿ ನುಡಿನಮನ ಸಲ್ಲಿಸಲಾಗಿದೆ. ಶ್ರೀನಿವಾಸ್ರೆಡ್ಡಿ ಬಗ್ಗೆ ಎಲ್ಲರೂ ಹೃದಯದಿಂದ ಮಾತನಾಡಿz್ದÁರೆ ಎಂದರು.
ಕೀರ್ತಿ ಶರೀರ ಉಳಿಯುತ್ತದೆ ಕಿರಿಕ್ ಶರೀರ ಅಳಿಯುತ್ತದೆ. ಸೀನಣ್ಣ ಅವರದ್ದು ಕೀರ್ತಿ ಶರೀರ. ಅವರಲ್ಲಿ ನಾಯಕನ ಗುಣವಿತ್ತು. ನಾಯಕನ ಮುಖದಲ್ಲಿ ನಗೆ ಇರಬೇಕೇ ಹೊರೆತು ಹೊಗೆ ಇರಬಾರದು, ದಗೆ ಇರಬಾರದು ಎಂದರು. ಸೀನಣ್ಣ ಅವರ ಸಾವು ವೈಯಕ್ತಿಕ ಸಾವಲ್ಲ ಅದು ಒಂದು ಕುಟುಂಬದ ಒಂದು ಸಮಾಜದ ಸಾವು ಎಂದರು.
ಜನ್ಮಭೂಮಿ ಆಂದ್ರ ಪ್ರದೇಶವಾಗಿದ್ದರೂ ಅವರ ಕರ್ಮಭೂಮಿ ಕರ್ನಾಟಕವಾಗಿದೆ . ಸಾವು ಅನಿವಾರ್ಯ. ಅದನ್ನು ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ. ಉತ್ತಮ ವ್ಯಕ್ತಿಗಳ ಸಾವು ಚಿರಂಜೀವಿಯಾಗಬೇಕು, ಸತ್ತವರೆಲ್ಲ ಇತಿಹಾಸವಾಗುವುದಿಲ್ಲ. ಇತಿಹಾಸವಾಗುವವರು ಎಂದಿಗೂ ಸಾಯುವುದಿಲ್ಲ ಎಂದರು.
ಕಸಾಪ ಜಿಲ್ಲಾಧ್ಯಕ್ಷ ಕೆ.ಎಸ್.ಸಿದ್ಧಲಿಂಗಪ್ಪ, ಪ್ರೆಸ್ ಕ್ಲಬ್ ತುಮಕೂರು ಅಧ್ಯಕ್ಷ ಶಶಿಧರ್ ದೋಣಿಹಕ್ಲು, ಸ್ಫೂರ್ತಿ ಡೆವಲರ್ಸ್ ಎಸ್.ಪಿ.ಚಿದಾನಂದ್, ವೃಕ್ಷಮೀತ್ರದ ಪ್ರೊ.ಸಿದ್ದಪ್ಪ, ಸಂಕಲ್ಪ ಡಿಜಿಟಲïನ ಸೋಮಶೇಖರ್ ಮಾತನಾಡಿದರು.