ಸಾರಿಗೆ ದಿವಸದ ಅಂಗವಾಗಿ ಸೆಪ್ಟೆಂಬರ್ ೦೬ ರಂದು ತುಮಕೂರು ಜಿಲ್ಲಾ ಲಾರಿ ಮಾಲೀಕರ ಸಂಘದ ನೇತೃತ್ವದಲ್ಲಿ ಲಾರಿ ಚಾಲಕರು ಮತ್ತು ಕ್ಲಿನರ್ ಗಳಿಗೆ ಉಚಿತ ಬೃಹತ್ ಆರೋಗ್ಯ ತಪಾಸಣಾ ಶಿಬಿರ ಹಾಗು ಅಪಘಾತ ರಹಿತ ಚಾಲನೆ ಮಾಡಿದ ಚಾಲಕರಿಗೆ ಅಭಿನಂದನಾ ಸಮಾರಂಭ ವನ್ನು ಆಯೋಜಿಸಲಾಗಿದೆ ಎಂದು ತುಮಕೂರು ಜಿಲ್ಲಾ ಲಾರಿ ಮಾಲೀಕರ ಸಂಘದ ನಿರ್ದೇಶಕ ಟಿ.ಆರ್.ಸದಾಶಿವಯ್ಯ ತಿಳಿಸಿದ್ದಾರೆ.
ಸಂಘದ ಕಚೇರಿಯಲ್ಲಿ ಅಧ್ಯಕ್ಷರಾದ ಚನ್ನಬಸಪಪ್ರಸನ್ನ ಅವರ ಅಧ್ಯಕ್ಷತೆಯಲ್ಲಿ ಕರೆಯಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎಪಿಎಂಸಿ ಯಾರ್ಡ್ ನಲ್ಲಿರುವ ಸಂಘದ ಕಚೇರಿಯಲ್ಲಿ ಸೆಪ್ಟೆಂಬರ್ ೦೬ ರ ಬೆಳಗ್ಗೆ ೧೦ ಗಂಟೆಯಿAದ ಮದ್ಯಾಹ್ನ ಮೂರು ಗಂಟೆಯವರೆಗೆ ಸಿದ್ದಗಂಗಾ ಅಸ್ಪತ್ರೆಯ ಸಹಯೋಗದಲ್ಲಿ ಆರೋಗ್ಯ ತಪಾಸಣಾ ಶಿಬಿರ ನಡೆಯಲಿದೆ ಎಂದರು.
ಶಿಬಿರವನ್ನು ಲಾರಿ ಮಾಲೀಕರ ಸಂಘದ ಜೊತೆಗೆ ಜಿಲ್ಲಾ ಹಮಾಲಿಗಳ ಸಂಘ, ಜಿಲ್ಲಾ ಲಾರಿ ಚಾಲಕರು ಮತ್ತು ಮಾಲೀಕರ ಸಂಘಗಳ ಸಹಯೋಗದಲ್ಲಿ ನಡೆಸುತ್ತಿದ್ದು ಸಂಘದಲ್ಲಿ ನೊಂದಾಯಿತ ಸುಮಾರು ೨೦೦೦ ಜನ ಚಾಲಕರು ಮತ್ತು ಕ್ಲೀನರ್ ಗಳಲ್ಕಿ ೫೦೦-೬೦೦ ಜನರು ಶಿಬಿರದಲ್ಲಿ ಭಾಗವಹಿಸುವ ನಿರೀಕ್ಷೆ ಇದೆ. ಪ್ರಮುಖವಾಗಿ ಕಣ್ಣಿನ ದೋಷ,ಬೆನ್ನಮೂಳೆ, ರಕ್ತದೊತ್ತಡ, ಮಧುಮೇಹ, ರಕ್ತ ಪರೀಕ್ಷೆ ಜೊತೆಗೆ ಜನರಲ್ ಚೆಕಪ್ ನಡೆಯಲಿದ್ದು, ಅಗತ್ಯ ಇರುವವರಿಗೆ ಸ್ಥಳದಲ್ಲಿಯೇ ಕನ್ನಡಕ ನೀಡಲಾಗುವುದು.ಅಲ್ಲದೆ ಮೆಡಿಷನ್ ಸಹ ವಿತರಿಸಲು ಸಿದ್ದತೆ ಮಾಡಿಕೊಳ್ಳಲಾಗಿದೆ ಎಂದು ಟಿ.ಆರ್.ಸದಾಶಿವಯ್ಯ ತಿಳಿಸಿದರು.
ಸಾರಿಗೆ ದಿನದ ಅಂಗವಾಗಿ ನಡೆಯುವ ಕಾರ್ಯಕ್ರಮಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ.ಪರಮೇಶ್ವರ್ ಚಾಲನೆ ನೀಡುವರು. ಶಾಸಕರಾದ ಜಿ.ಬಿ.ಜೋತಿಗಣೇಶ್, ತುಮಕೂರಿನ ಮೇಯರ್ ಶ್ರೀ ಮತಿ ಪ್ರಭಾವತಿ, ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್ ಎಸ್ಪಿ ರಾಹುಲ್ ಕುಮಾರ್ ಶಹಪೂರ್ ವಾಡ್, ಜಿಲ್ಲಾ ಸಾರಿಗೆ ಅಧಿಕಾರಿ ಎಸ್.ರಾಜು, ಎಪಿಎಂಸಿ ಕಾರ್ಯದರ್ಶಿ ಎಂ.ವಿ.ಸುಮ, ಸಿದ್ದಗಂಗಾ ಆಸ್ಪತ್ರೆಯ ಡಾ.ಪರಮೇಶ್, ತುಮಕೂರು ಲಾರಿ ಮಾಲೀಕರ ಬಳಕೆದಾರರ ಸೌರ್ಹಾಧ ಸಹಕಾರಿಯ ಅಧ್ಯಕ್ಷ ಎನ್.ಆರ್.ವಿಶ್ವಾರಾಧ್ಯ ಭಾಗವಹಿಸುವರು. ಕಾರ್ಯಕ್ರಮದ ಅಧ್ಯಕ್ಷತೆಯನ್ಬು ತುಮಕೂರು ಜಿಲ್ಲಾ ಲಾರಿ ಮಾಲೀಕರ ಸಂಘದ ಅಧ್ಯಕ್ಷರಾದ ಟಿ.ಜಿ.ಚನ್ನಬಸವ ಪ್ರಸನ್ಬ ಅವರು ವಹಿಸಲಿದ್ದಾರೆ ಎಂದು ವಿವರ ನೀಡಿದರು.
ಸಿದ್ದಗಂಗಾ ಆಸ್ಪತ್ರೆಯ ಪಿ.ಆರ್.ಓ ಕಾಂತರಾಜು ಮಾತನಾಡಿ, ಲಾರಿ ಮಾಲೀಕರ ಸಂಘದ ಕೋರಿಕೆಯ ಮೇರೆಗೆ ಸೆಪ್ಟೆಂಬರ್ ೦೬ ರ ಬೆಳಗ್ಗೆ ೧೦ ಗಂಟೆಯಿAದ ಮಧ್ಯಾಹ್ನ ೦೩ ಗಂಟೆಯವರೆಗೆ ಸಿದ್ದಗಂಗಾ ಆಸ್ಪತ್ರೆಯ ನುರಿತ ವೈಧ್ಯರು ಶಿಬಿರ ನಡೆಸಿಕೊಡಲಿದ್ದಾರೆ. ಕಣ್ಣು,ಕಿವಿ,ಬೆನ್ನುನೋವು, ಬಿ.ಪಿ.,ಶುಗರ್, ಹೃದಯಕ್ಕೆ ಸಂಬAಧಿಸಿದ ಇಸಿಜಿ, ಮತ್ತಿತರ ತಪಾಸಣೆಗಳು ನಡೆಯಲಿವೆ. ಅಲ್ಲದೆ ಚಾಲಕರು ಮತ್ತು ಕ್ಲೀನರ್ ಗಳ ಮಾನಸಿಕ ಆರೋಗ್ಯಕ್ಕಾಗಿ ಮಾನಸಿಕ ತಜ್ಞ ರಿಂದ ಸಹ ಕೌನ್ಸಿಲಿಂಗ ಆಯೋಜಿಸಲಾಗಿದೆ.ಹೆಚ್ಚಿನ ಚಿಕಿತ್ಸೆ ಅಗತ್ಯ ಇರುವವರಿಗೆ ಸಿದ್ದಗಂಗಾ ಆಸ್ಪತ್ರೆಯಲ್ಲಿ ಉಚಿತವಾಗಿ ಟ್ರೀಟ್ ಮೆಂಟ್ ನೀಡಲಾಗುವುದು. ಲಾರಿ ಚಾಲಕರು ಮತ್ತು ಕ್ಲೀನರ್ ಗಳು ಇದರ ಲಾಭ ಪಡೆದುಕೊಳ್ಳಬೇಕೆಂದರು.
ಸುದ್ದಿಗೋಷ್ಠಿಯಲ್ಲಿ ತುಮಕೂರು ಜಿಲ್ಲಾ ಲಾರಿ ಮಾಲೀಕರ ಘದ ಅಧ್ಯಕ್ಷ ಟಿ.ಜಿ.ಚನ್ನಬಸವಪ್ರಸನ್ನ, ಉಪಾಧ್ಯಕ್ಷ ಆಶೋಕ್ ಕುಮಾರ್ ಜೈನ್, ಕಾರ್ಯದರ್ಶಿ ಶೌಕತ್ ಉಲ್ಲಾಖಾನ್, ಸಹಕಾರ್ಯದರ್ಶಿ ಟಿ.ಎಸ್.ನಾಗಭೂಷಣ್ ಆರಾಧ್ಯ, ಖಜಾಂಚಿ ಶಿವರುದ್ರ ಆರಾಧ್ಯ, ನಿರ್ದೇಶಕರುಗಳು ಉಪಸ್ಥಿತರಿದ್ದರು.
ಜಿಲ್ಲಾ ಲಾರಿ ಚಾಲಕರು ಮತ್ತು ಮಾಲೀಕರ ಸಂಘಗಳ ಸಹಯೋಗದಲ್ಲಿ ಸಾರಿಗೆ ದಿವಸ

Leave a comment
Leave a comment