ಭಾರತ್ ಸ್ಕೌಟ್ಸ್ & ಗೈಡ್ಸ್, ಸ್ಥಳೀಯ ಸಂಸ್ಥೆ, ತುಮಕೂರು ವತಿಯಿಂದ ನಡೆಸಲಾದ ಮೂಲ ತರಬೇತಿ ಶಿಬಿರದ ಸಮಾರೋಪ ಸಮಾರಂಭವನ್ನು ಶ್ರೀ ಸಿದ್ಧಗಂಗಾ ಮಠದಲ್ಲಿ ಏರ್ಪಡಿಸಲಾಗಿತ್ತು. ಮಾಜಿ ಸಚಿವರು ಹಾಗೂ ರಾಜ್ಯ ಮುಖ್ಯ ಆಯುಕ್ತರಾದ ಪಿ.ಜಿ.ಆರ್.ಸಿಂದ್ಯಾರವರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಪರಮಪೂಜ್ಯ ಶ್ರೀ ಶ್ರೀ ಸಿದ್ಧಲಿಂಗ ಮಹಾಸ್ವಾಮಿಗಳು ಕಾರ್ಯಕ್ರಮದ ಉಪಸ್ಥಿತಿಯನ್ನು ವಹಿಸಿ ಶಿಬಿರಾರ್ಥಿಗಳಿಗೆ ವಿಶೇಷ ಆಶೀರ್ವಚನ ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಭಾರತ್ ಸ್ಕೌಟ್ಸ್ & ಗೈಡ್ಸ್ನ ಸ್ಥಳೀಯ ಸಂಸ್ಥೆಯ ಅಧ್ಯಕ್ಷರಾದ ಉಪ್ಪಾರಹಳ್ಳಿ ಕುಮಾರ್ರವರು ವಹಿಸಿಕೊಂಡಿದ್ದರು. ಈ ಮೂಲ ತರಬೇತಿ ಶಿಬಿರದಲ್ಲಿ ಸ್ಕೌಟ್ ವಿಭಾಗದಿಂದ ೩೯ ಶಿಕ್ಷಕರು, ಗೈಡ್ಸ್ ವಿಭಾಗದಿಂದ ೪೦ ಶಿಕ್ಷಕರು, ಕಬ್ಸ್ ವಿಭಾಗದಿಂದ ೩೦ ಶಿಕ್ಷಕರು, ಫ್ಲಾಕ್ ವಿಭಾಗದಿಂದ ೩೩ ಶಿಕ್ಷಕರು ಒಟ್ಟಾರೆಯಾಗಿ ೧೪೨ ಜನ ಶಿಕ್ಷಕರು ಭಾಗವಹಿಸಿದ್ದರು. ಇನ್ನು ಈ ಸಮಾರಂಭದಲ್ಲಿ ರಾಜ್ಯ ಉಪಾಧ್ಯಕ್ಷರು ಹಾಗೂ ಜಿಲ್ಲಾ ಮುಖ್ಯ ಆಯುಕ್ತರಾದ ಆಶಾಪ್ರಸನ್ನ ಕುಮಾರ್, ಗಂಗಾಧರ್, ಅನ್ನಪೂರ್ಣ ಎಳವಾರ್, ಬಸವಚಾರ್, ಕುಸುಮ ಸೇರಿದಂತೆ ಜಿಲ್ಲಾ ಸಂಸ್ಥೆಯ ಪದಾಧಿಕಾರಿಗಳು, ಸ್ಥಳೀಯ ಸಂಸ್ಥೆ ಪದಾಧಿಕಾರಿಗಳು, ಶಿಬಿರಾರ್ಥಿಗಳು ಭಾಗವಹಿಸಿದ್ದರು