ವಿದ್ಯಾರ್ಥಿಗಳನ್ನು ಅರ್ಥೈಸಿಕೊಳ್ಳಬಲ್ಲವರು ಸಮರ್ಥ ಶಿಕ್ಷಕರಾಗುತ್ತಾರೆ
ಗುರಿ ತೋರಿಸುವ ಗುರುಗಳನ್ನು ಗೌರವಿಸುವವರು ಪ್ರಪಂಚಾದ್ಯAತ ಗೌರವಿಸಲ್ಪಡುತ್ತಾರೆ. ಶಿಕ್ಷಣ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವವರೆಲ್ಲರಿಗೂ ತಮ್ಮದೇ ಆದ ಸಾಮಾಜಿಕ ಹೊಣೆಗಾರಿಕೆಯಿದೆ. ವಿದ್ಯಾರ್ಥಿಗಳನ್ನು ಅರ್ಥೈಸಿಕೊಂಡು ಬೋಧನೆಯಲ್ಲಿ ತೊಡಗುವವರು ಸಮರ್ಥ ಶಿಕ್ಷಕರಾಗುತ್ತಾರೆ ಎಂದು ವಿದ್ಯಾವಾಹಿನಿ ಸಮೂಹ ಶಿಕ್ಷಣ ಸಂಸ್ಥೆಗಳ ಸಂಸ್ಥಾಪಕ ಅಧ್ಯಕ್ಷ ಕೆ.ಬಿ.ಜಯಣ್ಣ ಹೇಳಿದರು.
ಅವರು ತುಮಕೂರು ರೌಂಡ್ ಟೇಬಲ್- ೧೭೩ ಹಾಗೂ ೪೧ ಇಯರ್ಸ್ ಕ್ಲಬ್ ವತಿಯಿಂದ ವಿದ್ಯಾನಿಧಿ ಕಾಲೇಜಿನಲ್ಲಿ ಆಯೋಜಿಸಲಾಗಿದ್ದ ಗುರುದೇವೋಭವ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡುತ್ತಿದ್ದರು.
ಇದೇ ಸಂದರ್ಭದಲ್ಲಿ ಶಿಕ್ಷಕರನ್ನು ಗೌರವಿಸಿ ಮಾತನಾಡಿದ ಸಂಸ್ಥೆಯ ಕಾರ್ಯದರ್ಶಿ ಎನ್.ಬಿ.ಪ್ರದೀಪ್ ಕುಮಾರ್ ಶಿಕ್ಷಕರಾಗುವುದೆಂದರೆ ಇತರ ಎಲ್ಲ ಉದ್ಯೋಗಗಳನ್ನು ಸೃಷ್ಟಿಸುವ ಅತ್ಯಂತ ಗೌರವಾನ್ವಿತ ಉದ್ಯೋಗ. ಬೋಧನೆಯಲ್ಲಿ ತೊಡಗಿಸಿಕೊಂಡಿರುವವರು ತಮ್ಮ ಕ್ಷೇತ್ರದಲ್ಲಿ ಸದಾ ಹೊಸತನವನ್ನು ಕಂಡುಕೊಳ್ಳುತ್ತಿರಬೇಕು. ತಂತ್ರಜ್ಞಾನದ ಬಳಕೆಯನ್ನು ಸಮರ್ಪಕವಾಗಿ ತಿಳಿದವರು ವಿದ್ಯಾರ್ಥಿಗಳನ್ನು ಹೆಚ್ಚು ಪ್ರಭಾವಿಸಬಲ್ಲರು. ಗೂಗಲ್ ಗಿಂತ ತರಗತಿಯ ಗುರುಗಳು ತಮ್ಮ ಗೊಂದಲವನ್ನು ಪರಿಹರಿಸುತ್ತಾರೆ ಎಂಬುದು ಮಕ್ಕಳಿಗೆ ಅರ್ಥವಾದರೆ ಅವರು ಶಿಕ್ಷಕರನ್ನು ಹೆಚ್ಚು ಅವಲಂಬಿಸುತ್ತಾರೆ. ತನ್ಮೂಲಕ ಸ್ವಯಂ ಕಲಿಕೆಯನ್ನೂ ಉತ್ತೇಜಿಸಿದಂತಾಗುತ್ತದೆ ಎಂದರು.
ಪ್ರಾಸ್ತಾವಿಕ ನುಡಿಗಳನ್ನಾಡಿದ ತುಮಕೂರು ರೌಂಡ್ ಟೇಬಲ್ – ೧೭೩ ಅಧ್ಯಕ್ಷ ಆಕಾಶ್ ಆರ್ ಮುಲ್ಲಂಗಿ ಶಿಕ್ಷಣದ ಮೂಲಕ ಸ್ವಾತಂತ್ರö್ಯ ಎಂಬ ಧ್ಯೇಯವಾಕ್ಯದೊಂದಿಗೆ ರೌಂಡ್ ಟೇಬಲ್ ದೇಶಾದ್ಯಂತ ಕೆಲಸ ಮಾಡುತ್ತಿದೆ. ಸರಕಾರಿ ಶಾಲೆಗಳಿಗೆ ಅಗತ್ಯವಿರುವ ತರಗತಿ ಕೊಠಡಿಗಳನ್ನು ಕಟ್ಟಿಸಿಕೊಡುವುದರ ಜತೆಗೆ ಮಕ್ಕಳಿಗೆ ಅಗತ್ಯವಿರುವ ಇತರ ಸೌಲಭ್ಯಗಳನ್ನು ಒದಗಿಸಿಕೊಡುವಲ್ಲಿ ರೌಂಡ್ ಟೇಬಲ್ ಸಮಾನ ಮನಸ್ಕರು ಶ್ರಮಿಸುತ್ತಿದ್ದಾರೆ. ಶಿಕ್ಷಕರನ್ನು ಗೌರವಿಸುವುದು ಅವರ ಸೇವೆಗೆ ಪ್ರತಿಯಾಗಿ ನಾವು ತೋರಬಹುದಾದ ಸಣ್ಣಕಾಣಿಕೆ ಎಂದರು.
೪೧ ಇಯರ್ಸ್ ಕ್ಲಬ್ ಅಧ್ಯಕ್ಷ ಭರತೇಶ್ ಮಾತನಾಡಿ ಪ್ರತಿಯೊಬ್ಬರೊಳಗೂ ಒಬ್ಬೊಬ್ಬ ಗುರುವಿರುತ್ತಾನೆ. ನಮಗೆ ಎದುರಾಗುವ ಎಲ್ಲರಿಂದಲೂ ನಾವು ಕಲಿಯುತ್ತೇವೆ. ಶಿಕ್ಷಕರ ದಿನದಂದು ಎಲ್ಲರನ್ನೂ ಸ್ಮರಿಸೋಣ ಎಂದರು.
ಶಿಕ್ಷಣ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ಮುರಳೀಧರ, ರಾಮಕೃಷ್ಣಯ್ಯ, ವೀರಾಚಾರ್, ಡಾ. ಶಶಿಕಲಾ, ಮಂಜುಳಾ, ಶ್ರೀಕಾಂತ್, ಅಂಬಿಕಾ, ದಯನರಸಿಂಹಯ್ಯ, ಮಂಜುನಾಥ್, ಶಿವಪ್ರಸಾದ್, ಶಾಂತಮಣಿ, ಗಂಗಮ್ಮ, ರಮೇಶ್ ಮತ್ತು ಸಲೊಮನ್ ಸಂದೀಪ್ ಅವರನ್ನು ಈ ಸಂದರ್ಭದಲ್ಲಿ ಗೌರವಿಸಲಾಯಿತು.
ರೌಂಡ್ ಟೇಬಲ್ ಕಾರ್ಯದರ್ಶಿ ವರುಣ್ ಹಾಗೂ ವಿದ್ಯಾನಿಧಿ ಪ್ರಾಂಶುಪಾಲರು ಉಪಸ್ಥಿತರಿದ್ದರು.
ಉಪನ್ಯಾಸಕಿ ನಿಖಿತಾ ಪ್ರಾರ್ಥಿಸಿ, ಆರತಿ ಪಟ್ರಮೆ ಸ್ವಾಗತಿಸಿದರು. ದೀಪಾ ವಂದಿಸಿದರು. ಸನ್ಮಾನಿತರ ಪರಿಚಯವನ್ನು ಗೋವಿಂದರಾಜು, ರಾಜೀವ್ ಕೆ.ಆರ್., ವಿನಯ್ ಹಾಗೂ ದಿವ್ಯಜ್ಯೋತಿ ಪ್ರಸ್ತುತ ಪಡಿಸಿದರು. ಹೇಮಲತಾ ಎಂ.ಎಸ್. ಕಾರ್ಯಕ್ರಮ ನಿರ್ವಹಿಸಿದರು.
ವಿದ್ಯಾರ್ಥಿಗಳನ್ನು ಅರ್ಥೈಸಿಕೊಳ್ಳಬಲ್ಲವರು ಸಮರ್ಥ ಶಿಕ್ಷಕರಾಗುತ್ತಾರೆ
Leave a comment
Leave a comment