ಪಾವಗಡ ತಾಲ್ಲೂಕಿನ ತಿರುಮಣಿಯ ಸೋಲಾರ್ ಪಾರ್ಕ್ಗೆ ಭೇಟಿ ನೀಡಿ ಪರಿಶೀಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಯವರು ಅಂತಹ ಸಭೆಗಳನ್ನು ಎಷ್ಟು ಮಾಡಿಲ್ಲ ಎಂದು ತೀಕ್ಷ÷್ಣವಾಗಿ ಪ್ರತಿಕ್ರಿಯಿಸಿದರು.
ನೂತನ ಇಂಧನ ಸಚಿವ K.J ಜಾರ್ಜ್ ಅವರು ಶಕ್ತಿ ಸ್ಥಳ ಪಾವಗಡ ಸೋಲಾರ್ ಪಾರ್ಕ್ಗೆ ಭೇಟಿ ನೀಡಲು ಬಂದಿದ್ದಾರೆ. ಹೆಲಿಕಾಪ್ಟರ್ನಲ್ಲೇ ನಾವು ಎಲ್ಲವನ್ನು ಗಮನಿಸಿದ್ದೇವೆ ಎಂದ ಅವರು, ಸೋಲಾರ್ ಪಾರ್ಕ್ಗೆ ಜಮೀನು ನೀಡಿರುವ ರೈತರು ಸಮಾಧಾನಕರವಾಗಿರುವುದು ನಮಗೆ ಸಂತೋಷ ತಂದಿದೆ ಎಂದರು.
ಸೋಲಾರ್ ಪಾರ್ಕ್ಗೆ ಜಮೀನು ನೀಡಿದ ಸಂದರ್ಭದಲ್ಲಿ ಮಾಡಿಕೊಂಡಿರುವ ಕರಾರು ಪ್ರಕಾರ ಬಾಡಿಗೆ ಹಣ ತಲುಪುತ್ತಿದೆ ಎಂದು ಅವರು ಹೇಳಿದರು.
ಈ ಸೋಲಾರ್ ಪಾರ್ಕ್ ವಿಶ್ವದಲ್ಲೇ ನಂ. ೧ ಆಗಿತ್ತು. ಈಗ ನಮಗೂ ರಾಜಸ್ಥಾನಕ್ಕೂ ಪೈಪೋಟಿ ಇದೆ. ಮತ್ತೆ ೧೦ ಸಾವಿರ ಎಕರೆ ವಿಸ್ತರಣೆ ಮಾಡಲು ನಿರ್ಧಾರ ಮಾಡಿದ್ದೇವೆ. ಹಿಂದಿನ ನಿಯಮದಂತೆ ರೈತರು ಬಾಡಿಗೆಗೆ ಜಮೀನು ನೀಡಲು ಮುಂದೆ ಬಂದರೆ ಸೋಲಾರ್ ಪಾರ್ಕ್ ವಿಸ್ತರಣೆ ಮಾಡುತ್ತೇವೆ ಎಂದು ತಿಳಿಸಿದರು.
ರಾಜ್ಯದ ಉದ್ದಗಲಕ್ಕೂ ಕುಸುಮ ಯೋಜನೆ ಜಾರಿ ಮಾಡಲು ಕಾರ್ಯಕ್ರಮ ರೂಪಿಸಲಾಗುತ್ತಿದೆ. ರೈತರ ಪಂಪ್ಸೆಟ್ಗೆ ಅವರೇ ವಿದ್ಯುತ್ ಉತ್ಪಾದನೆ ಮಾಡಿಕೊಳ್ಳಲು ಈ ಯೋಜನೆ ರೂಪಿಸಿದ್ದೇವೆ ಎಂದರು.
ಈ ಸೋಲಾರ್ ಪಾರ್ಕ್ ವಿಶ್ವದಲ್ಲೇ ನಂ.1 ಆಗಿತ್ತು


