ತುಮಕೂರು: ಷೇರು ಮಾರುಕಟ್ಟೆಯಲ್ಲಿ ಅಪಾಯ ಹೆಚ್ಚಾಗಿರುತ್ತದೆ. ಹಣ ಅಥವಾ ಶೇರ್ಗಳನ್ನು ಹೂಡಿಕೆ ಮಾಡುವ ಮೊದಲು ಅದರ ಮೂಲಭೂತ ಅಂಶಗಳನ್ನು ತಿಳಿದುಕೊಳ್ಳಬೇಕು. ತಾರ್ಕಿಕವಾಗಿ ಯೋಚಿಸಿ ನಂತರ ಹೂಡಿಕೆ ಮಾಡಬೇಕು ಎಂದು ನೋವೈಸ್ ಲರ್ನಿಂಗ್ ಅಕಾಡೆಮಿಯ ನಿರ್ದೇಶಕ ಸಿ. ಎಸ್. ಕಾರ್ತಿಕ್ ಹೇಳಿದರು.
ತುಮಕೂರು ವಿಶ್ವವಿದ್ಯಾನಿಲಯವು ಸೆಕ್ಯುರಿಟೀಸ್ ಮತ್ತು ಎಕ್ಸ್ಚೇಂಜ್ ಬೋರ್ಡ್ ಆಫ್ ಇಂಡಿಯಾ ಇವರ ಸಹಯೋಗದಲ್ಲಿ ಮಂಗಳವಾರ ಆಯೋಜಿಸಿದ್ದ ‘ಹೂಡಿಕೆದಾರರ ಜಾಗೃತಿ’ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಕೇಂದ್ರ ನಿಯಂತ್ರಿತ ಮಾರುಕಟ್ಟೆಗಳಲ್ಲಿ ಹೂಡಿಕೆ ಮಾಡಬಹುದು. ಹಣ ನಿರ್ವಹಣೆಯ ಬಗ್ಗೆ ಜ್ಞಾನವಿರಬೇಕು. ಮಾರುಕಟ್ಟೆಯ ಆಳ-ಅಗಲ ತಿಳಿದಿರಬೇಕು. ದೀರ್ಘಾವಧಿ, ಅಲ್ಪಾವಧಿಯ ಯೋಜನೆಗಳಲ್ಲಿ ಹಣ ಹೂಡಿಕೆ ಮಾಡಬಹುದು. ಅದಕ್ಕೂ ಮುನ್ನ ಈ ವೃತ್ತಿಯಲ್ಲಿ ಪರಿಣತಿ ಹೊಂದಿರುವ ಹಣ ನಿರ್ವಹಣಾ ವ್ಯವಸ್ಥಾಪಕರನ್ನು ಭೇಟಿ ಮಾಡಿ ಅಥವಾ ಸಲಹೆಗಳನ್ನು ಪಡೆಯಿರಿ ಎಂದು ಹೇಳಿದರು.
ವಿವಿಯ ಉದ್ಯೋಗಾಧಿಕಾರಿ ಪ್ರೊ. ಕೆ. ಜಿ. ಪರಶುರಾಮ, ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ಘಟಕದ ನಿರ್ದೇಶಕ ಪ್ರೊ. ಜಿ. ಬಸವರಾಜ, ಎಂ.ಕಾA (ಮಾಹಿತಿ ವ್ಯವಸ್ಥೆ) ವಿಭಾಗದ ಮುಖ್ಯಸ್ಥ ಡಾ. ಎಸ್. ದೇವರಾಜಪ್ಪ, ನ್ಯಾಷನಲ್ ಸ್ಟಾಕ್ ಎಕ್ಸೆ÷್ಚÃಂಜ್ ಆಫ್ ಇಂಡಿಯಾ ಲಿಮಿಟೆಡ್ನ ಮ್ಯಾನೇಜ್ಮೆಂಟ್ ಟ್ರೆöÊನಿ ಕಿರಣ್ ಡೇವಿಡ್ ಉಪಸ್ಥಿತರಿದ್ದರು.
ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವ ಮೊದಲು ತಾರ್ಕಿಕವಾಗಿ ಯೋಚಿಸಿ
Leave a comment
Leave a comment