ತುಮಕೂರು:ಬಡವರು, ಶೋಷಿತರು,ಹಿಂದುಳಿದ ವರ್ಗಗಳಿಗೆ ಶಿಕ್ಷಣ ನೀಡಿದ ಜೋತಿ ಬಾಪುಲೆ ದಂಪತಿಗಳು, ಈ ದೇಶದ ಶೋಷಿತ ಸಮುದಾಯಗಳ ಎದೆಗೆ ಅಕ್ಷರ ಬಿತ್ತಿದ ಗುರುಗಳಾಗಿದ್ದಾರೆ ಎಂದು ಅಖಿಲ ಭಾರತ ಡಾ.ಅಂಬೇಡ್ಕರ್ ಪ್ರಚಾರ ಸಮಿತಿ ಜಿಲ್ಲಾಧ್ಯಕ್ಷ ಎನ್.ಕೆ.ನಿಧಿ ಕುಮಾರ್ ತಿಳಿಸಿದ್ದಾರೆ.
ತುಮಕೂರು ಅಮಾನಿಕೆರೆಯ ಗಾಜಿನಮನೆ ಆವರಣದಲ್ಲಿ ಅಖಿಲ ಭಾರತ ಡಾ.ಅಂಬೇಡ್ಕರ್ ಪ್ರಚಾರ ಸಮಿತಿವತಿಯಿಂದ ಆಯೋಜಿಸಿದ್ದ ದಾರ್ಶಾನಿಕ, ಸಮಾಜ ಪರಿವರ್ತಕರಾದ ಜೋತಿ ಬಾಪುಲೆ ಅವರ ಜನ್ಮ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಜೋತಿ ಬಾ ಪುಲೆ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದ ಮಾತನಾಡಿದ ಅವರು,ತಲೆ ತಲಾಂತರದಿAದ ಅಕ್ಷರದಿಂದ ವಂಚಿತರಾಗಿರುವ ದಲಿತ,ಹಿಂದುಳಿದ ಸಮುದಾಯಗಳಿಗೆ ಅಕ್ಷರ ಸಿಗಬೇಕು ಎಂಬುದು ಅವರ ಕನಸಾಗಿತ್ತು.ಶ್ರೀಮತಿ ಸಾವಿತ್ರಿಬಾಪುಲೆ ಅವರು ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಹೋರಾಡಿದರೆ,ಇಡೀ ಶೋಷಿತ ಸಮುದಾಯದ ಶಿಕ್ಷಣಕ್ಕೆ ಪಣತೊಟ್ಟವರು ಜೋತಿ ಬಾಪುಲೆ. ಹಾಗಾಗಿ ಈ ದೇಶದ ದಲಿತರು, ಹಿಂದುಳಿದವರ ಪಾಲಿಗೆ ಜೋತಿ ಬಾಪುಲೆ ದಂಪತಿಗಳು, ನಿಜವಾದ ಸರಸ್ವತಿಗಳಾಗಿದ್ದಾರೆ ಎಂದರು.
ಅಖಿಲ ಭಾರತ ಅಂಬೇಡ್ಕರ್ ಪ್ರಚಾರ ಸಮಿತಿಯ ಜಿಲ್ಲಾ ಉಪಾಧ್ಯಕ್ಷರಾದ ಡಿ.ಕೆ.ಇಂದ್ರಕುಮಾರ್ ಮಾತನಾಡಿ,ತಲೆ ತಲಾಂತರಗಳಿoದ ಅಕ್ಷರವನ್ನೇ ಕಾಣದ ಅನೇಕ ಸಮುದಾಯಗಳಿಗೆ ಅಕ್ಷರ ನೀಡುವ ಎದೆಗಾರಿಕೆ ತೋರಿದವರು ಜೋತಿ ಬಾಪುಲೆ ಅವರು,ಜೋತಿ ಬಾಪುಲೆ ದಂಪತಿಗಳನ್ನೇ ಗುರುಗಳಾಗಿ ಸ್ವೀಕರಿಸಿ ನಮ್ಮ ಸಂವಿಧಾನಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಅವರು,ಅವರ ಬದುಕಿನುದ್ದಕ್ಕೂ ಬಾಪುಲೆ ದಂಪತಿಗಳನ್ನು ಸಾಧನೆಯನ್ನು ಮೆಲುಕು ಹಾಕುತ್ತಾ, ಇತರರಿಗೆ ಮಾರ್ಗದರ್ಶನ ನೀಡುತ್ತಾರೆ.ಜೋತಿ ಬಾಪುಲೆ ಅವರು ದಲಿತರಿಗೆ, ಹಿಂದುಳಿದ ವರ್ಗಗಳಿಗೆ ಶಿಕ್ಷಣ ನೀಡದಿದ್ದರೆ ಇಂದು ಶೋಷಿತ ಸಮುದಾಯಗಳು ಈ ದೇಶದಲ್ಲಿ ಅಭಿವೃದ್ದಿಯಲ್ಲಿ ಪಾಲು ಪಡೆಯಲು ಸಾಧ್ಯವೇ ಆಗುತ್ತಿರಲಿಲ್ಲ ಎಂದರು.
ಈ ವೇಳೆ ಅಖಿಲ ಭಾರತ ಡಾ.ಅಂಬೇಡ್ಕರ್ ಪ್ರಚಾರ ಸಮಿತಿ ಕಾರ್ಮಿಕ ಘಟಕ ಜಿಲ್ಲಾಧ್ಯಕ್ಷ ಎಸ್.ನಾರಾಯಣ್, ಯುವ ಘಟಕದ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಮಾರುತಿ.ಸಿ, ತುಮಕೂರು ತಾಲೂಕು ಗೌರವಾಧ್ಯಕ್ಷ ಗಂಗಾಧರ್, ಜಿ.ಆರ್, ಕೊರಟಗೆರೆ ತಾಲೂಕು ಅಧ್ಯಕ್ಷ ಸಿದ್ದೇಶ್, ದಿಬ್ಬೂರು ಶ್ರೀನಿವಾಸ್, ಹನುಮಂತರಾಜು, ಟೈಲರ್ ಜಗದೀಶ್, ಗಿರೀಶ್, ಮಂಜನಾಥ್, ಲೋಕೇಶ್ ಮತ್ತಿತರರು ಉಪಸ್ಥಿತರಿದ್ದರು.
ಈ ದೇಶದ ಶೋಷಿತ ಸಮುದಾಯಗಳ ಎದೆಗೆ ಅಕ್ಷರ ಬಿತ್ತಿದ ಗುರುಗಳಾಗಿದ್ದಾರೆ
Leave a comment
Leave a comment