ಹಕ್ಕುಗಳ ಕಸಿಯುವ ಸರ್ಕಾರವನ್ನು ಸೋಲಿಸದೆ ಕಾರ್ಮಿಕ ವರ್ಗಕ್ಕೆ ಉಳಿಗಾಲವಿಲ್ಲ
ಕಾರ್ಮಿಕ ವರ್ಗ ತ್ಯಾಗ – ಬಲಿದಾನಗಳಿಂದ ಗಳಿಸಿರುವ ಕಾರ್ಮಿಕರ ಹಕ್ಕುಗಳನ್ನು ನಿರಂತರವಾಗಿ ಕಸಿದುಕೊಳ್ಳಲಾಗುತ್ತಿದೆ, ಎಂಟು ಗಂಟೆ ಕೆಲಸದ ಹಕ್ಕು ಕಸಿದು ೧೨ ಗಂಟೆ ದುಡಿಮೆಗೆ ಹಚ್ಚುವ ಅವೈಚಾರಿಕ ಕ್ರಮ ಸರ್ಕಾರಗಳು ಕೈಗೊಂಡಿವೆ , ಕಾರ್ಮಿಕರು ತಮ್ಮ ಆರ್ಥಿಕ ಬೇಡಿಕೆಯಷ್ಟೆ ಸೀಮಿತವಾಗದೆ ರಾಜಕೀಯ ಅರಿವು ಹೊಂದಿ ಕಾರ್ಮಿಕರ ಹಕ್ಕುಗಳನ್ನು ಕಸಿಯುತ್ತಿರುವ ಸರ್ಕಾರ ಸೊಲಿಸದೆ ಕಾರ್ಮಿಕ ವರ್ಗಕ್ಕೆ ಉಳಿಗಾಲವಿಲ್ಲ ಎಂದು ಹಿರಿಯ ಚಿಂತಕ ಪ್ರೋ; ಕೆ, ದೋರೈರಾಜು ಅವರು ಅಭಿಪ್ರಾಯ ಪಟ್ಟರು.
ಅವರು ದಿ; ೦೧-೦೫- ೨೦೨೩ ರಂದು ಬೆಳಿಗ್ಗೆ ೧೦-೩೦ ತುಮಕೂರು ನಗರದ ಟೌನ್ ಹಾಲ್ಬಳಿ ಸಿಐಟಿಯು ತುಮಕೂರು ಆಯೋಜಿಸಿದ್ದ ವಿಶ್ವದುಡಿಯುವ ಜನಗಳ ದಿನಾಚರಣೆ, ಮೇ ದಿನದ ಬಹಿರಂಗ ಸಭೆಯನ್ನು ಉದ್ಘಾಟಿಸಿ ಮಾತನಾಡುತಿದ್ದರು. ಮುಂದುವರಿದು ಮಾತನಾಡಿದ ಅವರು ಕಾರ್ಮಿಕ ವರ್ಗಕ್ಕೆ ಅನ್ಯಾಯಮಾಡುತ್ತಿರುವ ಸರ್ಕಾರಗಳು ಬಂಡವಾಳಗಾರರಿಗೆ ಪರ ನೀತಿಗಳುನ್ನು ಜಾರಿಗೊಳಿಸುತ್ತಿವೆ , ಕಾರ್ಮಿಕ ವರ್ಗವು ರಾಜಕಿಯ ಜಾಗೃತಿಪಡೆದು ಬದಲಾವಣೆ ತರಬೇಕಾಗಿದೆ ಎಂದರು.
ಪ್ರಾAತ ರೈತ ಸಂಘದ ಮುಂದಾಳು ದೊಡ್ಡನಂಜಪ್ಪ ಅವರು ಮಾತನಾಡಿ ಸರ್ಕಾರಗಳು ಜನತೆಯನ್ನು ದುಡಿವ ಕೊಣಗಳಂತೆ ಬಳಸುತ್ತಿವೆ . ಸಾರ್ವಜನಿಕ ಆಸ್ತಿಯನ್ನು ಮಾರಿ ತಾನು ಕಮಿಷನ್ ಪಡೆದು ಜನರ ಲೂಟಿಗೆ ಇಳಿದಿರುವ ಬಗ್ಗೆ ತಿಳಿದು ಇಂದ ರೈತ- ಕಾರ್ಮಿಕ ವಿರೋಧಿ ಸರ್ಕಾರಗಳನ್ನು ಮನೆಗೆ ಕಳೆಸಬೆಕಿದೆ ಎಂದರು.
ಮುನಿಸಿಪಲ್ ಕಾಮಿಕರ ಸಂಘದ ಪ್ರಕಾಶ್ ಮಾತನಾಡಿ ಗುತ್ತಿಗೆ ಕಾರ್ಮಿಕರ ಸಂಕಷ್ಟಗಳನ್ನು ಸರ್ಕಾರಗಳು ಕೇಳುತ್ತಿಲ್ಲ ಎಂದರು. ಕರ್ನಾಟಕ ರಾಜ್ಯ ಅಂಗನವಾಡಿ ನೌಕರರರ ಸಂಘ ತಾಲ್ಲುಕು ಅಧ್ಯಕ್ಷರಾದ ಗೌರಮ್ಮ ನವರು ಮಾತನಾಡಿ ಸ್ಕಿಮ್ ನೌಕರರಿಗೆ ವಿಪರೀತ ಕೆಲಸದ ಒತ್ತಡ ಹಾಕುವ ಅಧಿಕಾರಿಗಳು / ಸರ್ಕಾರ ಬದುಕಲು ಯೋಗ್ಯ ಕನಿಷ್ಟ ಕೂಲಿ ನೀಡದೆ , ಸಂಘಟಿತರಾಗಲು ಬಿಡದೆ ದಬ್ಬಾಳಿಕೆ ನಡೆಸಲಾಗುತ್ತಿದೆ ಎಂದು ಆರೋಪಿಸಿದರು.
ಕಸದ ಅಟೋ ಚಾಲಕರ ಸಂಘದ ರಾಮ ಚಂದ್ರಪ್ಪ, ಪೌರ ಕಾರ್ಮಿಕರ ಸಂಘ ಕುಮಾರ್, ಕರ್ನ ಲಿರ್ಸ್ ಕಾರ್ಮಿಕರ ಸಂಘದ ಉಮೇಶ್, ವಿ,ವಿ ಕಾಮಿಕರ ಸಂಘದ ಮಹಾಲಕ್ಷಮ್ಮ, ಸಿಐಟಿಯು ಜಿಲ್ಲಾ ಕಾರ್ಯಧರ್ಶಿ ಎನ್.ಕೆ. ಸುಬ್ರಮಣ್ಯ,. ಕಟ್ಟಡ ಕಾರ್ಮಿಕ ಸಂಘದ ಖಜಾಂಚಿ . ಕಲಿಲ್ , ಪುಟ್ ಪಾತ್ ವ್ಯಾಪಾರಿಗಳ ಸಂಘದ ರವಿ ,ಮತ್ತಿತರು ಮಾತನಾಡಿದರು