ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮಾಡದಿರುವ ಕಾರ್ಯ ಯಾವುದೂ ಇಲ್ಲ-ಶ್ರೀ ಗಂಗಾಧರಸ್ವಾಮೀಜಿ
ತುಮಕೂರು: ತಾಲ್ಲೋಕಿನ ಹೊನ್ನುಡಿಕೆ ವಲಯದ ಹೊಳಕಲ್ಲು ಗ್ರಾಮದಲ್ಲಿ ಇಂದು ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್ ವತಿಯಿಂದ ನಡೆದ ಸಾಮೂಹಿಕ ಶ್ರೀ ಸತ್ಯನಾರಾಯಣ ಸ್ವಾಮಿ ಪೂಜೆ ಹಾಗೂ ಧಾರ್ಮಿಕ ಸಭಾ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು ಕಾರ್ಯಕ್ರಮವನ್ನು ಮಾಕನಹಳ್ಳಿ ಮಠದ ಶ್ರೀ ಶ್ರೀ ಗಂಗಾಧರ ಮಹಾಸ್ವಾಮಿಗಳು ದೀಪ ಬೆಳಗುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿ ಆಶೀರ್ವಚನ ನೀಡಿದರು.
ಶ್ರೀ ಗಂಗಾಧರ ಸ್ವಾಮೀಜಿಗಳ ಮಾತನಾಡುತ್ತಾ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆಯ ಕಾರ್ಯಕ್ರಮಗಳ ಬಗ್ಗೆ,ಧರ್ಮಸ್ಥಳ ಸಂಘ ಮಾಡದಿರುವ ಕಾರ್ಯ ಯಾವುದೂ ಇಲ್ಲ ಪೂಜ್ಯ ಡಾ||ವೀರೇಂದ್ರಹೆಗ್ಗಡೆರವರು ಸಂಸ್ಥಯ ಮೂಲಕ ಗ್ರಾಮೀಣ ಭಾಗದ ಪ್ರತಿ ಮನೆಗಳನ್ನು ತಲುಪಿದ್ದಾರೆ,ಬಡವರನ್ನು ಮೇಲಕ್ಕೆ ಎತ್ತುತ್ತಿದ್ದಾರೆ,ಗ್ರಾಮಾಭಿವೃದ್ಧಿಯಲ್ಲಿ ಸಂಘದ ಪಾತ್ರ ಅತ್ಯಂತ ಹಿರಿದು,ಮಹಿಳೆಯರಿಗೆ ಆರ್ಥಿಕ ಸ್ವಾವಲಂಬನೆಯ ಜೊತೆ ಜೊತೆಗೆ ಸಾಮಾಜಿಕ,ಧಾರ್ಮಿಕ ಹೊಣೆಗಾರಿಕೆಯನ್ನು ಸಹ ನೀಡಿದೆ ಇದು ಸಮಾಜಕ್ಕೆ ಒಂದು ಗೌರವ,ತಂದೆ ತಾಯಿಗಳು ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡಿ ಅವರನ್ನು ಸಮಾಜದಲ್ಲಿ ದೊಡ್ಡ ವ್ಯಕ್ತಿಗಳಾಗಿ ಮಾಡಿ ಎಂದು ಹೇಳಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದ ಜಿಲ್ಲಾ ನಿರ್ದೇಶಕರಾದ ದಯಾಶೀಲರವರು ಉತ್ತಮ ಸಾಮಾಜಿಕ ಪರಿವರ್ತನೆಯಲ್ಲಿ ಮಹಿಳೆಯರ ಪಾತ್ರ ದೊಡ್ಡದು,ಇಂದಿನ ಮಕ್ಕಳಿಗೆ ತಂದೆ-ತಾಯಿಗಳು ಯಾವುದೇ ವಸ್ತುಗಳ ಮೌಲ್ಯ ತಿಳಿಯುವ ಮುಂಚೆಯೇ ಅವುಗಳನ್ನು ಅವರಿಗೆ ನೀಡುವುದರಿಂದ ಅವರ ಭವಿಷ್ಯದಲ್ಲಿ ಕಾಯುವ ತಾಳ್ಮೆ ಇರುವುದಿಲ್ಲ ಆದ್ದರಿಂದ ಪ್ರತಿ ವಸ್ತುವಿನ ಬೆಲೆಯೂ ಮಕ್ಕಳಿಗೆ ತಿಳಿಯಬೇಕು ಆಗಮಾತ್ರ ಜವಾಬ್ದಾರಿ ಹೆಚ್ಚುತ್ತದೆ ಎಂದು ಹೇಳಿದರು.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮಾಡದಿರುವ ಕಾರ್ಯ ಯಾವುದೂ ಇಲ್ಲ
Leave a comment
Leave a comment