ಕರ್ನಾಟಕ ರಾಜ್ಯ ಅಕ್ಷರ ದಾಸೋಹ ನೌಕರರ ಸಂಘ ಸಿಐಟಿಯುನ ಪದಾಧಿಕಾರಿಗಳು ಇಂದು ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ (ಆಡಳಿತ) ಹಾಲಸಿದ್ದಪ್ಪ ಪೂಜೇರಿ ಹಾಗೂ ಲೆಕ್ಕಾಧಿಕಾರಿ ನರಸಿಂಹಮೂರ್ತಿಯವರಿಗೆ ಬೇಡಿಕೆಗಳ ತಿಳುವಳಿಕೆ ಪತ್ರ ನೀಡಲಾಯಿತು.
ನಿವೃತ್ತಿ ಸೌಲಭ್ಯ, ವೇತನ ಹೆಚ್ಚಳ, ಎಸ್.ಡಿ.ಎಂ.ಸಿ. ಖಾತೆ ಬದಲಾವಣೆ ಮತ್ತು ಅವಧಿ ಹೆಚ್ಚಳದ ಘೋಷಣೆ ಮತ್ತು ಇತರೆ ಬೇಡಿಕೆಗಳ ಈಡೇರಿಕೆಗೆ ಅಕ್ಟೋಬರ್ ೩೦ ರಿಂದ ನಿರಂತರ ಪ್ರತಿಭಟನೆಯನ್ನು ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ನಡೆಯುತ್ತಿದೆ. ಅದರೆ ಸರ್ಕಾರ ಮನವಿ ಸ್ವೀಕರಿಸುವುದಕ್ಕೆ ಮಾತ್ರ ಸೀಮಿತವಾಗಿದೆ. ದುಡಿಯುವ ಮಹಿಳೆಯರ ಸಮಸ್ಯೆ ಪರಿಹಾರ ಮಾಡುವ ರಾಜಕೀಯ ಇಚ್ಛಾಶಕ್ತಿ ಇಲ್ಲ. ಆದ್ದರಿಂದ ಸರ್ಕಾರ ತಕ್ಷಣ ಬಿಸಿಯೂಟ ನೌಕರರ ಬೇಡಿಕೆ ಈಡೇರಿಸದಿದ್ದರೆ ನವೆಂಬರ್ ೧೬ ರಿಂದ ರಾಜ್ಯಾದಾದ್ಯಂತ ಬಿಸಿ ಊಟವನ್ನು ಸ್ಥಗಿತಗೊಳಿಸಿ ಎರಡನೇ ಹಂತದ ಅನಿರ್ಧಿಷ್ಟಾವಧಿ ಚಳುವಳಿಯನ್ನು ನಡೆಸುವ ಬಗ್ಗೆ ತುಮಕೂರು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ಮೂಲಕ ಸರ್ಕಾರಕ್ಕೆ ತಿಳುವಳಿಕೆ ಪತ್ರ ನೀಡಲಾಯಿತು.
ಅಕ್ಷರ ದಾಸೋಹ ನೌಕರರ ಸಂಘದ ಜಿಲ್ಲಾ ಅಧ್ಯಕ್ಷೆ ಕೆಂಚಮ್ಮ ಕಾರ್ಯದರ್ಶಿ ನಾಗರತ್ನ, ಸಹ ಕಾರ್ಯದರ್ಶಿ ನಾಗಮ್ಮ ಸಿ.ಐ.ಟಿ.ಯು ಜಿಲ್ಲಾ ಉಪಾಧ್ಯಕ್ಷ ಬಿ. ಉಮೇಶ್ ಉಪಸ್ಥಿತರಿದ್ದರು.
ಮಹಿಳೆಯರ ಸಮಸ್ಯೆ ಪರಿಹಾರ ಮಾಡುವ ರಾಜಕೀಯ ಇಚ್ಛಾಶಕ್ತಿ ಇಲ್ಲ.
Leave a comment
Leave a comment