ಸಹಕಾರ ಅಗತ್ಯ.ರೈತರ ಅನುಭವಿಸುತ್ತಿರುವ ಸಮಸ್ಯೆಗಳಿಗೆ ಪರಿಹಾರ ದೊರಯಬೇಕೆಂಬುದೇ ಈ ಕಾರ್ಯಕ್ರಮದ ಉದ್ದೇಶವಾಗಿದೆ.ಇದರ ಪ್ರಯೋಜನ ಪಡೆದುಕೊಳ್ಳಲು ಮುಂದಾಗಿ ಎಂದು ಮುರುಳಿಧರ ಹಾಲಪ್ಪ ನುಡಿದರು.
ಕಾಂಗ್ರೆಸ್ ಪಕ್ಷದ ರಾಜ್ಯ ವಕ್ತಾರ ಸೂರ್ಯ ಮುಕುಂದರಾಜ್ ಮಾತನಾಡಿ,ಹಾಲಪ್ಪ ಪ್ರತಿಷ್ಠಾನದವತಿಯಿಂದ ರೈತರು ಮತ್ತು ಅಧಿಕಾರಿಗಳನ್ನು ಬೆಸೆಯುವ ರೈತರೊಂದಿಗೆ ನಾವು ಕಾರ್ಯಕ್ರಮ ಉತ್ತಮವಾದುದ್ದು.ಕಾರ್ಯಕ್ರಮಕ್ಕೆ ಬರುವ ರೈತರಿಗೆ, ರೈತ ಮಹಿಳೆಯರಿಗೆ ಸರಕಾರದಿಂದ ದೊರೆಯುವ ಸವಲತ್ತುಗಳ ಬಗ್ಗೆ ಜನರಿಗೆ ತಿಳಿಸುವ ಮೂಲಕ ಸರಕಾರದ ಯೋಜನೆ ಗಳನ್ನು ಜನರು ಉಪಯೋಗಿಸಿಕೊಳ್ಳಲು ಪ್ರೇರಣೆ ನೀಡಿದಂತಾಗುತ್ತದೆ.ಈ ಬಗ್ಗೆ ಹೆಚ್ಚಿನ ಪ್ರಚಾರವನ್ನು ಸಂಬAಧ ಪಟ್ಟ ಇಲಾಖೆಗಳು ಕೈಗೊಳ್ಳಬೇಕು.ಕೆಲವೊಂದು ಸಂದರ್ಭದಲ್ಲಿ ಸರಕಾರ ಜಾರಿಗೆ ತಂದ ಯೋಜನೆಗಳ ಬಗ್ಗೆ ಸ್ಥಳೀಯ ಜನಪ್ರತಿನಿಧಿಗಳು,ಮುಖಂಡರುಗಳಿಗೆ ಸಮರ್ಪಕ ಮಾಹಿತಿ ಇರುವುದಿಲ್ಲ.ಇಲಾಖೆಗಳಲ್ಲಿ ಪ್ರಚಾರಕೋಸ್ಕರ ಮುದ್ರಣ ವಾದ ಕರಪತ್ರಗಳು ಲೆಕ್ಕದಲ್ಲಿದ್ದರೆ ಸಾಲದು ಜನರಿಗೆ ತಲುಪಬೇಕು.ರೈತರಿಗೆ ಸಂಬAಧಿಸಿದAತೆ ಹೊಸ ಕಾಯ್ದೆಗಳು ಬಂದಿವೆ. ರೈತರ ಹೊಲ, ಗದ್ದೆಗಳಿಗೆ ಹೋಗುವ ಬಂಡಿ ದಾರಿಗೆ ಯಾರು ಅಡ್ಡಿಪಡಿಸುವಂತಿಲ್ಲ. ಈ ಬಗ್ಗೆ ಮತ್ತೊಂದು ಸಭೆಯಲ್ಲಿ ಸಂಪೂರ್ಣ ವಿವರ ನೀಡುವ ಭರವಸೆ ನೀಡಿದರು.
ತೋಟಗಾರಿಕಾ ಇಲಾಖೆ ಸಹಾಯಕ ನಿರ್ದೇಶಕ ದರ್ಶನ್ ಮಾತನಾಡಿ,ಸರಕಾರದಿಂದ ಹನಿನೀರಾವರಿಗೆ ಅಡಿಕೆ ಬೆಳೆ ಹೊರತು ಪಡಿಸಿ,ಇತರೆ ತೋಟಗಾರಿಕಾ ಬೆಳೆಗಳಿಗೆ ಸಾಮಾನ್ಯವರ್ಗಕ್ಕೆ ಶೇ೭೫,ಎಸ್ಸಿ,ಎಸ್ಟಿಗೆ ಶೇ೯೦ರಷ್ಟು ಸಬ್ಸಿಡಿ ನೀಡಲಾ ಗುತ್ತಿದೆ.ಅಲ್ಲದೆ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಕೃಷಿ ಹೊಂಡ,ಬದು ನಿರ್ಮಾಣ ಸೇರಿದಂತೆ ಹಲವಾರು ಯೋಜನೆ ಗಳಿಗೆ ಸಬ್ಸಿಡಿ ಹಣ ನೀಡಲಾಗುತ್ತಿದೆ.ಅನ್ಲೈನ್ ಮೂಲಕ ಅರ್ಜಿ ಸಲ್ಲಿಸಿ,ಆಯ್ಕೆಯಾದವರಿಗೆ ಸರಕಾರದ ಸವಲತ್ತುಗಳು ದೊರೆಯಲಿವೆ ಎಂದರು.
ನಬಾರ್ಡ್ ಅಧಿಕಾರಿ ಶ್ರೀಮತಿ ಕೀರ್ತಿಪ್ರಭ ಮಾತನಾಡಿ,ನಬಾರ್ಡ ರೈತರಿಗೆ ನೇರವಾಗಿ ಹಣಕಾಸಿನ ನೆರವು ನೀಡದಿದ್ದರೂ ಬ್ಯಾಂಕುಗಳ ಮೂಲಕ ವಿವಿಧ ಯೋಜನೆಗಳಿಗೆ ಧನ ಸಹಾಯ ಮಾಡಲಿದೆ.ಅಲ್ಲದೆ ಕೇಂದ್ರ ಸರಕಾರ ಅಟಲ್ ಭೀಮಾ ವಿಮಾ ಯೋಜನೆ ಸೇರಿದಂತೆ ಹಲವು ಯೋಜನೆಗಳ ಮಾನಿಟರಿಂಗ್ ಮಾಡಲಿದೆ.ಪಹಣಿ ಇರುವ ಪ್ರತಿಯೊಬ್ಬ ರೈತನು ಕೇಂದ್ರ ಸರಕಾರದ ೧.೬೦ ಲಕ್ಷ ರೂ ಬೆಳೆ ಸಾಲವನ್ನು ಕಿಸಾನ್ ಕ್ರೆಡಿಟ್ ಕಾರ್ಡು ಮೂಲಕ ಪಡೆಯಲು ಆರ್ಹನಾಗಿರುತ್ತಾರೆ. ಹೈನುಗಾರಿಕೆ, ಕೃಷಿ ಚಟುವಟಿಕೆಗಳ ಘಟಕ ವೆಚ್ಚದ ಮೇಲೆ ೨ ಲಕ್ಷ ರೂ ವಿಮೆ ಕೂಡ ಇದೆ. ಇದರ ಲಾಭ ಪಡೆದುಕೊಳ್ಳಬೇಕೆಂದು ಮನವಿ ಮಾಡಿದರು.
ಬೆಸ್ಕಾಂನಿAದ ಪ್ರವೀಣಕುಮಾರ್.ಟಿ.ಎಸ್.,ಕೃಷಿ ಇಲಾಖೆಯ ಕುರಿತು ಸಹಾಯಕ ನಿರ್ದೇಶಕರಾದ ಲೇಪಾಕ್ಷಿ,ರೇಷ್ಮೆ ಬೆಳೆ ಕುರಿತು ಡಾ.ಶಿವಪ್ರಕಾಶ್,ಅರಣ್ಯ ಇಲಾಖೆಯ ಅನಿಲ್ಕುಮಾರ್,ಪಶುಸಂಗೋಪನೆ ಕುರಿತು ಡಾ.ಕಾಂತರಾಜು ಅವರುಗಳು ರೈತರೊಂದಿಗೆ ಸಂವಾದ ನಡೆಸಿ, ರೈತರ ಪ್ರಶ್ನೆಗಳಿಗೆ ಉತ್ತರ ನೀಡಿದರು.
ಈ ವೇಳೆ ಮುಖಂಡರಾದ ಹೆಬ್ಬೂರು ಶ್ರೀನಿವಾಸಮೂರ್ತಿ, ವೆಂಕಟೇಶ್.ಕೆ.ಜಿ, ಚೇತನ್, ಗೋವಿಂದರಾಜು,ಅಭಿ, ನಾರಾಯಣಿ,ಅಶ್ವತಪ್ಪ, ರಂಗಶಾಮಯ್ಯ,ಸುರೇಶ್,ಅಲ್ಲು, ಶಫಿ, ಗ್ರಾಮಪಂಚಾಯಿತಿ ಅಧ್ಯಕ್ಷ ಸ್ವಾಮಿ, ಸದಸ್ಯ ಜಹೀರ್ಅಬ್ಬಾಸ್ ಮತ್ತಿತರರು ಪಾಲ್ಗೊಂಡಿದ್ದರು.
ಸರಕಾರದ ಸವಲತ್ತುಗಳನ್ನು ಜನರಿಗೆ ತಲುಪಿಸುವ ನಿಟ್ಟಿನಲ್ಲಿ ರಾಜಕಾರಣ ಬೇಡ
Leave a comment
Leave a comment