ತುಮಕೂರು: ಪ್ರತಿವರ್ಷ ಪ್ರಪಂಚದಲ್ಲಿ ೨೩೪ ಮೆಟ್ರಿಕ್ ಟನ್ನಷ್ಟು ಪ್ಲಾಸ್ಟಿಕ್ ಭೂಮಿಯನ್ನು ಸೇರುತ್ತಿದ್ದರೂ ಒಟ್ಟೂ ಪ್ಲಾಸ್ಟಿಕ್ ಉತ್ಪಾದನೆಯಲ್ಲಿ ಶೇ.೯ ರಷ್ಟು ಮಾತ್ರ ಪುನರ್ ಬಳಕೆಯಾಗುತ್ತಿರುವುದು ಭವಿಷ್ಯದ ದೃಷ್ಠಿಯಿಂದ ಅಪಾಯಕಾರಿಯಾಗಿದೆ ಎಂದು ಸಿದ್ಧಗಂಗಾ ಆಸ್ಪತ್ರೆ ನಿರ್ದೇಶಕ ಡಾ.ಎಸ್.ಪರಮೇಶ್ ತಿಳಿಸಿದರು.ಅವರು ವಿಶ್ವ ಪರಿಸರ ದಿನದ ಅಂಗವಾಗಿ ಸಿದ್ಧಗಂಗಾ ಆಸ್ಪತ್ರೆ ಆವರಣದಲ್ಲಿ ಗಿಡನೆಟ್ಟು ಮಾತನಾಡಿ ಈ ಬಾರಿ ವಿಶ್ವ ಆರೋಗ್ಯ ಸಂಸ್ಥೆ ಪ್ಲಾಸ್ಟಿಕ್ ಮಾಲಿನ್ಯವನ್ನು ನಿಯಂತ್ರಿಸಲು ಕರೆ ಕೊಟ್ಟಿದೆ. ಕೋವಿಡ್ ಸಮಯವೊಂದರಲ್ಲಿಯೇ ೮.೪ ಮಿಲಿಯನ್ ಟನ್ ನಷ್ಟು ಪ್ಲಾಸ್ಟಿಕ್ ತ್ಯಾಜ್ಯ ಉತ್ಪಾದನೆಯಾಗಿದ್ದರೆ ಪ್ರತಿವರ್ಷ ೮ ಮೆಟ್ರಿಕ್ ಟನ್ನಷ್ಟು ತ್ಯಾಜ್ಯ ಸಮುದ್ರವನ್ನು ಸೇರಿ ವಾರ್ಷಿಕ ಲಕ್ಷಕ್ಕೂ ಹೆಚ್ಚು ಜಲಚರ ಜೀವಿಗಳ ಸಾವಿಗೆ ಕಾರಣವಾಗುತ್ತಿದೆ. ಪ್ಲಾಸ್ಟಿಕ್ ಮಾರಕ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ನಾವು ಪ್ರತಿನಿತ್ಯ ಪ್ಲಾಸ್ಟಿಕ್ ರಹಿತ ಜೀವನವನ್ನು ನಡೆಸಬೇಕು ಎಂದರು. ಸಿದ್ಧಗಂಗಾ ಮೆಡಿಕಲ್ ಕಾಲೇಜು ಪ್ರಾಚಾರ್ಯರಾದ ಡಾ.ಶಾಲಿನಿ ಮಾತನಾಡಿ ಜೀವಸಂಕುಲದ ಮೇಲೆ ಸಂಪೂರ್ಣ ಅಧಿಕಾರವಿದ್ದರೂ ಹೇಗೆ ಪ್ರಕೃತಿ ಮಾನವನ ಜೊತೆ ಸೌಜನ್ಯದಿಂದ ವರ್ತಿಸುತ್ತದೆಯೋ ಹಾಗೇ ಮನುಷ್ಯನ ಕೂಡ ಪ್ರಕೃತಿಯನ್ನು ಪೂಜಿಸಿ, ಸೌಜನ್ಯದಿಂದ ವರ್ತಿಸಿ ಮಾಲಿನ್ಯ ಮುಕ್ತ ಪರಿಸರ ನಿರ್ಮಾಣಕ್ಕೆ ಮುಂದಾಗಬೇಕು. ಪ್ರತಿನಿತ್ಯವೂ ನಾವು ಪ್ರಕೃತಿಯ ದಿನವನ್ನು ಆಚರಿಸದರೇ ಮಾತ್ರ ಪ್ರಕೃತಿ ನಮ್ಮ ಭವಿಷ್ಯವನ್ನು ಸುರಕ್ಷಿತವಾಗಿ ರೂಪಿಸುತ್ತದೆ ಎಂದರು. ಮಾತನಾಡಿ ಸಿದ್ಧಗಂಗಾ ಆಸ್ಪತ್ರೆ ಸೂಪರ್ ಸ್ಪೆಷಾಲಿಟಿ ವಿಭಾಗದ ಮುಖ್ಯಸ್ಥ ಹಾಗೂ ಹೃದ್ರೋಗ ತಜ್ಞ ಡಾ.ಭಾನುಪ್ರಕಾಶ್ ಹೆಚ್.ಎಂ. ಮಾತನಾಡಿ ಸಿದ್ಧಗಂಗಾ ಆಸ್ಪತ್ರೆ ಪ್ರಕೃತಿಯ ರಕ್ಷಣೆಗಾಗಿ ವಿದ್ಯಾರ್ಥಿಗಳಿಗೆ ಪರಿಸರದ ಅರಿವು ಮೂಡಿಸಿ ತುಮಕೂರು ಗ್ರಾಮಾಂತರ ಭಾಗದಲ್ಲಿ ೩೦೦ ಕ್ಕೂ ಹೆಚ್ಚು ಗಿಡಗಳನ್ನು ನಡೆಸಿದ್ದೇವೆ. ವಿದ್ಯಾರ್ಥಿಗಳಿಗೆ ವೈದ್ಯಕೀಯ ಶಿಕ್ಷಣದ ಜೊತೆಗೆ ಪ್ರಕೃತಿ ಶಿಕ್ಷಣ ನಮ್ಮ ಸಂಸ್ಥೆಯ ಗುರಿಯಾಗಿದೆ ಎಂದರು. ಸಿದ್ಧಗಂಗಾ ಮೆಡಿಕಲ್ ಕಾಲೇಜು ಮೇಲ್ವಿಚಾರಕ ಡಾ.ನಿರಂಜಮೂರ್ತಿ, ಸಿಇಓ ಡಾ.ಸಂಜೀವ್ಕುಮಾರ್, ಪಿಆರ್ಓ ಕಾಂತರಾಜು ಹಾಗೂ ಆಸ್ಪತ್ರೆ ಸಿಬ್ಬಂದಿ ಉಪಸ್ಥಿತರಿದ್ದರು.