ಐಬಿಎಸ್ಎ ಮಹಿಳಾ ಅಂದರ ಕ್ರಿಕೆಟ್ ತಂಡ ಐತಿಹಾಸಿಕ ಜಯ, ತುಮಕೂರಿನ ಯುವತಿ ಅಂತರಾಷ್ಟ್ರೀಯ ಮಟ್ಟದಲ್ಲಿ ಬೆಳೆದದ್ದು ಹೇಗೆ.
ತುಮಕೂರು/ ಬರ್ಮಿಂಗ್ಹ್ಯಾಮ್ – ಶನಿವಾರ ಬರ್ನಿಂಗ್ ಹ್ಯಾಮ್ ನಲ್ಲಿ ನಡೆದ ಅಂತರಾಷ್ಟ್ರೀಯ ಅಂದರ ಕ್ರಿಕೆಟ್ ಒಕ್ಕೂಟ( IಃSಂ ) – ೨೦೨೩ ವಿಶ್ವ ಗೇಮ್ಸ್ ನಲ್ಲಿ ಭಾರತ ಫೈನಲ್ ಮ್ಯಾಚ್ ನಲ್ಲಿ ಆಸ್ಟ್ರೇಲಿಯವನ್ನು ಸೋಲಿಸಿ ದ್ದು ಭಾರತೀಯ ಮಹಿಳಾ ಅಂದರ ಕ್ರಿಕೆಟ್ ತಂಡ ಶನಿವಾರ ಚಿನ್ನದ ಪದಕ ಗೆಲ್ಲುವ ಮೂಲಕ ಐತಿಹಾಸಿಕ ಪುಟದಲ್ಲಿ ದಾಖಲಾಗಿದೆ.
ಭಾರತ ಮಹಿಳಾ ಅಂದರ ಕ್ರಿಕೆಟ್ ತಂಡ ವಿಶ್ವ ಕ್ರೀಡಾಕೂಟದಲ್ಲಿ ತಮ್ಮ ಅದ್ಭುತ ಪ್ರದರ್ಶನದಿಂದ ಎಲ್ಲರ ಮನ ಗೆದ್ದಿದ್ದು ವುಮೆನ್ ಇನ್ ಬ್ಲೂ ಪಂದ್ಯಾವಳಿಯಲ್ಲಿ ತಮ್ಮ ಎಲ್ಲಾ ಲೀಗ್ ಪಂದ್ಯಗಳನ್ನು ಭಾರತ ಗೆದ್ದು ಬಿಗಿದ್ದು ಕೊನೆ ಫೈನಲ್ ಪಂದ್ಯದಲ್ಲೂ ಸಹ ಆಸ್ಟ್ರೇಲಿಯವನ್ನು ಮಣಿಸಿ ಜಯಗಳಿಸಿದ್ದು ಮಹಿಳಾ ಅಂದರ ಕ್ರಿಕೆಟ್ ಟೂರ್ನಿ ಜಯದ ಹಿನ್ನಲೆಯಲ್ಲಿ ರಾಷ್ಟ್ರಪತಿ ಸೇರಿದಂತೆ ಹಲವು ಗಣ್ಯರು ಮಹಿಳಾ ಕ್ರಿಕೆಟ್ ತಂಡವನ್ನು ಅಭಿನಂದಿಸಿದ್ದಾರೆ
ತುಮಕೂರಿನ ಯುವತಿ ಅಂತರಾಷ್ಟ್ರೀಯ ಮಟ್ಟದಲ್ಲಿ ಗುರುತು
ಇನ್ನು ಶನಿವಾರ ಬರ್ನಿಂಗ್ ಹ್ಯಾಮ್ ನಲ್ಲಿ ನಡೆದಿದ್ದ ಫೈನಲ್ ಪಂದ್ಯಾವಳಿಯಲ್ಲಿ ಭಾರತ ತಂಡ ಜಯಗಳಿಸಿದ್ದು ತಂಡದಲ್ಲಿ ಉತ್ತಮ ಪ್ರದರ್ಶನ ನೀಡಿರುವ ತುಮಕೂರು ಯುವತಿ ದೀಪಿಕಾ ಟಿ. ಸಿ ಅಂತರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡು ಫೈನಲ್ ಪಂದ್ಯಾವಳಿಯಲ್ಲಿ ಆಡುವ ಮೂಲಕ ತುಮಕೂರು ಜಿಲ್ಲೆ ಹಾಗೂ ಕರ್ನಾಟಕಕ್ಕೆ ಮೆರುಗು ತಂದಿದ್ದಾಳೆ.
ಇನ್ನು ಮಹಿಳಾ ಕ್ರಿಕೆಟರ್ ( bಟiಟಿಜ ಛಿಡಿiಞeಣeಡಿ) ದೀಪಿಕಾ ಟಿ. ಸಿ ಮೂಲತಹ ತುಮಕೂರು ಜಿಲ್ಲೆ, ಸಿರಾ ತಾಲೂಕಿನ ಪಟ್ಟನಾಯಕನಹಳ್ಳಿ ಬಳಿಯ ತಂಬಾಳ ಗೊಲ್ಲರಹಟ್ಟಿಯ ದೀಪಿಕಾ ಹುಟ್ಟಿನಿಂದಲೂ ಕಣ್ಣಿನ ಸಮಸ್ಯೆಯಿಂದ ಬಳಲುತ್ತಿದ್ದರು ಆದರೆ ಏನಾದರೂ ಸಾಧಿಸಬೇಕು ಎನ್ನುವ ಹಂಬಲ ಹಾಗೂ ಛಲ ತೊಟ್ಟ ಯುವತಿ ಆಯ್ಕೆ ಮಾಡಿಕೊಂಡಿದ್ದು ಮಾತ್ರ ಕ್ರಿಕೆಟ್ ಕ್ಷೇತ್ರ.
ಅದರಲ್ಲೇ ಏನಾದರೂ ಮಾಡಿ ಹೆಸರು ಗಳಿಸಬೇಕು ಎಂದು ಹಗಲಿರುಳು ಶ್ರಮ ಹಾಕಿರುವ ದೀಪಿಕಾ ಕೊನೆಗೂ ಅಂತರಾಷ್ಟ್ರೀಯ ಕ್ರಿಕೆಟ್ ತಂಡದಲ್ಲಿ ಸ್ಥಾನ ಪಡೆದುಕೊಂಡ ಅವರು ಭಾರತದ ಮೊದಲ ಅಂದರ ಮಹಿಳಾ ಕ್ರಿಕೆಟ್ ತಂಡಕ್ಕೆ ಆಯ್ಕೆಯಾಗುವ ಮೂಲಕ ಗಮನ ಸೆಳೆದಿದ್ದರು.
ಮಹಿಳಾ ಅಂದರ ಕ್ರಿಕೆಟ್ ತಂಡ ಐತಿಹಾಸಿಕ ಜಯ
Leave a comment
Leave a comment