ತುಮಕೂರು:ಮಹಾ ಶಿವಶರಣ ಶ್ರೀಹರಳಯ್ಯ ಗುರುಪೀಠದವತಿಯಿಂದ ೧೨ನೇ ಶತಮಾನದ ಶರಣರ ಕಲ್ಯಾಣ ಕ್ರಾಂತಿ ವಿಜಯೋತ್ಸವ,ಶ್ರೀಮಹಾಶಿವಶರಣ ಹರಳಯ್ಯ ಚಲನಚಿತ್ರದ ಟ್ರೆöÊಲರ್ ಬಿಡುಗಡೆ,ಪ್ರತಿಭಾಪುರಸ್ಕಾರ,ಪ್ರಶಸ್ತಿ ಪ್ರಧಾನ ಕಾರ್ಯಕ್ರಮವನ್ನು ನವೆಂಬರ್ ೨೮ರ ಮಂಗಳವಾರ ಚಿತ್ರದುರ್ಗ ಜಿಲ್ಲೆ,ಹಿರಿಯೂರು ತಾಲೂಕು ಐಮಂಗಲದಲ್ಲಿರುವ ಶ್ರೀಮಹಾ ಶಿವಶರಣ ಹರಳಯ್ಯ ಗುರುಪೀಠದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಹರಳಯ್ಯ ಗುರುಪೀಠದ ಶ್ರೀಬಸವಹರಳಯ್ಯ ಸ್ವಾಮೀಜಿ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು,ಮಹಾಶಿವಶರಣ ಹರಳಯ್ಯ ಗುರುಪೀಠದವತಿಯಿಂದ ಪ್ರತಿವರ್ಷ ಕಲ್ಯಾಣ ಕ್ರಾಂತಿ ಕಾರ್ಯಕ್ರಮ ಆಯೋಜಿಸಿಕೊಂಡು ಬರಲಾಗುತ್ತಿದೆ.ಸಮಾರಂಭದಲ್ಲಿ ಶ್ರೀಹರಳಯ್ಯ ಪ್ರಶಸ್ತಿ,ಮಧುವರಸ ಪ್ರಶಸ್ತಿ, ಪ್ರತಿಭಾಪುರಸ್ಕಾರ ಹಾಗೂ ಸಂಗೀತ ಕಾರ್ಯಕ್ರಮದ ಜೊತೆಗೆ, ನವೆಂಬರ್ ೨೭,೨೮ ಮತ್ತು ೨೯ ರಂದು ಸಾಣೇನಹಳ್ಳಿಯ ಶಿವಸಂಚಾರ ನಾಟಕ ತಂಡದಿAದ ನಾಟಕಗಳ ಪ್ರದರ್ಶನ ಇರುತ್ತದೆ ಎಂದರು.
ಕಲ್ಯಾಣ ಕ್ರಾಂತಿಯ ವಿಜಯೋತ್ಸವ ಕಾರ್ಯಕ್ರಮದ ವೇಳೆ ಸಮಾನತೆ ಮತ್ತು ಸತ್ಯಕ್ಕಾಗಿ ದುಡಿದ ಶರಣರಿಗೆ ಹರಳಯ್ಯ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ.ಈ ಬಾರಿ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷರಾಗಿರುವ ಗೋ.ರು.ಚನ್ನಬಸಪ್ಪ ಅವರಿಗೆ ನೀಡಲಾಗುತ್ತಿದೆ. ಪ್ರಶಸ್ತಿಯೂ ೨೫ ಸಾವಿರ ರೂ ನಗದು ಮತ್ತು ಪ್ರಶಸ್ತಿ ಫಲಕ ಹೊಂದಿದೆ.ಕಳೆದ ಬಾರಿ ನಾದಬ್ರಹ್ಮ ಹಂಸಲೇಖ ಅವರಿಗೆ ನೀಡಿ ಗೌರವಿಸಲಾಗಿತ್ತು.ಅಲ್ಲದೆ ಈ ಬಾರಿ ಪ್ರಥಮವಾಗಿ,ಅಂತರಜಾತಿ ವಿವಾಹಗಳಿಗೆ ೧೨ನೇ ಶತಮಾನದಲ್ಲಿಯೇ ಪ್ರೋತ್ಸಾಹ ನೀಡಿದ ಮಧುವರಸ ಹೆಸರಿನಲ್ಲಿ ಮತ್ತೊಂದು ಪ್ರಶಸ್ತಿ ನೀಡುತ್ತಿದ್ದು,ಅರವಿಂದ ಜತ್ತಿ ಅವರಿಗೆ ಈ ಪ್ರಶಸ್ತಿಯನ್ನು ನೀಡಲಾಗುತ್ತಿದೆ ಎಂದು ಶ್ರೀಬಸವ ಹರಳಯ್ಯ ಸ್ವಾಮೀಜಿ ನುಡಿದರು.
ಶತಮಾನದ ಶರಣರ ಕಲ್ಯಾಣ ಕ್ರಾಂತಿ ವಿಜಯೋತ್ಸವ
Leave a comment
Leave a comment