,
ತುಮಕೂರು: ನಗರದ ಶ್ರೀ ಸಿದ್ಧಾರ್ಥ ಎಂಜಿನಿಯರoAಗ್ ಕಾಲೇಜಿನ ಕ್ಯಾಂಪಸ್ನಲ್ಲಿ ಏರ್ಪಡಿಸಿದ್ದ ಎರಡು ದಿನಗಳ ಕಲೋತ್ಸವ-24ರ ಉದ್ಘಾಟನಾ ಸಮಾರಂಭದಲ್ಲಿ ವರಣನ ಸಿಂಚನದ ನಡುವೆ ಗಾಯಕರ ಗಾನಸುಧೆ ಮೆರಗು ತಂದರೆ, ಸಮಾರೋಪ ಸಮಾರಂಭದಲ್ಲಿ ವಿದ್ಯಾರ್ಥಿಗಳ ಕಲಾಕೌಶಲ್ಯ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳ ಕಲಾವೈಭವದ ಅದ್ದೂರಿಯಾಗಿ ಪ್ರದರ್ಶನದೊಂದಿಗೆ ಮುಕ್ತಾಯಗೊಂಡಿತು.
ಕ್ಯಾಂಪಸ್ನ ಬಯಲು ರಂಗಮoದಿರದಲ್ಲಿ ಏರ್ಪಟ್ಟ ಕಾರ್ಯಕ್ರಮಕ್ಕೆ ವರಣನ ಆಗಮನ ಅಡ್ಡಿಪಡಿಸಿದರೂ ರಾಗಸುಧೆ ಮಾತ್ರ ನಿಲ್ಲಲಿಲ್ಲ. ಒಳಾಂಗಣ ಸಭಾಂಗಣದಲ್ಲಿ ನಡೆದ ಸಮಾರೋಪ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಗಾಯಕ ಅಶ್ವಿನ್ ಶರ್ಮಾ ಮಾತನಾಡಿ,
ಶೈಕ್ಷಣಿಕ ಪ್ರಗತಿಯ ಜೊತೆಗೆ ಸಾಂಸ್ಕೃತಿಕ ಕಲಾರುಚಿಯೂ ಇರಬೇಕು. ವಿದ್ಯಾರ್ಥಿಗಳು ವಿವಿಧ ಕಲೆಯಲ್ಲಿ ತಮ್ಮ ಪ್ರತಿಭೆ ಪ್ರದರ್ಶನ ಮಾಡಲು ಕಾಲೇಜಿನಲ್ಲಿ ಸೂಕ್ತ ವೇದಿಕೆಗಳಿರುತ್ತವೆ. ಅದನ್ನು ಸೂಕ್ತವಾಗಿ ಬಳಸಿಕೊಳ್ಳಿ. ‘ಸ್ಟೂಡೆಂಟ್ ಲೈಪ್ ಈಸ್ ಗೋಲ್ಡ್ ಲೈಫ್’ ಎನ್ನುವುದನ್ನು ಮರೆಯಬೇಡಿ ಎಂದು ಪ್ರೋತ್ಸಾಹಿಸಿ ಮಾತನಾಡಿದರು. ನಂತರ ಕನ್ನಡದ ಜನಪ್ರಿಯ ಗೀತೆಗಳನ್ನು ಹಾಡಿ, ವಿದ್ಯಾರ್ಥಿಗಳನ್ನು ರಂಜಿಸಿದರು.
ಸಾಹೇ ವಿವಿಯ ಉಪಕುಲಪತಿ ಡಾ.ಕೆ.ಬಿ.ಲಿಂಗೇಗೌಡ ಮಾತನಾಡಿ, ಸಾಂಸ್ಕೃತಿಕ ಕಾರ್ಯಕ್ರಮಗಳ ಮುಂದೆ ಮಾತಿನ ಹರಟೆಗೆ ಮಹತ್ವವಿರುವುದಿಲ್ಲ. ಮನಸ್ಸಿಗೆ ಮುದ ನೀಡುವ ಕಲಾ ಪ್ರದರ್ಶನಗಳು ಮತ್ತು ಸಂಗೀತದ ಆಸ್ವಾದವನ್ನು ಜೀವನದಲ್ಲಿ ಸವಿಯುವುದು ಅಗತ್ಯ ಎಂದರು.
ಪ್ರಾoಶುಪಾಲರಾದ ಡಾ.ಎಂ.ಎಸ್.ರವಿಪ್ರಕಾಶ್, ಸಾಹೆ ರಿಜಿಸ್ಟಾçರ್ ಡಾ.ಎಂ.ಝಡ್.ಕುರಿಯನ್, ಡೀನ್ ಹಾಗೂ ಕಲೋತ್ಸವ ಆಚರಣಾ ಸಮಿತಿ ಅಧ್ಯಕ್ಷರಾದ ಡಾ.ರೇಣುಕಾಲತಾ, ವಿದ್ಯಾರ್ಥಿ ಸಂಘದ ಪ್ರತಿನಿಧಿಗಳಾದ ವಿಷ್ಣು ನಾಯಕ, ಕಾರ್ತಿಕ್, ಲಿಖಿತ್, ಮೇಘನ್ ಗೌಡ ಯಶವಂತ್, ವೈಷ್ಣವಿ, ಚೈತ್ರ, ವೀರಶೇಖರ್ ಸ್ವಾಮಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.