ತುಮಕೂರು, ಅ.31- ಸುಪ್ರೀಮ್ ಕೋರ್ಟ್ ತನ್ನ ತೀರ್ಪಿನಲ್ಲಿ ಹೇಳಿರುವ ಮಾನದಂಡಗಳಿನುಸಾರವಾಗಿ ಒಳ ಮೀಸ ಲಾತಿ ಜಾರಿಗೊಳಿಸಲು ಮುಂದಾಗಿರುವ ರಾಜ್ಯ ಸರ್ಕಾರ ಏಕಸದಸ್ಯ ಆಯೋಗ ರಚಿಸಿ ಹೈಕೋರ್ಟ್ ನಿವೃತ್ತ ನ್ಯಾಯ ಮೂರ್ತಿಯೊಬ್ಬರನ್ನು ನೇಮಕ ಮಾಡಿ 3 ತಿಂಗಳೊಳಗಾಗಿ ವರದಿ ತರಿಸಿಕೊಳ್ಳಲು ತೀರ್ಮಾನಿಸಿರುವುದು ಸ್ವಾಗತಾರ್ಹ ಕ್ರಮವಾಗಿದೆ ಎಂದು ತುಮಕೂರು ಒಳ ಮೀಸಲಾತಿ ಹೋರಾಟ ಸಮಿತಿ ಮುಖಂಡ ರಾದ ಹೆಚ್.ಕೆಂಚಮಾರಯ್ಯ, ಡಾ. ಬಸವರಾಜು, ನರಸಿಂಹಯ್ಯ, ಕೆ.ನರಸಿಂಹ ಮೂರ್ತಿ ಮುಂತಾದವರು ತಿಳಿಸಿದರು.
ನಗರದಲ್ಲಿ ಇಂದು ಬೆಳಿಗ್ಗೆ ಸುದ್ದಿ ಗೋಷ್ಠಿ ನಡೆಸಿ ಮಾತನಾಡಿ, ಸರ್ಕಾರದ ಈ ನಿರ್ಧಾರ ಒಳ ಮೀಸಲಾತಿ ಜಾರಿಗೆ ಮೊದಲ ಹೆಜ್ಜೆ ಇಟ್ಟಿರುವುದು ಕಂಡು ಬಂದಿದ್ದು ಈ ದಿಟ್ಟ ನಿರ್ಧಾರ ಕೈಗೊಂಡ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಅವರ ಸಂಪುಟವನ್ನು ನಮ್ಮ ಸಮುದಾಯ ಅಭಿನಂದಿಸುತ್ತದೆ ಎಂದರು.
ನಮ್ಮ ಹಕ್ಕುಗಳನ್ನು ಸಂವಿಧಾನದತ್ತವಾದ ಮಾರ್ಗಗಳ ಮೂಲಕವೇ ಪಡೆಯಬೇಕು ಎಂದು ಹೇಳಿದ ಡಾ. ಬಿ.ಆರ್.ಅಂಬೇಡ್ಕರ್ ಅವರ ಮಾತಿನಂತೆಯೇ ನಡೆಯಬೇಕಾಗಿದ್ದು ನಮ್ಮ ಸಮುದಾಯ ಮೂರು ದಶಕಗಳಿಗಿಂತ ಹೆಚ್ಚು ಕಾಲ ಹೋರಾಟ ನಡೆಸಿಕೊಂಡು ಬಂದಿದ್ದು, ಇದರ ಫಲವಾಗಿ ಸುಪ್ರೀಮ್ ಕೋರ್ಟ್ 1-8-2024 ರಂದು ತೀರ್ಪು ನೀಡಿದ್ದು ಇನ್ನು 3 ತಿಂಗಳ ಕಾಲ ಕಾಯು ವುದು ಅನಿವಾರ್ಯವಾಗಿದೆ ಎಂದರು.
ಒಳ ಮೀಸಲಾತಿ ಜಾರಿಗೆ ಪರಿಶಿಷ್ಟ ಜಾತಿಯ ಉಪಪಂಗಡಗಳ ನಿಖರವಾದ ಅಂಕಿ ಅಂಶ ಅಥವಾ ದತ್ತಾಂಶವನ್ನು ಇಟ್ಟು ಕೊಂಡು ಮಾಡುವುದು ಮಾನದಂಡ ವಾಗಿದ್ದು, ಸುಪ್ರೀಮ್ ಕೋರ್ಟ್ ತೀರ್ಪಿನಲ್ಲಿ ಈ ಬಗ್ಗೆ ಸ್ಪಷ್ಠವಾಗಿ ಹೇಳಿರುವುದರಿಂದ ರಾಜ್ಯ ಸರ್ಕಾರ ಆಯೋಗ ರಚಿಸಿ ನಿಖರ ಮಾಹಿತಿಯೊಳಗೊಂಡ ವರದಿ ತರಿಸಿ ಕೊಳ್ಳಲು ನಿರ್ಧರಿಸಿರುವುದು ಸರಿಯಾಗಿದೆ ಎಂದರು.
ನೆರೆ ರಾಜ್ಯಗಳಾದ ತೆಲಗಾಂಣ, ಹರಿಯಾಣ ರಾಜ್ಯಗಳು ಸಹ ಒಳ ಮೀಸಲಾತಿ ಜಾರಿಗಾಗಿ ಆಯೋಗ ರಚಿಸಲು ನಿರ್ಧರಿಸಿದ್ದು ಇದಕ್ಕೆ ನಮ್ಮ ಜನಾಂಗ ಬದ್ಧವಾಗಿರಬೇಕು. ಬಿಜೆಪಿ ಪ್ರೇರಿತ ನಮ್ಮ ಸಮುದಾದಯ ಕೆಲವರು ವಿರೋಧ ವ್ಯಕ್ತಪಡಿಸುತ್ತಿದ್ದು ಇದಕ್ಕೆ ನಮ್ಮ ಸಮು ದಾಯದ ಯುವ ಜನಾಂಗ ಕಿವಿಗೊಡ ಬಾರದು ಹಾಗೂ ತಾಳ್ಮೆ ಕಳೆದುಕೊಳ್ಳ ಬಾರದು ಎಂಬ ಕಿವಿ ಮಾತು ಹೇಳಿದರು.
ರಾಜ್ಯ ಸರ್ಕಾರದ ಭರವಸೆ ಮೇಲೆ ವಿಶ್ವಾಸವಿಟ್ಟು ಇನ್ನು 3 ತಿಂಗಳ ಕಾಲ ಶಾಂತಿಯುತವಾಗಿ ಕಾಯುವಂತೆ ಮನವಿ ಮಾಡಿದರು. ಅವರು ಕೆಲವೇ ಬೆರೆಳೆಣಿಕೆ ಯಷ್ಟು ಜಾತಿಯವರು ಪಡೆಯುತ್ತಿದ್ದ ಮೀಸಲಾತಿ ಸೌಲಭ್ಯವನ್ನು ಆ ಸಮುದಾಯದ ಎಲ್ಲಾ ಜಾತಿಗಳಿಗೂ ತಲುಪಿಸಬೇಕೆಂಬುದು ಒಳ ಮೀಸಲಾತಿ ಮೂಲ ಉದ್ದೇಶವಾಗಿದೆ ಎಂದರು.
ಅವಕಾಶ ವಂಚಿತರಿಗೆ ಒಳ ಮೀಸಲಾತಿ ನೀಡಿ ಅವಕಾಶ ಕಲ್ಪಿಸುವುದು ಸಂವಿಧಾನದ ಆಶಯವಾಗಿದ್ದು, ಪ್ರಜಾಪ್ರಭುತ್ವದ ನಡೆಯು ಇದೆ ಆಗಿರುವುದರಿಂದ ಇಂತಹ ಕ್ರಾಂತಿಕಾರಕ ತೀರ್ಮಾನಗಳನ್ನು ತೆಗೆದುಕೊಂಡಾಗ ಪರ ಮತ್ತು ವಿರುದ್ಧವಾಗಿ ವಿರೋಧ ವ್ಯಕ್ತವಾಗುವುದು ಸಹಜ. ಈ ಬಗ್ಗೆ ಯಾರು ಆತಂಕ ಪಡುವ ಅಗತ್ಯವಿಲ್ಲ ಎಂದರು.
ನ್ಯಾಯಮೂರ್ತಿ ಎ.ಜೆ.ಸದಾಶಿವ ಆಯೋಗದ ವರದಿ ಮತ್ತು ಕಾಂತರಾಜ ವರದಿ ಸೇರಿದಂತೆ ಹಲವು ಆಯೋಗಗಳ ವರದಿಯಲ್ಲಿ ಒಳ ಮೀಸಲಾತಿ ಜಾರಿಗೆ ಬೇಕಾದ ಪೂರಕ ದತ್ತಾಂಶಗಳು ಇರುವುದರಿಂದ ಸರ್ಕಾರ ಅವುಗಳನ್ನು ಆಧರಿಸಿ ಒಳ ಮೀಸಲಾತಿ ಜಾರಿಗೆ ಮುಂದಾಗಬೇಕೆoದು ಮುಖಂಡರು ಒತ್ತಾಯಿಸಿದರು.
ದಲಿತ ಮುಖಂಡರಾದ ನರಸೀಯಪ್ಪ, ಡಿ.ಟಿ.ವೆಂಕಟೇಶ್, ಸಿದ್ದಲಿಂಗಪ್ಪ, ರಂಗಶಾಮಯ್ಯ, ಹೆಚ್.ಮಂಜು, ಗಂಗಾಧರ್, ಸುರೇಶ್ ಮುಂತಾದವರು ಸುದ್ದಿಗೋಷ್ಠಿಯಲ್ಲಿದ್ದರು.
ಒಳ ಮೀಸ ಲಾತಿ ಜಾರಿಗೊಳಿಸಲು ಮುಂದಾಗಿರುವ ರಾಜ್ಯ ಸರ್ಕಾರ
Leave a comment
Leave a comment