ತುಮಕೂರು:ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿಸಿ ಟ್ರಸ್ಟ್ (ರಿ) ತುಮಕೂರು, ಗ್ರಾಮಾಂತರ ತಾಲ್ಲೋಕು ಮತ್ತು ಜನ ಜಾಗೃತಿ ವೇದಿಕೆ ಸಹಕಾರದೊಂದಿಗೆ ಗಾಂಧಿ ಜಯಂತಿ ಪ್ರಯುಕ್ತ ದುಶ್ಚಟಮುಕ್ತ ಸಮಾಜದ ನಿರ್ಮಾಣಕ್ಕಾಗಿ ಗಾಂಧಿ ಸ್ಮೃತಿ ಕಾರ್ಯಕ್ರಮವನ್ನು ಕನ್ನಡ ಸಾಹಿತ್ಯ ಪರಿಷತ್ ಭವನದಲ್ಲಿ ನಡೆಸಲಾಯಿತು.
ಸಿದ್ದಗಂಗಾ ಮಠದ ಮಹಾಸ್ವಾಮಿಜಿಗಳಾದ ಶ್ರೀ ಶ್ರೀ ಸಿದ್ದಲಿಂಗ ಮಹಾಸ್ವಾಮೀಜಿಗಳು ಜನ ಜಾಗೃತಿ ಜಾಥಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಪೂಜ್ಯರು ಕೈಗೊಳ್ಳುವಂತಹ ಸಮಾಜಮುಖಿ ಕಾರ್ಯಕ್ರಮಗಳು ಶ್ಲಾಘನೀಯ ಎಂದು ಹರ್ಷ ವ್ಯಕ್ತಪಡಿಸಿ ಜಾಥಾದಲ್ಲಿ ಭಾಗವಹಿಸಿದ್ದ ಎಲ್ಲರಿಗೆ ಶುಭ ಆಶೀರ್ವಾದದ ಮೂಲಕ ಚಾಲನೆ ನೀಡಿದರು ಶ್ರೀ ಶಿವಕುಮಾರ ಸ್ವಾಮಿ ಸರ್ಕಲ್ ನಿಂದ ಕನ್ನಡ ಭವನದ ವರೆಗೆ ಹಲವಾರು ಘೋಷಣೆಗಳ ಮೂಲಕ ಯಶಸ್ವಿಯಾಗಿ ಜಾಥಾ ನಡೆಯಿತು. ಸಭಾಭವನದಲ್ಲಿ ಜಿಲ್ಲಾ ಜನಜಾಗೃತಿ ವೇದಿಕೆ ಎಲ್ಲ ಪದಾಧಿಕಾರಿಗಳೊಂದಿಗೆ ಸಭಾ ಕಾರ್ಯಕ್ರಮ ನೆರವೇರಿತು. ಈ ಸಂದರ್ಭದಲ್ಲಿ ನಿಕಟ ಪೂರ್ವ ಜನಜಾಗೃತಿ ವೇದಿಕೆ ರಾಜ್ಯಾಧ್ಯಕ್ಷರಾದ ಶ್ರೀಯುತ ವಿ.ರಾಮಸ್ವಾಮಿ ರವರು ಪೂಜ್ಯರು ಮಧ್ಯವರ್ಜನ ಶಿಬಿರಗಳ ಮೂಲಕ ಸಾವಿರಾರು ಕುಟುಂಬಗಳಿಗೆ ದಾರಿದೀಪವಾಗಿರುವ ಕುರಿತು ಸಂತಸ ವ್ಯಕ್ತಪಡಿಸಿದರು. ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ್ದ ಡಾ|| ಸಿಬಂತಿ ಪದ್ಮನಾಭ ಕೆ.ವಿ ಇವರು ಮಹಾತ್ಮ ಗಾಂಧೀಜಿಯವರ ಆದರ್ಶ ತತ್ವಗಳು ಜೀವನ ಚರಿತ್ರೆ ಹಾಗೂ ಗಾಂಧೀಜಿ ಮಹತ್ವದ ಕುರಿತು ತಿಳಿಸಿದರು. ಜಿಲ್ಲಾ ನಿರ್ದೇಶಕರಾದ ಶ್ರೀಮತಿ ದಯಾಶೀಲರವರು ಉತ್ತಮ ಸಮಾಜ ನಿರ್ಮಾಣ ಮಾಡುವಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಮಾಡುತ್ತಿರುವ ಹಲವಾರು ಕಾರ್ಯಕ್ರಮಗಳ ಕುರಿತು ವಿಶ್ಲೇಷಿಸಿ ಮಾರ್ಗದರ್ಶನ ನೀಡಿದರು.
ಈ ಸಭೆಗೆ ತುಮಕೂರು ನಗರದ ಶಾಸಕರಾದ ಜಿ.ಬಿ.ಜ್ಯೋತಿಗಣೇಶ್ ಅವರು ಕಾರ್ಯಕ್ರಮದಲ್ಲಿ ಜ್ಯೋತಿ ಬೆಳಗಿಸಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಜಿಲ್ಲಾ ಜನಜಾಗೃತಿ ವೇದಿಕೆ ಅಧ್ಯಕ್ಷರಾದ ಅಮರನಾಥ್ ಶೆಟ್ಟಿ, ಉಪಾಧ್ಯಕ್ಷರಾದ ಗಣೇಶ್ ಪ್ರಸಾದ್ ಸದಸ್ಯರುಗಳಾದ ಕುಮಾರ್, ಚಂದ್ರಶೇಖರ್, ಬಸವರಾಜು ಡಾ.ಸಂಜಯ್ ನಾಯಕ್ ಪ್ರಕಾಶ್ ಪಾಲ್ತೆ,ಪ್ರೇಮಾ ಹೆಗಡೆ, ದಯಾನಂದ್, ಪಾಂಡುರAಗ,ಲೋಕೇಶ್, ಕಾಮರಾಜ್ ಹಾಗೂ ತುಮಕೂರು ಯೋಜನಾಧಿಕಾರಿಗಳಾದ ಶ್ರೀಮತಿ ಸುನಿತಾ ಪ್ರಭು, ತುಮಕೂರು ಗ್ರಾಮಾಂತರ ಯೋಜನಾಧಿಕಾರಿಗಳಾದ ಸಂದೇಶ್ ಹಾಗೂ ಹೇಮಂತ್ ಮೇಲ್ವಿಚಾರಕರು,ಮೇಲ್ವಿಚಾರಕ ಶ್ರೇಣಿಯ ಸಿಬ್ಬಂದಿಗಳು ಸೇವಾ ಪ್ರತಿನಿಧಿಗಳು ಸಾರ್ವಜನಿಕರು ಉಪಸ್ಥಿತರಿದ್ದು ಕಾರ್ಯಕ್ರಮವನ್ನು ಯಶಸ್ವಿಯಾಗಿ ನೆರವೇರಿಸಲಾಯಿತು.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸಮಾಜಮುಖಿ ಕಾರ್ಯಕ್ರಮಗಳು ಶ್ಲಾಘನೀಯ-ಸಿದ್ದಗಂಗಾಶ್ರೀ
Leave a comment
Leave a comment