ತುಮಕೂರು ನಗರದ ಅಮಾನಿಕೆರೆ ಗಾಜಿನ ಮನೆ ಸಭಾಂಗಣದಲ್ಲಿ ಮಾನ್ಯ ಗೃಹಸಚಿವರು ಹಾಗೂ ಉಸ್ತುವಾರಿ ಸಚಿವರಾದ ಡಾ.ಜಿ ಪರಮೇಶ್ವರ್ರವರ ಅಧ್ಯಕ್ಷತೆಯಲ್ಲಿ ನಡೆದ ಜನತಾ ದರ್ಶನ ಕಾರ್ಯಕ್ರಮದಲ್ಲಿ ತುಮಕೂರು ಜಿಲ್ಲಾ ಕೊಳಗೇರಿ ನಿವಾಸಿಗಳ ಹಿತರಕ್ಷಣಾ ಸಮಿತಿಯಿಂದ ನಗರದ ಸ್ಲಂ ನಿವಾಸಿಗಳ ಜ್ವಾಲಂತ ಸಮಸ್ಯೆಗಳು ಹಾಗೂ ನಿವೇಶನ ವಂಚಿತ ಕುಟುಂಬಗಳ ಬೇಡಿಕೆಗಳನ್ನು ಈಡೇರಿಸಲು ಒತ್ತಾಯಿಸಿ ಮನವಿ ಸಲ್ಲಿಸಲಾಯಿತು.
ಸ್ಲಂ ಜನಾಂದೋಲನ ಕರ್ನಾಟಕ ಮತ್ತು ತುಮಕೂರು ಜಿಲ್ಲಾ ಕೊಳಗೇರಿ ನಿವಾಸಿಗಳ ಹಿತರಕ್ಷಣಾ ಸಮಿತಿಯು ನಗರದ ಸ್ಲಂ ನಿವಾಸಿಳ ಸಾಂವಿಧಾನಿಕ ಹಕ್ಕಿಗಾಗಿ ಅಂದರೇ ಮಾನವ ಘನತೆಯ ಬದುಕಿಗಾಗಿ ಸ್ಲಂ ನಿವಾಸಿಗಳನ್ನು ಸಂಘಟಿಸುತ್ತ ಹಲವು ಹೋರಾಟಗಳನ್ನು ಮಾಡುತ್ತ ಬರುತ್ತಿದ್ದು, ತುಮಕೂರು ನಗರ ದಿನೇ ದಿನೇ ವೇಗವಾಗಿ ಬೆಳೆಯುತ್ತಿದ್ದು ನಗರದಲ್ಲಿ ಶ್ರಮಿಕ ವರ್ಗವನ್ನು ಮೂಲೆಗುಂಪು ಮಾಡಲಾಗುತ್ತಿದೆ ನಗರ ಸುಂದರ ಮತ್ತು ಸ್ವಚ್ಛವಾಗಿಡಲು ಸ್ಲಂ ನಿವಾಸಿಗಳ ಕೊಡುಗೆ ಅಪಾರ ಆದರೆ ನಗರದ ಆಡಳಿತ ವ್ಯವಸ್ಥೆ ಹಲವು ಕಾರಣಗಳಿಂದ ಸ್ಲಂ ಜನರ ಅಭಿವೃದ್ಧಿ ಕುಂಟಿತಕ್ಕೆ ನೇರ ಹೊಣೆಯಾಗಿರುತ್ತದೆ. ಕಾರ್ಯದರ್ಶಿ ಅರುಣ್ ಅಸಮಾದಾನ ವ್ಯಕ್ತ ಪಡಿಸಿ ಸಾರ್ವಜನಿಕರ ಸಮಸ್ಯೆಗಳನ್ನು ಬಗೆಹರಿಸಲು ಜಿಲ್ಲಾ ಮಟ್ಟದ ಜನತಾ ದರ್ಶನ ಹಮ್ಮಿಕೊಂಡಿರುವುದು ಅಭಿನಂದಾರ್ಹವಾಗಿದೆ, ತುಮಕೂರು ನಗರದ ವಾರ್ಡ್ ಸಂಖ್ಯೆ: ೨೧ರ ಭಾರತಿ ನಗರ, ವಾರ್ಡ್ ಸಂಖ್ಯೆ,೧ರ ಎಸ್.ಎನ್ ಪಾಳ್ಯ, ವಾರ್ಡ್ ಸಂಖ್ಯೆ: ೨ರ ಅಮಾನಿಕೆರೆ ಕೋಡಿ ಹಳ್ಳ ಸ್ಲಂಗಳು ಮಳೆ ಬಂದ ಸಂದರ್ಭದಲ್ಲಿ ಜೀವನ ಅಸ್ತವ್ಯಸ್ಥಗೊಳ್ಳುತ್ತಿದ್ದು ತಾತ್ಕಾಲಿಕ ತಡೆಗೋಡೆ ನಿರ್ಮಾಣ ಮಾಡಬೇಕು ಮತ್ತು ನಗರದಲ್ಲಿ ಬಾಡಿಗೆ ಮನೆಗಳಲ್ಲಿ ವಾಸ ಮಾಡುತ್ತಿರುವ ಅಸಂಘಟಿತ ವಲಯಗಳಲ್ಲಿ ದುಡಿಯುತ್ತಿರುವ ೪೦೦ ಒಂಟಿ ಮಹಿಳೆಯರಿಗೆ ನಿವೇಶನ ನೀಡಬೇಕು, ಹಾಗೂ ಎಳ್ಳರಬಂಡೆ, ಎಸ್,ಎನ್ ಪಾಳ್ಯ, ಎನ್,ಆರ್ ಕಾಲೋನಿ, ಭಾರತಿ ನಗರ ಸ್ಲಂಗಳನ್ನು ಕರ್ನಾಟಕ ಕೊಳಗೇರಿ ಅಬಿವೃದ್ಧಿ ಕಾಯಿದೆ -೧೯೭೩ ಕಲಂ ೩ರಡಿಯಲ್ಲಿ ಘೋಷಣೆ ಮಾಡಬೇಕು, ನಗರದ ಸಂಪಾಧನೆ ಮಠ ಸ್ಲಂನ ೬ ಕುಟುಂಬಗಳಿಗೆ ಮಕ್ಕಳ ಶೈಕ್ಷಣೀಕ ಹಿತದೃಷ್ಠಿಯಿಂದ ವಿದ್ಯುತ್ ಸಂಪರ್ಕ ನೀಡಬೇಕು, ದಿಬ್ಬೂರು ದೇವರಾಜ್ ಅರಸು ಬಡಾವಣೆ ೧೨೦೦ ಜಿ+೨ ಮನೆಗಳ ನಿವಾಸಿಳಿಗೆ ಬಸ್ ವ್ಯವಸ್ಥೆ ಮೂಲಭೂತ ಸೌಕರ್ಯ, ಹಾಗೂ ಮನೆಹಂಚಿಕಾತಿ ಪತ್ರ ನೀಡಬೇಕು, ಬನಶಂಕರಿ ಕುಮುಟ್ಟಯ್ಯನ ಬಡಾವಣೆ ಇಸ್ಮಾಯಿಲ್ ನಗರ ಹಂದಿಜೋಗಿ ೩೫ ಕುಟುಂಬಗಳಿಗೆ ಪುನರ್ ವಸತಿಗೊಳಿಸಲು ತುರ್ತು ಕ್ರಮವಹಿಸುವಂತೆ ಒತ್ತಾಯಿಸಿದರು.
ಮನವಿ ಸ್ವೀಕರಿಸಿ ಸಕಾರಾತ್ಮಕವಾಗಿ ಸ್ಪಂಧಿಸಿದ ಮಾನ್ಯ ಜಿಲ್ಲಾ ಉಸ್ತುವಾರಿ ಸಚಿರಾದ ಡಾ.ಜಿ ಪರಮೇಶ್ವರ್ ರವರು ನಗರದ ಸ್ಲಂ ನಿವಾಸಿಗಳ ಅಭಿವೃದ್ಧಿಗೆ ಮತ್ತು ನಿವೇಶನ ವಂಚಿತ ಕುಟುಂಬಗಳಿಗೆ ಪರಿಹಾರ ಕಂಡುಕೊಳ್ಳಲು ಸಂಬAಧಪಟ್ಟ ಜಿಲ್ಲಾಡಳಿತ ಮತ್ತು ತುಮಕೂರು ಮಹಾನಗರ ಪಾಲಿಕೆ ಅಧಿಕಾರಿಗಳಿಗೆ ಸ್ಥಳದಲ್ಲಿಯೇ ಸೂಚನೆ ನೀಡಿದರು, ಇದಕ್ಕೆ ಪ್ರತಿಕ್ರಿಯಿಸಿದ ಮಾನ್ಯ ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್ ರವರು ಇಸ್ಮಾಯಿಲ್ ನಗರ ಹಂದಿ ಜೋಗಿ ಕುಟುಂಬಗಳಿಗೆ ಪುನರ್ ವಸತಿಗೊಳಿಲು ಈಗಾಗಲೇ ಜಾಗ ಹುಡುಕಿ ಕ್ರಮವಹಿಸಲಾಗಿದೆ, ತುಮಕೂರು ನಗರ ಸ್ಲಂ ನಿವಾಸಿಗಳ ಸಮಸ್ಯೆಗಳನ್ನು ಹಂತ ಹಂತವಾಗಿ ಬಗೆಹರಿಸಲಾಗುವುದು, ಸ್ಲಂ ಘೋಷಣೆ ದಿಬ್ಬೂರು ದೇವರಾಜ್ ಅರಸು ಬಡಾವಣೆ ಸಾರ್ವಜನಿಕ ಬಸ್ ವ್ಯವಸ್ಥೆ ಮತ್ತು ಹಂಚಿಕಾತಿ ಪತ್ರ ನೀಡಲು ಸಂಬAಧಪಟ್ಟ ಅಧಿಕಾರಿಗಳಿಗೆ ಸೂಚಿಸುವೆ ಎಂದರು.
ಈ ಸಂದರ್ಭದಲ್ಲಿ ನಿವೇಶನ ಹೋರಾಟ ಸಮಿತಿಯ, ಮಂಗಳಮ್ಮ, ರತ್ನಮ್ಮ, ಹನುಮಕ್ಕ,ಸುಧಾ, ಕೃಷ್ಣಮೂರ್ತಿ ಹಾಗೂ ಎಸ್.ಎನ್ ಪಾಳ್ಯದ ಗುಲ್ನಾಜ್,ನರಸಿಂಹಮೂರ್ತಿ, ಜಯಣ್ಣ, ಅಮಾನಿಕೆರೆ ಕೋಡಿಹಳ್ಳದ ಗೋವಿಂದರಾಜ್, ಮಂಜುನಾಥ್, ವೆಂಕಟೇಶ್,ಅಶ್ವಥ್, ಇಸ್ಮಾಯಿಲ್ ನಗರ ಹಂದಿ ಜೋಗಿ ಶಾಖೆ ಸಮಿತಿಯ ಚಿಕ್ಕಗಂಗಮ್ಮ, ವೆಂಕಟೇಶ್, ಭಾರತಿ ನಗರದ ಶಾಬುದ್ದೀನ್, ಹನುಮಕ್ಕ, ಲತಾ, ಕೆಂಪಣ್ಣ, ಸಂಪಾಧನೆ ಮಠ ಸ್ಲಂನ ವಿಜಯ್ಕುಮಾರ್,ನಾಗರತ್ನಮ್ಮ,ಅನ್ನಪೂರ್ಣಮ್ಮ,