ಡಾ|| ಬಾಬಾ ಸಾಹೇಬ್ ಅಂಬೇಡ್ಕರ್ ಕುರಿತ ಕ್ರಾಂತಿ ಗೀತೆ ಹಾಡಿದ ಸ್ಲಂ ಕಲಾತಂಡಕ್ಕೆ ಜಿಲ್ಲಾಧಿಕಾರಿಗಳಿಂದ ಸಂವಿಧಾನ ಪ್ರತಿ ನೀಡಿ ಗೌರವಿಸಲಾಯಿತು
ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ನಡೆದ ಡಾ|| ಬಿ.ಆರ್ ಅಂಬೇಡ್ಕರ್ ರವರ 133ನೇ ಜಯಂತಿಯಲ್ಲಿ ತುಮಕೂರು ಸ್ಲಂ ಸಮಿತಿಯ ಕಲಾತಂಡ ಅಂಬೇಡ್ಕರ್ ಕುರಿತು ಹಾಡಿದ ಕ್ರಾಂತಿ ಗೀತೆಗೆ ಪ್ರಶಂಸಿಸಿ ಅರುಣ್ ಟಿ.ಜಿ ಮತ್ತು ತಿರುಮಲಯ್ಯ, ಕೃಷ್ಣಮೂರ್ತಿ ರವರಿಗೆ ಸಂವಿಧಾನ ಪ್ರತಿ ನೀಡಿ ಗೌರವಿಸಿದರು ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಸಿ.ಇ.ಓ ಪ್ರಭು, ಅಪಾರ ಜಿಲ್ಲಾಧಿಕಾರಿಯಾದ ಶಿವಾನಂದ ಕರಾಳೆ, ಉಪವಿಭಾಗಾಧಿಕಾರಿಯಾದ ಗೌರವಶೆಟ್ಟಿ, ಹಾಗೂ ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ಧೇಶಕರಾದ ಕೃಷ್ಣಪ್ಪ, ನಗರಾಭಿವೃದ್ಧಿ ಕೋಶದ ಆಂಜಿನಪ್ಪ, ಸ್ಲಂ ಜನಾಂದೋಲನ ಕರ್ನಾಟಕದ ಎ.ನರಸಿಂಹಮೂರ್ತಿ ಉಪಸ್ಥಿತರಿದ್ದರು.