ಮಕ್ಕಳನ್ನು ಮಾದಕ ವ್ಯಸನಗಳಿಂದ ದೂರ ಇರಿಸಲು ಪೋಷಕರ ಪಾತ್ರ ಅತ್ಯಗತ್ಯವೆಂದು ಕಾಂಗ್ರೆಸ್ ಮುಖಂಡರು, ಕೌಶಲ್ಯ ಅಭಿವೃದ್ಧಿ ಮಾಜಿ ಅಧ್ಯಕ್ಷರು ಆದ ಮುರಳೀಧರ ಹಾಲಪ್ಪರವರು ಕಿವಿ ಮಾತು ಹೇಳಿದ್ದಾರೆ.
ಭಗವಾನ್ ಪುಟ್ಟಪರ್ತಿ ಸಾಯಿ ಬಾಬಾರವರ ಜನ್ಮವರ್ಧಂತಿ ಮಹೋತ್ಸವ ಪ್ರಯುಕ್ತ ಡಾ. ರಾಧಾಕೃಷ್ಣ ರಸ್ತೆಯಲ್ಲಿರುವ ಶ್ರೀ ಸತ್ಯಸಾಯಿ ಧ್ಯಾನ ಮಂದಿರದಲ್ಲಿ ಏರ್ಪಡಿಸಲಾಗಿದ್ದ ವಿಶೇಷ ಸತ್ಸಂಗ ಮತ್ತು ಜನ್ಮ ವರ್ಧಂತಿ ಮಹೋತ್ಸವ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿದರು.
ತಾವು ಸ್ವತಃ ಬಾಬಾ ಭಕ್ತರಾಗಿದ್ದು ತಮ್ಮ ಬಾಲ್ಯದ ಜೀವನದಲ್ಲಿ ಪ್ರತಿ ನಿತ್ಯ ಸಂಜೆ ಸಮಯದಲ್ಲಿ ತಮ್ಮ ಪೋಷಕರೊಡನೆ ದೇವಸ್ಥಾನಗಳಿಗೆ ತೆರಳಿ ದೇವರ ದರ್ಶನ ಮಾಡಿಕೊಂಡು ಬಂದು ಮನೆಯಲ್ಲಿ ಪಠ್ಯಗಳನ್ನು ಓದುವ ಕಾರ್ಯ ಮಾಡುತ್ತಿದ್ದೇವು, ಆದರೆ ಇತ್ತೀಚಿನ ದಿನಗಳಲ್ಲಿ ಮಕ್ಕಳನ್ನು ಪೋಷಕರು ದೇವಸ್ಥಾನಗಳಿಗೆ ಕರೆದುಕೊಂಡು ಹೋಗದೇ ಇರುವುದು ಕಾಣುತ್ತಿದ್ದೇವೆ ಎಂದರು.

ಇತ್ತಿಚಿನ ದಿನಗಳಲ್ಲಿ ಮಕ್ಕಳಿಗೆ ಆಧ್ಯಾತ್ಮಿಕ ಪರಿಕಲ್ಪನೆ ಇಲ್ಲದೇ ಇರುವುದು ಹೆಚ್ಚಾಗಿ ಕಾಣಸಿಗುತ್ತಿದೆ ಜೊತೆಗೆ ಇತ್ತೀಚಿನ ದಿನಗಳಲ್ಲಿ ಮಕ್ಕಳು ಮಾದಕ ದ್ರವ್ಯಗಳಿಗೆ (ಡ್ರಗ್ಸ್) ವ್ಯಸನರಾಗುತ್ತಿರುವುದನ್ನು ಹೆಚ್ಚಿನದಾಗಿ ಕಾಣುತ್ತಿದ್ದೇವೆ, ಏಕೆಂದರೆ ಶಾಲಾ ಮಟ್ಟದ ಹೆಚ್ಚಿನದಾಗಿ ಹೈಸ್ಕೂಲ್ ವಿದ್ಯಾರ್ಥಿಗಳು ಸಹ ಮಾದಕ ದ್ರವ್ಯಗಳಿಗೆ ವ್ಯಸನರಾಗುತ್ತಿದ್ದಾರೆ. ಇನ್ನೂ ಕಾಲೇಜು ಮಟ್ಟದ ವಿದ್ಯಾರ್ಥಿಗಳಲ್ಲಿ ಹೆಚ್ಚಿನದಾಗಿ ಕಾಣ ಸಿಗುತ್ತಿದೆ, ಈ ಮಾದಕ ವ್ಯಸನ ಇತ್ತೀಚನ ದಿನಗಳಲ್ಲಿ ಬಹಳಷ್ಟು ಹರಡಿದೆ, ಈ ಹಿಂದಿನ ದಿನಗಳಲ್ಲಿ ಮಧ್ಯ ವ್ಯಸನಿಗಳು, ಧೂಮಪಾನಕ್ಕೆ ದಾಸರಾಗುತ್ತಿದ್ದು, ಇತ್ತೀಚಿನ ಹೈಟೆಕ್ ದಿನಗಳಲ್ಲಿ ಮಾದಕ ವ್ಯಸನಗಳಿಗೆ ದಾಸರಾಗುತ್ತಿದ್ದಾರೆ.
ಇಂತಹ ಮಾದಕ ವ್ಯಸನಗಳಿಂದ ಮಕ್ಕಳನ್ನು ದೂರ ಇರಿಸುವಲ್ಲಿ ಪೋಷಕರ ಪಾತ್ರ ಅತ್ಯಂತ ಹಿರಿಯದಾಗಿರುತ್ತದೆ, ಏಕೆಂದರೆ ಮಕ್ಕಳ ದೈನಂದಿನ ಚಲನವಲನಗಳ ಮೇಲೆ ನಿಗಾ ವಹಿಸುವುದು ಪೋಷಕರ ಪಾತ್ರ ಮಹತ್ತರದ್ದಾಗಿರುತ್ತದೆ ಎಂದರು.
ಇನ್ನು ಈಗಾಗಲೇ ಸ್ಥಳೀಯ ಜಿಲ್ಲಾಡಳಿತದಿಂದ ಅಂದರೆ ಜಿಲ್ಲಾಧಿಕಾರಿಗಳು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು, ಪಾಲಿಕೆ ಆಯುಕ್ತರು, ಶಿಕ್ಷಣ ಇಲಾಖೆಯನ್ನೊಳಗೊಂಡ ತಂಡವನ್ನು ರಚಿಸಲಾಗಿದ್ದು, ಈ ಕುರಿತು ನಮ್ಮ ಸರ್ಕಾರ ಕ್ರಮ ಕೈಗೊಂಡಿದೆ ಎಂದು ತಿಳಿಸಿದರು.